• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಅಮೆರಿಕಾದಲ್ಲಿ "WeChat" ನಿಷೇಧ ಅರ್ಜಿ ತಿರಸ್ಕರಿಸಿದ ಕೋರ್ಟ್

|

ವಾಶಿಂಗ್ಟನ್, ಅಕ್ಟೋಬರ್.27: ಯುನೈಟೆಡ್ ಸ್ಟೇಟ್ಸ್ ಆಫ್ ಅಮೆರಿಕಾದ ಭದ್ರತೆಗೆ ಧಕ್ಕೆಯಾಗುವ ಅಪಾಯವಿದೆ ಎಂಬ ಕಾರಣಕ್ಕೆ ತಕ್ಷಣದಿಂದಲೇ "We Chat" ಅಪ್ಲಿಕೇಶನ್ ಮೇಲೆ ನಿರ್ಬಂಧ ವಿಧಿಸಬೇಕು ಎನ್ನುವ ನ್ಯಾಯಾಂಗ ಇಲಾಖೆಯ ಅರ್ಜಿಯನ್ನು ಕೋರ್ಟ್ ಸೋಮವಾರ ತಿರಸ್ಕರಿಸಿದೆ. ಅಮೆರಿಕದಲ್ಲಿ ಚುನಾವಣೆ ಸಂದರ್ಭದಲ್ಲೇ ನಿಷೇಧ ಪರ ವಿರೋಧ ಚರ್ಚೆಗಳು ನಡೆದಿವೆ. ಕೆಲ ಕಂಪನಿಗಳು ಸರ್ಕಾರದ ವಿರುದ್ಧವೂ ದಾವೆ ಹೂಡಿವೆ.

9ನೇ ಸರ್ಕ್ಯೂಟ್ ನ್ಯಾಯಾಲಯದ ಮೂವರು ನ್ಯಾಯಮೂರ್ತಿಗಳನ್ನೊಳಗೊಂಡ ಪೀಠವು ಈ ಅರ್ಜಿ ವಿಚಾರಣೆ ನಡೆಸಿತು. ಸರ್ಕಾರವು "WeChat" ಮೇಲೆ ದಿಢೀರ್ ನಿರ್ಬಂಧವನ್ನು ಹೇರಿದರೆ ಸರಿಪಡಿಸಲಾಗದ ರೀತಿಯಲ್ಲಿ ಅಪಾಯ ಎದುರಾಗುವ ಸಾಧ್ಯತೆಯಿದೆ ಎಂದು ಕೋರ್ಟ್ ಹೇಳಿದೆ.

ಟಿಕ್ ಟಾಕ್ ನಿರ್ಬಂಧ: ಟ್ರಂಪ್‌ ಆದೇಶಕ್ಕೆ ಕೋರ್ಟಿಂದ ತಡೆ

ಕಳೆದ ಅಕ್ಟೋಬರ್.23ರಂದು "WeChat" ಬಳಕೆದಾರರ ತಂಡವು ಅಪ್ಲಿಕೇಷನ್ ನಿಷೇಧವನ್ನು ಪ್ರಶ್ನಿಸಿ ಕೋರ್ಟ್ ಮೊರೆ ಹೋಗಿದ್ದರು. ಈ ಅರ್ಜಿ ವಿಚಾರಣೆ ನಡೆಸಿದ ಕೋರ್ಟ್, ಲಕ್ಷಾಂತರ ಬಳಕೆದಾರರನ್ನು ಹೊಂದಿರುವ "WeChat" ಅಪ್ಲಿಕೇಶನ್ ನಿಷೇಧಿಸುವ ಬಗ್ಗೆ ತಕ್ಷಣ ತೀರ್ಮಾನ ತೆಗೆದುಕೊಳ್ಳಲಾಗದು ಎಂದು ಹೇಳಿದೆ.

ಕ್ಯಾಲಿಫೋರ್ನಿಯಾ ನ್ಯಾಯಾಲಯಕ್ಕೆ ಮೇಲ್ಮನವಿ:

ಅಮೆರಿಕಾದ ನ್ಯಾಯಾಂಗ ಇಲಾಖೆಯು ಈ ತೀರ್ಪನ್ನು ಪ್ರಶ್ನಿಸಿ ಕ್ಯಾಲಿಪೋರ್ನಿಯಾ ನ್ಯಾಯಾಲಯಕ್ಕೆ ಮೇಲ್ಮನವಿ ಸಲ್ಲಿಸಿದ್ದು, 2021ರ ಜನವರಿಯಲ್ಲಿ ಅರ್ಜಿ ವಿಚಾರಣೆಯನ್ನು ಮುಂದೂಡಿಕೆ ಮಾಡಲಾಗಿದೆ. ಕಳೆದ ಆಗಸ್ಟ್.06ರಂದು ಚೀನಾದ ಮಾತೃಸಂಸ್ಥೆ ಟೆನ್ಸೆಂಟ್ ಜೊತೆಗಿನ ಅಮೆರಿಕಾದ ಎಲ್ಲ ವ್ಯವಹಾರವನ್ನು ನಿರ್ಬಂಧಿಸಲಾಗುವುದು ಎಂದು ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದರು. ಚೀನಾದ ಟೆನ್ಸೆಂಟ್ ಕಂಪನಿಯ " "WeChat" ಅಪ್ಲಿಕೇಶನ್ ನಿಂದ ದೇಶದ ಭದ್ರತೆಗೆ ಅಪಾಯವಿದೆ ಎಂದು ದೂಷಿಸಿದ್ದರು. ಈ ಹಿನ್ನೆಲೆ ಟಿಕ್ ಟಾಕ್ ಜೊತೆಗೆ "WeChat" ನ್ನು ಕೂಡಾ ನಿಷೇಧಿಸುವುದಕ್ಕೆ ನಿರ್ಧರಿಸಿರುವುದಾಗಿ ಘೋಷಿಸಿದ್ದರು.

ಯುನೈಟೆಡ್ ಸ್ಟೇಟ್ಸ್ ಆಫ್ ಅಮೆರಿಕಾದಲ್ಲೇ 1.9 ಕೋಟಿ ಜನರು "WeChat" ಅಪ್ಲಿಕೇಶನ್ ನ್ನು ಪ್ರತಿನಿತ್ಯ ಬಳಸುತ್ತಿದ್ದಾರೆ. ಅಮೆರಿಕಾದಲ್ಲಿ ವಾಸವಿರುವ ಚೀನಾದ ವಿದ್ಯಾರ್ಥಿಗಳು, ಚೀನಾದಲ್ಲಿ ವಾಸವಿರುವ ಅಮೆರಿಕಾದ ವಿದ್ಯಾರ್ಥಿಗಳು ಮತ್ತು ಚೀನಾದ ಜೊತೆಗೆ ವ್ಯಾಪಾರಿ ಸಂಬಂಧವನ್ನು ಹೊಂದಿರುವ ಜನರ ನಡುವೆ "WeChat" ಪ್ರಮುಖ ಸಂಪರ್ಕ ಸಾಧನವಾಗಿದೆ.

English summary
Justice Department Plea For WeChat Ban Is Rejected By US Court.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X