Gautam Adani: ಅದಾನಿಗೆ ದೊಡ್ಡ ಶಾಕ್‌ ಕೊಟ್ಟ ಕೀನ್ಯಾ!

ಏಷ್ಯಾದ ಶ್ರೀಮಂತ ಉದ್ಯಮಿಯಾಗಿರುವ ಭಾರತದ ಗೌತಮ್ ಅದಾನಿ ವಿರುದ್ಧ ಅಮೆರಿಕಾ ಲಂಚ ಮತ್ತು ವಂಚನೆ ಆರೋಪ ಮಾಡಿ ಸಂಚಲನ ಸೃಷ್ಟಿಸಿದೆ. ಈ ಬೆಳವಣಿಗೆ ನಡುವೆಯೇ ಅದಾನಿ ಗ್ರೂಪ್ ಜೊತೆಗಿನ ಒಪ್ಪಂದಗಳನ್ನು ರದ್ದು ಮಾಡುವ ಮೂಲಕ ಕೀನ್ಯಾ ದೊಡ್ಡ ಶಾಕ್‌ ನೀಡಿದೆ.

ಅದಾನಿ ಗ್ರೂಪ್ ಜೊತೆಗಿನ ವಿಮಾನ ನಿಲ್ದಾಣ ಮತ್ತು ವಿದ್ಯುತ್ ಒಪ್ಪಂದಗಳನ್ನು ರದ್ದುಗೊಳಿಸಿರುವುದಾಗಿ ಕೀನ್ಯಾ ಅಧ್ಯಕ್ಷ ವಿಲಿಯಂ ರುಟೊ ಇಂದು ಹೇಳಿದ್ದಾರೆ. ನಮ್ಮ ತನಿಖಾ ಸಂಸ್ಥೆಗಳು ಹಾಗೂ ವಿವಿಧ ರಾಷ್ಟ್ರಗಳು ಒದಗಿಸಿದ ಇತ್ತೀಚಿನ ಮಾಹಿತಿ ಆಧರಿಸಿ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ ಎಂದು ರುಟೊ ಸ್ಪಷ್ಟನೆ ನೀಡಿದ್ದಾರೆ.

Kenya Has Canceled All Contracts With The Adani Group

ಅದಾನಿ ಸಮೂಹವು ಕೀನ್ಯಾದಲ್ಲಿ 30 ವರ್ಷಗಳವರೆಗೆ ಏರ್‌ಪೋರ್ಟ್‌ ನಿರ್ವಹಿಸುವ, ಹೆಚ್ಚುವರಿ ರನ್‌ವೇ ಮತ್ತು ಟರ್ಮಿನಲ್ ನಿರ್ಮಾಣ ಸೇರಿದಂತೆ, ರಾಜಧಾನಿ ನೈರೋಬಿಯ ಏರ್‌ಪೋರ್ಟ್‌ ನವೀಕರಣ ಸಂಬಂಧ ಒಪ್ಪಂದಕ್ಕೆ ಸಹಿ ಮಾಡಿತ್ತು ಎನ್ನಲಾಗಿದೆ. ಅಲ್ಲದೆ ಈ ಹಿಂದೆ ಕೀನ್ಯಾದಲ್ಲೂ ಈ ಒಪ್ಪಂದಕ್ಕೆ ಸಹಿ ಹಾಕುವ ಸಂದರ್ಭದಲ್ಲಿ ಅದಾನಿ ಸಂಸ್ಥೆಯ ವಿರುದ್ಧ ಭಾರಿ ವಿರೋಧವೂ ವ್ಯಕ್ತವಾಗಿತ್ತು. ಅಲ್ಲಿನ ಏರ್‌ಪೋರ್ಟ್‌ ಸಿಬ್ಬಂದಿ ಪ್ರತಿಭಟನೆ ಕೂಡ ನಡೆಸಿದ್ದರು ಎನ್ನಲಾಗಿದೆ.

ಕೀನ್ಯಾದಲ್ಲಿ ವಿದ್ಯುತ್ ಪೂರೈಕೆ ಸಂಬಂಧವೂ ಅದಾನಿ ಗ್ರೂಪ್ ಜತೆ ಒಪ್ಪಂದ ನಡೆದಿತ್ತು. ಆದರೆ, ಈ ಪ್ರಕ್ರಿಯೆಯಲ್ಲಿ ಕೀನ್ಯಾದ ಕಡೆಯಿಂದ ಯಾವುದೇ ಲಂಚ ಅಥವಾ ಭ್ರಷ್ಟಾಚಾರ ನಡೆದಿಲ್ಲ ಎಂದು ಕೀನ್ಯಾ ಸ್ಪಷ್ಟನೆ ನೀಡಿದೆ.

Kenya Has Canceled All Contracts With The Adani Group

ಸೋಲಾರ್‌ ವಿದ್ಯುತ್‌ ಗುತ್ತಿಗೆಗೆ ಸಂಬಂಧಿಸಿದಂತೆ ಶತಕೋಟಿ ಡಾಲರ್‌ ಲಂಚ ಹಾಗೂ ವಂಚನೆ ಪ್ರಕರಣದಲ್ಲಿ ಉದ್ಯಮಿ ಗೌತಮ್ ಅದಾನಿ ಹಾಗೂ ಅವರ ಸೋದರಳಿಯ ಸಾಗರ್ ಅದಾನಿ ಅವರ ವಿರುದ್ಧ ಅಮೇರಿಕಾ ಕೋರ್ಟ್‌ ಅರೆಸ್ಟ್‌ ವಾರಂಟ್‌ ನೀಡಿದೆ. ಭಾರತದಲ್ಲಿ ಬೃಹತ್ ಸೌರ ವಿದ್ಯುತ್ ಉತ್ಪಾದನಾ ಘಟಕ ಸ್ಥಾಪನೆಗಾಗಿ 2 ಶತಕೋಟಿ ಅಮೆರಿಕನ್ ಡಾಲರ್‌ ಹೂಡಿಕೆ ಆಕರ್ಷಿಸಲು ಭಾರತದ ಸರ್ಕಾರಿ ಅಧಿಕಾರಿಗಳಿಗೆ ಲಂಚ ನೀಡಿರುವುದು ಹಾಗೂ ಅಮೆರಿಕಾ ಸೇರಿ ವಿದೇಶಿ ಹೂಡಿಕೆದಾರರಿಗೆ ತಪ್ಪು ಮಾಹಿತಿ ನೀಡಿರುವ ಆರೋಪ ಕೂಡ ಅದಾನಿ ಅವರ ಮೇಲಿದೆ.

ಗೌತಮ್ ಅದಾನಿ ವಿರುದ್ಧದ ಆರೋಪಗಳ ಬಗ್ಗೆ ಸಿಬಿಐ ತನಿಖೆ ಆಗಬೇಕು ಎಂದು ಸಿಪಿಎಂ ಪಕ್ಷ ಆಗ್ರಹಿಸಿದೆ. ಸರ್ಕಾರಿ ನೌಕರರಿಗೆ ಭಾರಿ ಪ್ರಮಾಣದ ಲಂಚದ ಆಮಿಷ ಒಡ್ಡಿರುವುದು ಅಮೆರಿಕಾದಲ್ಲಿ ಬಹಿರಂಗವಾಗಿದೆ. ಆದರೆ ಭಾರತದಲ್ಲಿ ಅದು ಆಗದಿರುವುದು ನಾಚಿಕೆಗೇಡಿನ ಸಂಗತಿ. ಮೋದಿ ಸರ್ಕಾರ ಇನ್ನು ಮುಂದೆ ಸತ್ಯವನ್ನು ಮುಚ್ಚಿಡಲು ಸಾಧ್ಯವಿಲ್ಲ ಎಂದು ವಾಗ್ದಾಳಿ ನಡೆಸಿದೆ. ಗೌತಮ್ ಅದಾನಿ ಮತ್ತು ಅವರ ಉದ್ಯಮಕ್ಕೆ ಮೋದಿ ಸರ್ಕಾರದಿಂದ ಸಂಪೂರ್ಣ ರಕ್ಷಣೆಯೂ ಇದೆ ಎಂದು ಆರೋಪಿಸಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+