‘ನನ್ನ ಹೆಂಡತಿಯನ್ನು ನೀವೆಲ್ಲಾ ಸೇರಿ ಅಮೆರಿಕ ಅಧ್ಯಕ್ಷೆಯಾಗಿ ಮಾಡಿ’
ಭಾರತ ಮೂಲದ ವ್ಯಕ್ತಿಗಳು ಜಗತ್ತಿನ ದೊಡ್ಡ ದೊಡ್ಡ ಸ್ಥಾನಗಳಿಗೆ ಆಯ್ಕೆ ಆಗಿದ್ದಾರೆ. ಅಲ್ಲದೆ ಈ ಮೂಲಕ ಭಾರತ ತನ್ನ ಶಕ್ತಿಯನ್ನು ಜಗತ್ತಿನ ಎದುರು ತೆರೆದಿಟ್ಟಿದೆ. ಹೀಗಿದ್ದಾಗಲೇ ಸದ್ಯ ಜಗತ್ತಿನ ದೊಡ್ಡಣ್ಣ ಎಂಬ ಬಿರುದು ಪಡೆದಿರುವ ಅಮೆರಿಕದ ಅಧ್ಯಕ್ಷ ಸ್ಥಾನಕ್ಕೂ ಭಾರತದ ನಂಟು ಹೊಂದಿರುವ ಮಹಿಳೆ ಆಯ್ಕೆ ಆಗುವುದು ಗ್ಯಾರಂಟಿ ಆಗಿದೆ. ಇಂತಹ ಸಮಯದಲ್ಲಿ ಡೆಮಾಕ್ರಟಿಕ್ ಪಕ್ಷದ ಅಭ್ಯರ್ಥಿ ಆಗಿರುವ ಕಮಲಾ ಹ್ಯಾರಿಸ್ ಪರವಾಗಿ ಭರ್ಜರಿ ಪ್ರಚಾರ ಕೂಡ ನಡೆಯುತ್ತಿದೆ.
ಭಾರತ ಮೂಲದ ಕಮಲಾ ಹ್ಯಾರಿಸ್ ಅವರು ಅಮೆರಿಕ ಅಧ್ಯಕ್ಷರಾಗಿ ಆಯ್ಕೆ ಆಗುವುದು & ಆ ಮೂಲಕ ಅಮೆರಿಕದ ಇತಿಹಾಸದಲ್ಲೇ ಹೊಸ ಸಾಧನೆ ಮಾಡುವುದು ಬಹುತೇಕ ಗ್ಯಾರಂಟಿ ಆಗಿದೆ. ಹೀಗಿದ್ದಾಗಲೇ ಬರಾಕ್ ಒಬಾಮಾ, ಕ್ಲಿಂಟನ್ ದಂಪತಿ, ಬೈಡನ್ ದಂಪತಿ ಸೇರಿದಂತೆ ಅಮೆರಿಕದ ಮಾಜಿ ಅಧ್ಯಕ್ಷರು ಹಾಗೂ ಅವರ ಕುಟುಂಬ ಸದಸ್ಯರು ಇದೀಗ ಕಮಲಾ ಅವರ ಪರವಾಗಿ ಭರ್ಜರಿಯಾಗಿ ಚುನಾವಣಾ ಪ್ರಚಾರ ನಡೆಸುತ್ತಿದ್ದಾರೆ. ಇದೇ ಸಮಯದಲ್ಲಿ ಕಮಲಾ ಹ್ಯಾರಿಸ್ ಅವರ ಗಂಡ 'ನನ್ನ ಹೆಂಡತಿಯನ್ನ ನೀವೆಲ್ಲಾ ಸೇರಿ ಅಮೆರಿಕ ಅಧ್ಯಕ್ಷೆಯಾಗಿ ಮಾಡಿ' ಎಂದು ಮಹತ್ವದ ಹೇಳಿಕೆ ನೀಡಿದ್ದಾರೆ.

ನನ್ನ ಹೆಂಡತಿಯನ್ನು ನೀವು ಗೆಲ್ಲಿಸಿ!
ಹೌದು, ತಮ್ಮ ಹೆಂಡತಿಗಾಗಿ ಕಮಲಾ ಹ್ಯಾರಿಸ್ ಅವರ ಗಂಡ ಇದೀಗ ಭರ್ಜರಿ ಚುನಾವಣಾ ಪ್ರಚಾರ ನಡೆಸುತ್ತಿದ್ದಾರೆ. ಹೀಗೆ ಎಲೆಕ್ಷನ್ ಕ್ಯಾಂಪೇನ್ ನಡೆಸುವ ಸಮಯದಲ್ಲೇ ಅಮೆರಿಕದ ಮತದಾರರ ಬಳಿ ತಮ್ಮ ಹೆಂಡತಿ ಪರವಾಗಿ ಮಹತ್ವದ ಬೇಡಿಕೆ ಇಟ್ಟಿದ್ದಾರೆ. ಕಮಲಾ ಹ್ಯಾರಿಸ್ ಅವರಲ್ಲಿ ನಾಯಕತ್ವದ ಮಹತ್ವದ ಗುಣಗಳು ಇವೆ. ಈಗಿನ ಪರಿಸ್ಥಿತಿಗೆ ಅಮೆರಿಕಗೆ ಇಂತಹ ನಾಯಕತ್ವ ಅಗತ್ಯ ಇದೆ. ನೀವೆಲ್ಲಾ ಮತ ಹಾಕಿ ಕಮಲಾ ಹ್ಯಾರಿಸ್ ಅವರನ್ನ ಆಯ್ಕೆಯನ್ನ ಮಾಡಿದರೆ, ಕಮಲಾ ಹ್ಯಾರಿಸ್ ಶ್ರೇಷ್ಠ ಅಧ್ಯಕ್ಷೆ ಆಗುತ್ತಾರೆ. ಈ ಮೂಲಕ ಇಡೀ ಅಮೆರಿಕವೇ ಹೆಮ್ಮೆ ಪಡುವ ರೀತಿ ಸಾಧನೆ ಮಾಡುತ್ತಾರೆ, ಅಂತಲೂ ಹೇಳಿದ್ದಾರೆ ಕಮಲಾ ಅವರ ಗಂಡ ಡೌಗ್ಲಾಸ್ ಎಮ್ಹಾಫ್.
ಅಮೆರಿಕ ಚುನಾವಣೆಯಲ್ಲಿ ಸಂಚಲನ!
ಕಮಲಾ ಹ್ಯಾರಿಸ್ ಅವರು ಕುಟುಂಬ ನಿರ್ವಹಣೆ ಸೇರಿದಂತೆ ಯಾವೆಲ್ಲಾ ರೀತಿಯಲ್ಲಿ ತಮ್ಮ ಜಾಣ್ಮೆ ತೋರಿಸಿದ್ದಾರೆ ಎಂಬ ವಿಚಾರವನ್ನು ಕೂಡ ಕಮಲಾ ಹ್ಯಾರಿಸ್ ಅವರ ಗಂಡ ಇದೀಗ ಬಿಡಿಸಿಟ್ಟಿದ್ದಾರೆ. ಅಲ್ಲದೆ ಕಮಲಾ ಅವರ ಗಂಡ ಡೌಗ್ಲಾಸ್ ಎಮ್ಹಾಫ್ ಹೇಳಿದಂತೆ, 'ನನ್ನ ಹೆಂಡತಿಯನ್ನ ನೀವೆಲ್ಲಾ ಸೇರಿ ಅಮೆರಿಕ ಅಧ್ಯಕ್ಷೆಯಾಗಿ ಮಾಡಿ' ಎಂದಿದ್ದಾರೆ. ಇದಕ್ಕೆ ಹಲವು ಕಾರಣಗಳನ್ನು ಕೂಡ ಡೌಗ್ಲಾಸ್ ಎಮ್ಹಾಫ್ ನೀಡಿದ್ದಾರೆ.
ಅಮೆರಿಕದಲ್ಲಿ ಚುನಾವಣೆಗೆ ಕ್ಷಣಗಣನೆ ಶುರುವಾಗಿದ್ದು, ಅಮೆರಿಕದಲ್ಲಿ ನವೆಂಬರ್ 5 ರಂದು ನಡೆಯಲಿರುವ ಅಧ್ಯಕ್ಷೀಯ ಚುನಾವಣೆಗೆ ಮತ ಹಾಕಲು ಈಗ ಕೋಟ್ಯಂತರ ಅಮೆರಿಕನ್ನರು ಕಾಯುತ್ತಿದ್ದಾರೆ. ಆ ಕಡೆ ಡೊನಾಲ್ಡ್ ಟ್ರಂಪ್ ಅವರು ರಿಪಬ್ಲಿಕನ್ ಪಕ್ಷದಿಂದ ಸ್ಪರ್ಧೆ ಮಾಡಿದ್ದರೆ ಇನ್ನೊಂದು ಕಡೆ ಕಮಲಾ ಹ್ಯಾರಿಸ್ ಅವರು ಡೆಮಾಕ್ರಟಿಕ್ ಪಕ್ಷದ ಅಭ್ಯರ್ಥಿ ಆಗಿದ್ದಾರೆ.












Click it and Unblock the Notifications