Justin Trudeau: ಭಾರತ ವಿರೋಧಿ ಕೆನಡಾ ಪ್ರಧಾನಿ ಎಸ್ಕೇಪ್, ಪ್ರಧಾನಿ ಪಟ್ಟ ಬಿಟ್ಟು ಜೂಟ್?
ಭಾರತ ಜಗತ್ತಿನ ಸೂಪರ್ ಪವರ್ ದೇಶ ಅನ್ನೋದು ಮತ್ತೆ ಮತ್ತೆ ಪ್ರೂವ್ ಆಗುತ್ತಿದೆ. ಯಾಕೆ ಅಂದ್ರೆ ಪ್ರಪಂಚದ ಯಾವುದೇ ದೇಶ ಭಾರತವನ್ನು ಎದುರು ಹಾಕಿಕೊಂಡು ನೆಮ್ಮದಿಯಾಗಿ & ಖುಷಿಯಾಗಿ ಜೀವನ ನಡೆಸಲು ಸಾಧ್ಯ ಇಲ್ಲ ಅನ್ನೋದು ಮತ್ತೆ ಪ್ರೂವ್ ಆಗಿದೆ. ಕೆನಡಾದ ಪ್ರಧಾನಿ ಪದೇ ಪದೇ ಭಾರತದ ವಿರುದ್ಧ ಕಿರಿಕ್ ಮಾಡಿ ಈಗ ಎಸ್ಕೇಪ್ ಆಗುವ ಪರಿಸ್ಥಿತಿ ಕೂಡ ಬಂದೆರಗಿದೆ!
ಕೆನಡಾ ಚುನಾವಣೆ ಸೇರಿದಂತೆ ಖಲಿಸ್ತಾನಿ ಉಗ್ರರ ಹತ್ಯೆಯಲ್ಲಿ ಭಾರತ ಹಸ್ತಕ್ಷೇಪ ನಡೆಸಿದೆ ಅಂತ ಕೆನಡಾ ಪದೇ ಪದೇ ದಾಖಲೆ ಇಲ್ಲದ ಆರೋಪ ಮಾಡಿತ್ತು. ಈ ಮೂಲಕ ಭಾರತ & ಕೆನಡಾ ಮಧ್ಯೆ ದೊಡ್ಡ ಕಾಡ್ಗಿಚ್ಚೇ ಹೊತ್ತಿಕೊಂಡಿತ್ತು. ಇದು ಸಾಲದು ಎನ್ನುವಂತೆ ಎರಡೂ ದೇಶಗಳ ಸಂಬಂಧ ಅತ್ಯಂತ ಕನಿಷ್ಠ ಮಟ್ಟಕ್ಕೆ ಕುಸಿದು ಬಿದ್ದಿತ್ತು. ಇಷ್ಟೆಲ್ಲದರ ನಡುವೆ ಖುದ್ದು ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡೋ ವಿರುದ್ಧವೇ ಆಕ್ರೋಶ ಮೊಳಗಿ, ರಾಜೀನಾಮೆ ನೀಡುವಂತೆ ಭಾರಿ ಒತ್ತಡ ಹೇರಲಾಗಿತ್ತು.

ಜಸ್ಟಿನ್ ಟ್ರುಡೋ ರಾಜೀನಾಮೆ!
ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡೋ ರಾಜೀನಾಮೆಗೆ ತೀವ್ರ ಒತ್ತಡ ಹೇರಲಾಗಿತ್ತು. ಹೀಗಾಗಿಯೇ ಇದರ ಬಗ್ಗೆ ಇದೀಗ ಜಸ್ಟಿನ್ ಟ್ರುಡೋ ಅವರು ಮಹತ್ವದ ತೀರ್ಮಾನ ಕೈಗೊಂಡ ರೀತಿ ಈಗ ಕಾಣುತ್ತಿದೆ. ಅದು ಏನು ಅಂದ್ರೆ, ಲಿಬರಲ್ ಪಾರ್ಟಿ ಮುಖ್ಯಸ್ಥನ ಸ್ಥಾನಕ್ಕೆ ಜಸ್ಟಿನ್ ಟ್ರುಡೋ ಇಂದು ರಾಜೀನಾಮೆ ನೀಡುವ ಸಾಧ್ಯತೆ ದಟ್ಟವಾಗಿದೆ. ಈ ಮೂಲಕ ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡೋ ಅಧಿಕಾರ ಬಿಟ್ಟು ಹೊರಗೆ ಹೋಗುವುದು ಪಕ್ಕಾ ಆಗಿದೆ.
ಅಮೆರಿಕ ಕಡೆಯಿಂದಲೂ ಕೆನಡಾ ಮೇಲೆ ಒತ್ತಡ?
ಕೆಲ ದಿನಗಳ ಹಿಂದೆ ಅಮೆರಿಕದ ನೂತನ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸಂಚಲನ ಸೃಷ್ಟಿಸುವ ಹೇಳಿಕೆ ನೀಡಿದ್ದರು. ಅಮೆರಿಕದ ನೂತನ ಅಧ್ಯಕ್ಷರಾಗಿ ಆಯ್ಕೆ ಆದ ಡೊನಾಲ್ಡ್ ಟ್ರಂಪ್ 2025ರ ಜನವರಿ ತಿಂಗಳಲ್ಲಿ ಅಧಿಕಾರ ವಹಿಸಿಕೊಳ್ಳಲಿದ್ದಾರೆ. ಅದಕ್ಕೂ ಮೊದಲು, ಕ್ರಾಂತಿಕಾರಿ ನಿರ್ಧಾರ ಕೂಡ ಕೈಗೊಳ್ಳುತ್ತಿದ್ದಾರೆ ಟ್ರಂಪ್.
ಈ ಪೈಕಿ ಕೆನಡಾ, ಮೆಕ್ಸಿಕೋ ಮೂಲಕ ಬರುವ ವಸ್ತುಗಳಿಗೆ ಶೇಕಡ 25 ತೆರಿಗೆ & ಚೀನಾ ಮೂಲಕ ಬರುವ ವಸ್ತುಗಳಿಗೆ ಶೇ. 10 ರಷ್ಟು ಟ್ಯಾಕ್ಸ್ ಹಾಕುವ ನಿರ್ಧಾರ ಪ್ರಕಟಿಸಿದ್ದರು. ಹೀಗಿದ್ದಾಗ ಸದ್ಯ ಈ ಎಲ್ಲಾ ಕಾರಣಗಳಿಗೆ ಟ್ರುಡೋ ಸರ್ಕಾರವೇ ಬಿದ್ದು ಹೋಗುವ ಪರಿಸ್ಥಿತಿ ನಿರ್ಮಾಣ ಆಗಿದೆ. ಅಲ್ಲದೆ ಮಿತ್ರ ಪಕ್ಷಗಳ ಮಿತ್ರರೇ ಟ್ರುಡೋ ವಿರುದ್ಧ ಅವಿಶ್ವಾಸ ನಿರ್ಣಯ ಮಂಡನೆ ಮಾಡುವ ಚರ್ಚೆ ನಡೆದಿದೆ ಎಂಬ ಸುದ್ದಿ ಹಬ್ಬಿದೆ. ಇದೇ ಸಮಯದಲ್ಲಿ ತಾವಾಗಿ ತಾವೇ ಜಾಗ ಖಾಲಿ ಮಾಡಲು ಇದೀಗ ಕೆನಡಾ ಪ್ರಧಾನಿ ಟ್ರುಡೋ ಪ್ಲಾನ್ ಮಾಡಿರುವಂತೆ ಕಾಣ್ತಿದೆ.












Click it and Unblock the Notifications