Russia & Ukraine: ‘ಬ್ರಿಕ್ಸ್’ ಶೃಂಗಸಭೆ ನಡೆದಿದ್ದ ನಗರದ ಮೇಲೆ ಭೀಕರ ದಾಳಿ, ಬೃಹತ್ ಕಟ್ಟಡ ಧಗಧಗ!

ರಷ್ಯಾ ಮೇಲೆ ಉಕ್ರೇನ್ ತನ್ನ ಡ್ರೋನ್‌ಗಳ ಮೂಲಕ ಭೀಕರ ಅಟ್ಯಾಕ್ ನಡೆಸಿದ್ದು, 9/11ರ ಅಮೆರಿಕ ಮೇಲಿನ ಭೀಕರ ದಾಳಿ ನೆನಪು ಮಾಡುವಂತೆ ಅಟ್ಯಾಕ್ ಆಗಿದೆ. ಸುಮಾರು 8 ಡ್ರೋನ್ ಬಳಸಿ ಈ ರೀತಿಯ ಡೆಡ್ಲಿ ಅಟ್ಯಾಕ್ ಮಾಡಿರುವ ಆರೋಪ ಇದೀಗ ಕೇಳಿ ಬಂದಿದೆ. ಹಾಗೇ, ಈ ದಾಳಿ ತೀವ್ರತೆಗೆ 'ಬ್ರಿಕ್ಸ್' ಶೃಂಗಸಭೆ ನಡೆದಿದ್ದ ರಷ್ಯಾ ದೇಶದ ನಗರ ಖಜಾನ್ ಇದೀಗ ನಲುಗಿ ಹೋಗಿದೆ. ಹಾಗಾದ್ರೆ ರಷ್ಯಾ ದೇಶದಲ್ಲಿ ಆಗಿದ್ದೇನು? ಬನ್ನಿ ತಿಳಿಯೋಣ.

ರಷ್ಯಾ & ಉಕ್ರೇನ್ ನಡುವೆ ಎಂತಹ ಕ್ರೂರ ಯುದ್ಧ ನಡೆಯುತ್ತಿದೆ ಎಂಬುದನ್ನು ಈಗ ಬಿಡಿಸಿ ಹೇಳಬೇಕಿಲ್ಲ. ಯಾಕಂದ್ರೆ ಕಳೆದ 2 ವರ್ಷ 10 ತಿಂಗಳು ಅಂದ್ರೆ 1000ಕ್ಕೂ ಹೆಚ್ಚು ದಿನಗಳಿಂದ ಇಬ್ಬರ ನಡುವಿನ ಬಡಿದಾಟವನ್ನು ಇಡೀ ಜಗತ್ತೇ ಕಣ್ತುಂಬಿಕೊಂಡಿದೆ. ಹೀಗಿದ್ದರೂ ಯುದ್ಧ ನಿಲ್ಲಿಸಲು ಯಾವುದೇ ರೀತಿ ಪ್ರಯತ್ನಗಳು ನಡೆಯುತ್ತಿಲ್ಲ, ಎಂಬ ಆರೋಪ ಇದೆ. ಒಂದು ಕಡೆ ಅಮೆರಿಕದ ಸಹಾಯ ಪಡೆಯುತ್ತಿರುವ ಉಕ್ರೇನ್ ಮತ್ತಷ್ಟು ಅಪಾಯಕಾರಿ ದಾಳಿ ಮೂಲಕ, ರಷ್ಯಾ ಎದೆ ನಡುಗಿಸುವ ಪ್ರಯತ್ನ ಮಾಡುತ್ತಿದೆ. ಇನ್ನೊಂದು ಕಡೆ ರಷ್ಯಾ ಕೂಡ ತನ್ನ ಶತ್ರು ದೇಶಕ್ಕೆ ಗುನ್ನಾ ಇಡುತ್ತಿದೆ.

Kazan Drone Attack Fire Breaks Out After 8 Drones Strike Buildings

ಬೃಹತ್ ಕಟ್ಟಡಗಳಿಗೆ ನುಗ್ಗಿದ ಡ್ರೋನ್‌ಗಳು!

ಹೌದು, ಇದೀಗ ರಷ್ಯಾ ದೇಶದ ನಗರ ಖಜಾನ್ ಸಂಪೂರ್ಣ ನಲುಗಿ ಹೋಗಿದ್ದು ಜನ ಭಯ & ಆತಂಕದ ನಡುವೆ ಜೀವನ ನಡೆಸುವಂತೆ ಆಗಿದೆ. ಯಾಕಂದ್ರೆ 'ಬ್ರಿಕ್ಸ್' ಶೃಂಗಸಭೆ ನಡೆದಿದ್ದ ರಷ್ಯಾ ದೇಶದ ಪ್ರಮುಖ ನಗರಗಳ ಪೈಕಿ ಒಂದಾದ 'ಖಜಾನ್' ಮೇಲೆ ಇದೀಗ ಭೀಕರವಾದ ಅಟ್ಯಾಕ್ ಆಗಿದೆ. ಹೀಗೆ ನೋಡ ನೋಡುತ್ತಲೇ ಬಹುಮಹಡಿ ಕಟ್ಟಡಕ್ಕೆ ನುಗ್ಗಿದ ಸುಮಾರು 8 ಡ್ರೋನ್‌ಗಳು ಇಡೀ ಕಟ್ಟಡವೇ ಹೊತ್ತಿ ಉರಿಯುವಂತೆ ಮಾಡಿವೆ.

'ಖಜಾನ್' ನಗರದ ಒಂದು ಕಟ್ಟಡದ ಮೇಲೆ ಮಾತ್ರವಲ್ಲ, 'ಖಜಾನ್' ನಗರದಲ್ಲಿ ಇರುವ ಹತ್ತಾರು ಬೃಹತ್ ಕಟ್ಟಡಗಳ ಮೇಲೆ ನೂರಾರು ಡ್ರೋನ್‌ಗಳನ್ನು ಬಳಸಿ ಉಕ್ರೇನ್ ಈ ರೀತಿ ದಾಳಿ ನಡೆಸಿದೆ ಎಂಬ ಆರೋಪ ಕೇಳಿ ಬಂದಿದೆ. ಹೀಗಾಗಿ ರಷ್ಯಾ ಇದೀಗ ಕಾದ ಕಬ್ಬಿಣವಾಗಿದೆ. ಜೋ ಬೈಡನ್ ಆಡಳಿತ ಅವಧಿಯಲ್ಲೇ ಈ ರೀತಿ ಘಟನೆ ಸಂಭವಿಸಿದ್ದು ಜಗತ್ತಿನ ಕುತೂಹಲ ಕೆರಳುವಂತೆ ಮಾಡಿದೆ.

ಮಾಸ್ಕೋಗೆ ಎಂಟ್ರಿ ಕೊಡುತ್ತಾರಾ ಟ್ರಂಪ್?

ಅಮೆರಿಕ & ರಷ್ಯಾ ನಡುವೆ ಅದೆಂತಹ ದ್ವೇಷ ಇದೆ ಅನ್ನೋದು ಇಡೀ ಜಗತ್ತಿಗೆ ಗೊತ್ತಾಗಿದೆ. ಸುಮಾರು ಮುಕ್ಕಾಲು ಶತಮಾನ ಅಮೆರಿಕ & ರಷ್ಯಾ ಬಡಿದಾಡಿವೆ. ಹೀಗಿದ್ದಾಗ ಒಂದು ಕಡೆ ರಷ್ಯಾ ಮುಳುಗಿಸಲು ಅಮೆರಿಕ ಕಾಯುತ್ತಿದೆ ಎಂಬ ಆರೋಪ ಕೇಳಿ ಬರುತ್ತಲೇ ಇರುತ್ತದೆ, ಈ ನಡುವೆ ರಷ್ಯಾ ಕೂಡ ಅಮೆರಿಕ ವಿರುದ್ಧ ಗುಡುಗುತ್ತಾ ಬಂದಿದೆ.

ಇಂತಹ ಸಮಯದಲ್ಲೀಗ ಡೊನಾಲ್ಡ್ ಟ್ರಂಪ್ 2025ರ ಜನವರಿ ತಿಂಗಳಲ್ಲಿ ಅಮೆರಿಕ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಳ್ಳಲು ಸಜ್ಜಾಗಿದ್ದಾರೆ. ಹೀಗೆ ಟ್ರಂಪ್ ಅಮೆರಿಕದ ಅಧ್ಯಕ್ಷ ಸ್ಥಾನದಲ್ಲಿ ಕೂತ ತಕ್ಷಣವೇ ರಷ್ಯಾ ರಾಜಧಾನಿ ಮಾಸ್ಕೋಗೆ ಭೇಟಿ ನೀಡುತ್ತಾರಾ ಎಂಬ ಕುತೂಹಲವು ಮೂಡಿದೆ. ಮತ್ತೊಂದು ಕಡೆ ರಷ್ಯಾ & ಉಕ್ರೇನ್ ಯುದ್ಧ ನಿಲ್ಲುವ ಭರವಸೆ ಕೂಡ ಈಗ ಸಿಗುತ್ತಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+