ಸರ್ಜಿಕಲ್ ಸ್ಟ್ರೈಕ್ ಅಂದ್ರೇನು ಭಾರತಕ್ಕೆ ತೋರಿಸುತ್ತೇವೆ-ಹಫೀಜ್!

Written By: Ramesh
Subscribe to Oneindia Kannada

ಲಾಹೋರ್, ಅ. 01: ಭಾರತಪಾಕಿಸ್ತಾನದ ಮೇಲೆ ಸರ್ಜಿಕಲ್ ಸ್ಟ್ರೈಕ್ ನಡೆಸಿಲ್ಲ. ಸರ್ಜಿಕಲ್ ಸ್ಟ್ರೈಕ್ ಎಂದರೆ ಏನು ಎನ್ನುವುದನ್ನು ನಾವು ಭಾರತಕ್ಕೆ ತೋರಿಸಿಕೊಡುತ್ತೇವೆ ಎಂದು ಜಮತ್ ಉದ್ ದಾವಾ ಉಗ್ರ ಸಂಘಟನೆಯ ಮುಖ್ಯಸ್ಥ ಹಫೀಜ್ ಸಯೀದ್ ಹೇಳಿದ್ದಾನೆ.

ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಭಾರತೀಯ ಸೇನೆ ದಾಳಿ ಮಾಡಿದ್ದು ಸುಳ್ಳು. ಉರಿಯ ಸೇನಾ ಕಚೇರಿಯ ಮೇಲೆ ಕಾಶ್ಮೀರಿ ಮುಜಾಹಿದ್ದೀನ್ ಗಳು ದಾಳಿ ಮಾಡಿದ್ದಾರೆ. ಉರಿ ದಾಳಿಯಲ್ಲಿ 177 ಭಾರತೀಯ ಸೈನಿಕರು ಮೃತಪಟ್ಟಿದ್ದಾರೆ ಎಂದಿದ್ದಾನೆ.

hafiz saeed

ಈಗ ಭಾರತಕ್ಕೆ ಅಮೆರಿಕ ಸಹಾಯ ಮಾಡುವುದಿಲ್ಲ. ನಿಜವಾದ ಸರ್ಜಿಕಲ್ ಸ್ಟ್ರೈಕ್ ಹೇಗಿರುತ್ತದೆ ಎನ್ನುವುದನ್ನು ನಾವು ಭಾರತಕ್ಕೆ ತೋರಿಸಿಕೊಡುತ್ತೇವೆ.

ಹಾಗಾಗಿ ಪಾಕಿಸ್ತಾನ ಸೈನ್ಯಕ್ಕೆ ಸಂಪೂರ್ಣ ಅನುಮತಿ ನೀಡಬೇಕು ಮತ್ತು ಭಾರತಕ್ಕೆ ತಕ್ಕ ಪ್ರತಿಕ್ರಿಯೆ ನೀಡಬೇಕೆಂದು ಹಫೀಜ್ ಪಾಕಿಸ್ತಾನ ಪ್ರಧಾನಿ ನವಾಜ್ ಷರೀಫ್ ಗೆ ಆಗ್ರಹಿಸಿದ್ದಾನೆ. ಕಾಶ್ಮೀರದಲ್ಲಿ ಕಾಶ್ಮೀರಿಗಳು ಸಾವನ್ನಪ್ಪುತ್ತಿರುವಾಗ ವಿಶ್ವದ ದೇಶಗಳು ಮೌನಕ್ಕೆ ಶರಣಾಗಿವೆ ಎಂದು ಕಿಡಿಕಾರಿದ್ದಾನೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Jamaat ud Dawa chief Hafiz Saeed threatened that Pakistan would “show India what surgical strikes are”, and not even the US would be able to prevent them.
Please Wait while comments are loading...