ಮೆಕ್ಕಾಮದೀನಾದಲ್ಲಿ ಕರ್ನಾಟಕ ಸಾಂಸ್ಕೃತಿಕ ಕಲರವ

By: ಮಂಗಳೂರು ಪ್ರತಿನಿಧಿ
Subscribe to Oneindia Kannada

ಮೆಕ್ಕಾ ಮದೀನಾ, ಡಿಸೆಂಬರ್ 12 : ಕರ್ನಾಟಕ ಕಲ್ಚರಲ್ ಫೌಂಡೇಶನ್ ಇಂಟರ್ ನ್ಯಾಷನಲ್ ಕೌನ್ಸಿಲ್ ವತಿಯಿಂದ ಕೆ.ಸಿ.ಎಫ್ ಅಂತರ್ಜಾಲ ಹಾಗೂ ಸಾಮಾಜಿಕ ಜಾಲತಾಣಗಳ ಅನಾವರಣ ಮದೀನಾ ಮುನವ್ವರದ ಕೆ.ಸಿ.ಎಫ್ ಭವನದಲ್ಲಿ ಭಾನುವಾರ ನಡೆಯಿತು.

ಕೆ.ಸಿ.ಎಫ್ ರಾಷ್ಟ್ರೀಯ ಸಮಿತಿ ಅಧ್ಯಕ್ಷರಾದ ಯೂಸುಫ್ ಸಖಾಫಿ ಬೈತಾರ್ ಅವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮವನ್ನು ಎಸ್.ಎಸ್.ಎಫ್ ಕರ್ನಾಟಕ ರಾಜ್ಯಾಧ್ಯಕ್ಷ ಶಾಫಿ ಸಅದಿ ಅವರು ಉದ್ಘಾಟಿಸಿದರು. ದಕ್ಷಿಣ ಕನ್ನಡ ಜಿಲ್ಲಾ ಸಂಯುಕ್ತ ಖಾಝಿ ಸಯ್ಯದ್ ಫಝಲ್ ಕೋಯಮ್ಮ ತಂಙಳ್ ಕೂರತ್ ಅವರು ಕೆ.ಸಿ.ಎಫ್ ನ ನೂತನ ಅಂತರ್ಜಾಲ ಹಾಗೂ ಸಾಮಾಜಿಕ ಜಾಲತಾಣವನ್ನು ಅನಾವರಣಗೊಳಿಸದರು.

ನಂತರ ಮಾತನಾಡಿದ ಅವರು, ನಾವು ಅಹ್ಲ್ ಸುನ್ನತ್ ವಲ್ ಜಮಾತ್ ಅಡಿಸ್ಥಾನದಲ್ಲಿ ಜೀವಿಸಬೇಕಾಗಿದೆ. ದ್ಸಿಕ್ರ್, ದುವಾ, ಸ್ವಲಾತ್ ಅಧಿಕರಿಸುವಂತಹ ಕಾರ್ಯಕರ್ತರು ಸಂಘಟನೆಗೆ ಅವಶ್ಯಕತೆಯಿದ್ದು, ಎಲ್ಲಾ ಕಾರ್ಯಕರ್ತರು ಸ್ವಲಾತ್, ದ್ಸಿಕ್ರ್ ಅಧಿಕಗೊಳಿಸಬೇಕಾಗಿದೆ ಎಂದರು.

Karnataka Cultural Foundation launches website in Mecca Madina

ಈ ವೇಳೆ ದಕ್ಷಿಣ ಕನ್ನಡ ಜಿಲ್ಲಾ ಸಂಯುಕ್ತ ಖಾಝಿ ಸಯ್ಯದ್ ಫಝಲ್ ಕೋಯಮ್ಮ ತಂಙಳ್ ಕೂರತ್, ಶಾಫಿ ಸಅದಿ ಹಾಗೂ ಬೆಳ್ತಂಗಡಿ ತಾಲೂಕು ಉಪಖಾಝಿ ಸಯ್ಯದ್ ಸಾದಾತ್ ತಂಙಳ್ ಹಾಗೂ ಇಶಾರ ಪ್ರಧಾನ ಸಂಪಾದಕ ಅಬ್ದುಲ್ ಹಮೀದ್ ಬಜ್ಪೆ ಅವರನ್ನು ಸನ್ಮಾನಿಸಲಾಯಿತು.

ಎಸ್.ಎಸ್.ಎಫ್ ಕರ್ನಾಟಕ ರಾಜ್ಯಾಧ್ಯಕ್ಷ ಶಾಫಿ ಸಅದಿ ಮಾತನಾಡಿ, ಕೆಸಿಎಫ್ ಹಜ್ಜ್ ವಾಲೇಂಟಿಯರ್ ಕಾರ್ಯಕರ್ತರ ಕೆಲಸ ಶ್ಲಾಘನೀಯವಾಗಿದ್ದು ನಿಮ್ಮ ಕೆಲಸ ಎಲ್ಲರ ಮನಮುಟ್ಟುವಂತೆ ಮಾಡಿದೆ. ಸಾಮಾಜಿಕ ಜಾಲತಾಣದ ಮೂಲಕ ಕೆಸಿಎಫ್ ಇನ್ನಷ್ಟು ಪ್ರಖ್ಯಾತಿ ಹೊಂದಲಿ ಎಂದರು. ಕೆಸಿಎಫ್ ಬಗ್ಗೆ ಮಾಹಿತಿ ಅರಿಯದ ಹಲವಾರು ಯುವಕರನ್ನು ಕೆಸಿಎಫ್ ಸಂಘಟನೆಗೆ ಸೇರುವಂತೆ ಪ್ರೇರೆಪಿಸಬೇಕೆಂದರು.

ಕೆಸಿಎಫ್ ಕಾರ್ಯಕರ್ತರ ಐಡಿ ಹಾಗೂ 2017ನೇ ವರ್ಷದ ಕೆಸಿಎಫ್ ಕ್ಯಾಲೆಂಡರ್ ಬಿಡುಗಡೆ ಗೊಳಿಸಲಾಯಿತು.

ಈ ವೇಳೆ ಕೆಸಿಎಫ್ ಐ.ಎನ್.ಸಿ ಸದಸ್ಯರಾದ ಅಲಿ ಮುಸ್ಲಿಯಾರ್ ಬಹರೈನ್, ರಾಷ್ಟ್ರೀಯ ಸಮಿತಿ ಕೋಶಾಧಿಕಾರಿ ಫಾರೂಕ್ ಅಬ್ಬಾಸ್ ಉಳ್ಳಾಲ್, ಕೆಸಿಎಫ್ ಜಿದ್ದಾ ಝೋನಲ್ ಅಧ್ಯಕ್ಷರಾದ ಸಯ್ಯದ್ ಅಬೂಬಕ್ಕರ್ ತಂಙಳ್, ಕೆ.ಸಿ.ಎಫ್ ಮದೀನಾ ಝೋನಲ್ ಅಧ್ಯಕ್ಷ ಫಾರೂಕ್ ನ ಈಮಿ, ಉಮ್ಮರ್ ಸಖಾಫಿ ಪರಪ್ಪು, ಹಮೀದ್ ಫೈಝಿ, ಕೆಸಿಎಫ್ ರಾಷ್ಟ್ರೀಯ ಸಮಿತಿಯ ರಿಲೀಫ್ ಚೇರ್ಮನ್ ಸಲೀಂ ಕನ್ಯಾಡಿ ಹಾಗೂ ಎಸ್.ಎಸ್.ಎಫ್, ಎಸ್.ವೈ.ಎಸ್ ನೇತಾರರು ಉಪಸ್ಥಿತರಿದ್ದರು.

ಕೆ.ಸಿ.ಎಫ್ ರಾಷ್ಟ್ರೀಯ ಸಮಿತಿಯ ಪ್ರಧಾನ ಕಾರ್ಯದರ್ಶಿ ಫಾರೂಕ್ ಕಾಟಿಪಳ್ಳ ಸ್ವಾಗತಿಸಿದ್ದು, ಕೆ.ಸಿ.ಎಫ್ ಮದೀನಾ ಸೆಕ್ಟರ್ ಅಧ್ಯಕ್ಷ ಅಶ್ರಫ್ ಸಖಾಫಿ ನೂಜಿ ಧನ್ಯವಾದ ಸಮರ್ಪಿಸಿದರು. ಉಮ್ಮರ್ ಗೇರುಕಟ್ಟೆ ಕಾರ್ಯಕ್ರಮ ನಿರೂಪಿಸಿದರು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Karnataka Cultural Foundation International Council has launched website in Mecca Madina on Sunday.
Please Wait while comments are loading...