ಉಗ್ರರ ಅಟ್ಟಹಾಸ: ಆತ್ಮಾಹುತಿ ದಾಳಿಗೆ 60 ಬಲಿ

Written By:
Subscribe to Oneindia Kannada

ಕಾಬೂಲ್, ಜುಲೈ, 23: ಶನಿವಾರ ಮಧ್ಯಾಹ್ನ ನಡೆದ ಆತ್ಮಾಹುತಿ ಬಾಂಬ್ ದಾಳಿಗೆ ಅಪಘಾನಿಸ್ತಾನದ ಕಾಬೂಲ್ ಬೆಚ್ಚಿ ಬಿದ್ದಿದೆ.

ಹಜಾರಾ ಸಮುದಾಯದವರು ಪ್ರತಿಭಟನೆ ನಡೆಸುತ್ತಿದ್ದ ವೇಳೆ ಬಾಂಬ್ ದಾಳಿ ನಡೆದಿದೆ. ದಾಳಿಯಲ್ಲಿ 60 ಕ್ಕೂ ಅಧಿಕ ಮಂದಿ ಸಾವನ್ನಪ್ಪಿದ್ದಾರೆ. ಗಂಭೀರ ಗಾಯಗೊಂಡವನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.[ಮ್ಯೂನಿಕ್ ಶಾಪಿಂಗ್ ಮಾಲ್ ನಲ್ಲಿ ಗುಂಡಿನ ದಾಳಿ, 3 ಸಾವು]

kabul

ಸುಮಾರು 200ಕ್ಕೂ ಅಧಿಕ ಜನರು ಗಾಯಗೊಂಡಿದ್ದಾರೆ. ಪ್ರತಿಭಟನಾಕಾರರ ಸಮ್ಮುಖದಲ್ಲಿ ಬುರ್ಖಾ ಧರಿಸಿದ್ದ ಬಾಂಬರ್ ತನ್ನನ್ನು ತಾನು ಸ್ಫೋಟಿಸಿಕೊಂಡಿದ್ದಾನೆ.

ಸಾವಿರಾರು ಕೋಟಿ ರೂಪಾಯಿ ವೆಚ್ಚದ ವಿದ್ಯುತ್ ಸಂಪರ್ಕದ ಯೋಜನೆಯ ಮಾರ್ಗವನ್ನು ಬೇರೆಡೆಗೆ ಸ್ಥಳಾಂತರ ಮಾಡಬೇಕು ಎಂದು ಒತ್ತಾಯಿಸಿ ಪ್ರತಿಭಟನೆ ನಡೆಸುತ್ತಿದ್ದ ವೇಳೆ ದಾಳಿ ನಡೆದಿದೆ. ಸಾವಿರಾರು ಮಂದಿ ಕಾಬೂಲ್ ನ ಡೇಮಝಾಂಗ್ ಸರ್ಕಲ್ ಸಮೀಪ ನಡೆದು ಸಾಗುತ್ತಿದ್ದಾಗ ಅವಳಿ ಸ್ಫೋಟವಾಗಿದೆ. ಐಸಿಸ್ ಸಂಘಟನೆ ಸ್ಫೋಟದ ಹೊಣೆ ಹೊತ್ತುಕೊಂಡಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
A suicide bomber hit a large demonstration by members of Afghanistan's Hazara minority in Kabul on Saturday, killing at least 10 people and wounding dozens more, officials said.
Please Wait while comments are loading...