ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಖಶೋಗಿ ಹತ್ಯೆ: ಜವಾಬ್ದಾರಿ ಹೊರುತ್ತೇನೆ, ಆದರೆ... ಯುವರಾಜನ ಹೊಸ ರಾಗ

|
Google Oneindia Kannada News

ನ್ಯೂಯಾರ್ಕ್, ಸೆಪ್ಟೆಂಬರ್ 30: ಪ್ರಸಿದ್ಧ ಪತ್ರಕರ್ತ ಜಮಲ್ ಖಶೋಗಿ ಅವರ ಹತ್ಯೆಯ ಹೊಣೆಯನ್ನು ನಾನು ಹೊತ್ತುಕೊಳ್ಳುತ್ತೇನೆ. ಆದರೆ ಅದಕ್ಕೆ ಆದೇಶ ನೀಡಿದ್ದು ನಾನು ಎಂಬ ಆರೋಪವನ್ನು ನಾನೆಂದಿಗೂ ಒಪ್ಪಿಕೊಳ್ಳುವುದಿಲ್ಲ ಎಂದು ಸೌದಿ ಅರೇಬಿಯಾ ಯುವರಾಜ ಮೊಹಮ್ಮದ್ ಬಿನ್ ಸಲ್ಮಾನ್ ಹೇಳಿದ್ದಾರೆ.

ಖ್ಯಾತ ಪತ್ರಕರ್ತ ಜಮಲ್ ಖಶೋಗಿ ಕೊಲೆ ನನ್ನ ಕಣ್ಣೆದುರಲ್ಲೇ ನಡೆದಿತ್ತು ಎಂಬ ಸ್ಫೋಟಕ ಸತ್ಯವನ್ನು ಯುವ ರಾಜ ಸಲ್ಮಾನ್ ಇತ್ತೀಚೆಗೆ ಒಪ್ಪಿಕೊಂಡಿದ್ದರು.

ಖಶೋಗಿ ಕೊಲೆಯಾಗಿದ್ದು ನನ್ನೆದುರಲ್ಲೇ! ಸ್ಪೋಟಕ ಸತ್ಯ ಒಪ್ಪಿಕೊಂಡ ಸೌದಿ ರಾಜಖಶೋಗಿ ಕೊಲೆಯಾಗಿದ್ದು ನನ್ನೆದುರಲ್ಲೇ! ಸ್ಪೋಟಕ ಸತ್ಯ ಒಪ್ಪಿಕೊಂಡ ಸೌದಿ ರಾಜ

"ಕಶೋಗಿ ಹತ್ಯೆಗೆ ಸಂಬಂಧಿಸಿದ ಎಲ್ಲಾ ಜವಾಬ್ದಾರಿಯನ್ನೂ ನಾನೇ ಹೊತ್ತುಕೊಳ್ಳುತ್ತೇನೆ. ಏಕೆಂದರೆ ಆ ಕೊಲೆ ನಡೆದಿದ್ದು ನನ್ನ ಕಣ್ಣೆದುರಲ್ಲೇ" ಎಂದು ಮೊಹಮ್ಮದ್ ಬಿನ್ ಸಲ್ಮಾನ್ ಹೇಳಿದ್ದರು. ಅವರ ಈ ಹೇಳಿಕೆ ಅಂತಾರಾಷ್ಟ್ರೀಯ ಮಟ್ತದಲ್ಲಿ ಭಾರೀ ಸಂಚಲನವನ್ನುಂಟು ಮಾಡಿತ್ತು.

Khashoggi Death: Saudi Prince says He did not order it

ಅಕ್ಟೋಬರ್ 2ರಂದು ಟರ್ಕಿ ಮೂಲದ ಪತ್ನಿ ಹಾಟಿಸ್ ಸೆಂಗಿಜ್ ಅವರೊಂದಿಗಿನ ವಿವಾಹಕ್ಕೆ ಸಂಬಂಧಿಸಿದ ದಾಖಲೆಗಳನ್ನು ಪಡೆಯಲು ಟರ್ಕಿಯ ರಾಜಧಾನಿ ಇಸ್ತಾಂಬುಲ್ ನಲ್ಲಿರುವ ಸೌದಿ ಅರೆಬಿಯಾದ ರಾಯಭಾರ ಕಚೇರಿಗೆ ತೆರಳಿದ್ದ ಖಶೋಗಿ ನಂತರ ಹೊರಬರಲೇ ಇಲ್ಲ. ಅವರು ಏನಾದರೂ? ಬದುಕಿದ್ದಾರೆಯೇ? ಕೊಲೆ ಮಾಡಲಾಗಿದೆಯೇ ಎಂಬ ಯಾವ ಸುಳಿವೂ ದೊರಕಿರಲಿಲ್ಲ.

ಪತ್ರಕರ್ತನ ನಿಗೂಢ ನಾಪತ್ತೆ, ರಾಯಭಾರ ಕಚೇರಿಯಲ್ಲೊಂದು ಥ್ರಿಲ್ಲರ್ ಘಟನೆ!ಪತ್ರಕರ್ತನ ನಿಗೂಢ ನಾಪತ್ತೆ, ರಾಯಭಾರ ಕಚೇರಿಯಲ್ಲೊಂದು ಥ್ರಿಲ್ಲರ್ ಘಟನೆ!

ಈ ಪ್ರಕರಣದ ತನಿಖೆಗೆಂದು ವಿಶ್ವಸಂಸ್ಥೆಯಿಂದ ವಿಶೇಷವಾಗಿ ನೇಮಕವಾಗಿದ್ದ ಆಗ್ನೇಸ್ ಕಲ್ಲಾಮರ್ಡ್ ಎಂಬ ಮಹಿಳಾ ಅಧಿಕಾರಿ 100 ಪುಟಗಳ ವರದಿ ಸಲ್ಲಿಸಿದ್ದರು. ಖಶೋಗಿ ಅವರನ್ನು ಉದ್ದೇಶಪೂರ್ವಕವಾಗಿ, ಯೋಜನಾಬದ್ಧವಾಗಿ ಹತ್ಯೆ ಮಾಡಲಾಗಿದೆ. ಅಂತಾರಾಷ್ಟ್ರೀಯ ಮಾನವ ಹಕ್ಕು ಕಾಯ್ದೆಯಡಿಯಲ್ಲಿ ಸೌದಿ ಅರೇಬಿಯಾ ಈ ಕಗ್ಗೊಲೆಗೆ ಜವಾಬ್ದಾರಿಯಾಗಿದೆ ಎಂದು ವರದಿಯಲ್ಲಿ ಹೇಳಲಾಗಿತ್ತು.

English summary
Saudi Arabia Prince Mohammed bin Salman said, He will take full responsibility of Journalist Jamal Khashoggi but denied allegations that he ordered it.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X