ಶುಕ್ರವಾರದ ನಮಾಜ್ ವೇಳೆ ಬಾಂಬ್ ಸ್ಫೋಟ, ನಾಲ್ವರು ಸಾವು

ಕಾಬೂಲ್, ಜೂನ್ 12: ಅಫ್ಘಾನಿಸ್ತಾನ ರಾಜಧಾನಿ ಕಾಬೂಲಿನ ಮಸೀದಿಯಲ್ಲಿ ಸ್ಫೋಟ ಸಂಭವಿಸಿದೆ. ಸುಧಾರಿತ ಸ್ಫೋಟಕ ವಸ್ತುಗಳನ್ನು ಬಳಸಿದ ಬಾಂಬ್ ಎಂದು ತಿಳಿದು ಬಂದಿದೆ. ಶುಕ್ರವಾರದ ನಮಾಜ್ ವೇಳೆ ಬಾಂಬ್ ಸ್ಫೋಟ ಉಂಟಾಗಿದ್ದು, ಈ ದುರ್ಘಟನೆಯಲ್ಲಿ ನಾಲ್ವರು ಮೃತರಾಗಿದ್ದು, ಹಲವರಿಗೆ ಗಾಯಗಳಾಗಿವೆ.

Recommended Video

      Jonty Rhodes Shares Viral Video Of People Playing Cricket In Quarantine | Oneindia Kannada

      ಶೇರ್ ಶಾ ಸೂರಿ ಮಸೀದಿಯಲ್ಲಿ ಸ್ಫೋಟಕ ವಸ್ತುಗಳನ್ನು ಇರಿಸಲಾಗಿದ್ದು, ಸ್ಫೋಟದಿಂದ ಪ್ರಾರ್ಥನೆ ಸಲ್ಲಿಸುತ್ತಿದ್ದ ಮಸೀದಿಯ ಮುಖಂಡ ಅಜಿಜುಲ್ಲಾ ಮೊಫ್ಲೆಹಾ ಕೂಡಾ ಮೃತರಾಗಿದ್ದಾರೆ ಎಂದು ಅಫ್ಘಾನಿಸ್ತಾನ ಆಂತರಿಕ ಸಚಿವಾಲಯದ ವಕ್ತಾರರಾದ ತಾರೀಕ್ ಅರಿಯಾನ್ ಹೇಳಿದ್ದಾರೆ.

      ಈ ಬಾಂಬ್ ಸ್ಫೋಟದ ಹೊಣೆಯನ್ನು ಇನ್ನೂ ಯಾವುದೇ ಉಗ್ರ ಸಂಘಟನೆ ಹೊತ್ತುಕೊಂಡಿಲ್ಲ. ಕಳೆದ ತಿಂಗಳು ಇದೇ ರೀತಿ ನಡೆದಿದ್ದ ಬಾಂಬ್ ಸ್ಫೋಟದ ಹೊಣೆಯನ್ನು ಐಎಸ್ ಐಎಲ್ (ಐಎಸ್ಐಎಸ್ ನ ಭಾಗ) ಹೊತ್ತುಕೊಂಡಿತ್ತು.

      Kabul: Deadly blast hits Kabul mosque during Friday prayers

      ಇಮಾಮ್ ಗಳು ಶಾಂತಿ ಮಾತುಕತೆಗೆ ಮುಂದಾಗಿದ್ದರು. ಇದನ್ನು ಸಹಿಸದೆ ಅವರನ್ನು ಗುರಿಯನ್ನಾಗಿಸಿಕೊಂಡು ದಾಳಿ ನಡೆಸಲಾಗಿದೆ ಎಂದು ರಾಷ್ಟ್ರೀಯ ಭದ್ರತಾ ವಿಶ್ಲೇಷಕ ಹಬೀಬ್ ವಾರ್ದಕ್ ಹೇಳಿದ್ದಾರೆ.

      ಮೇ 30ರಂದು ಪತ್ರಕರ್ತರಿಂದ ಬಸ್ ಮೇಲೆ ಐಎಸ್ಐಎಲ್ ಬೆಂಬಲಿತ ಉಗ್ರರ ಗುಂಪು ದಾಳಿ ನಡೆಸಿತ್ತು. ಇಬ್ಬರು ಮೃತಪಟ್ಟು ಹಲವರಿಗೆ ಗಾಯಗಳಾಗಿತ್ತು.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+