ಪನಾಮಾ ಪೇಪರ್ಸ್ ತನಿಖಾ ವರದಿಗಾರ್ತಿಯ ಬರ್ಬರ ಹತ್ಯೆ

By: ವಿಕಾಸ್ ನಂಜಪ್ಪ
Subscribe to Oneindia Kannada

ಮಾಲ್ಟಾ, ಅಕ್ಟೋಬರ್ 17: ಪನಾಮ ಪೇಪರ್ಸ್ ಹಗರಣವನ್ನು ಬಯಲಿಗೆಳೆಯುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಪತ್ರಕರ್ತೆ ದಾಫ್ನೆ ಕರ್ವಾನಾ ಗಲಿಜಿಯರನ್ನು ಕಾರ್ ಬಾಂಬ್ ಸ್ಪೋಟಿಸಿ ಕೊಲ್ಲಲಾಗಿದೆ.

ದಾಫ್ನೆ ಕರ್ವಾನಾ ಗಲಿಜಿಯರನ್ನು ಸೋಮವಾರ ಅಪರಾಹ್ನ ಕಾರಿನಲ್ಲಿ ಸ್ಪೋಟಕ ಇಟ್ಟು ಕೊಲ್ಲಾಗಿದೆ.

ಪನಾಮಾ ಪೇಪರ್ಸ್ ಹಗರಣ ಅಂದರೆ ಏನು, ಎತ್ತ?

ಗಲಿಜಿಯ ಮಾಲ್ಟಾದಲ್ಲಿ ಜನಪ್ರಿಯ ಪತ್ರಕರ್ತೆಯಾಗಿದ್ದರು. ಆಕೆಯ ಬ್ಲಾಗ್ ಅಲ್ಲಿನ ಪತ್ರಿಕೆಗಳಿಗಿಂತ ಹೆಚ್ಚಿನ ಓದುಗರನ್ನು ಸೆಳೆಯುತ್ತಿತ್ತು.

Journalist who led Panama Papers probe killed in car bomb blast

ಆಕೆ ಇತ್ತೀಚೆಗೆ ಆಕೆ ಮಾಲ್ಟಾದ ಪ್ರಧಾನ ಮಂತ್ರಿ ಜೋಸೆಫ್ ಮಸ್ಕಟ್ ಮತ್ತು ಅವರ ಇಬ್ಬರು ಆಪ್ತರ ಹಗರಣವನ್ನು ಬಯಲಿಗೆಳೆದಿದ್ದರು.

ದಾಳಿಗೆ ಯಾವುದೇ ಸಂಘಟನೆ ಹೊಣೆ ಹೊತ್ತಕೊಂಡಿಲ್ಲ. ಇದೇ ಸಂದರ್ಭದಲ್ಲಿ ಪ್ರತಿಕ್ರಿಯೆ ನೀಡಿರುವ ಮಾಲ್ಟಾದ ಅಧ್ಯಕ್ಷ ಮಾರಿಯಾ ಲೂಯಿಸ್ ಕೊಲೆರಾ ಪ್ರೆಕಾ, "ಈ ರೀತಿಯ ಘಟನೆಯಿಂದ ಇಡೀ ದೇಶವೇ ಅಘಾತಕ್ಕೆ ಒಳಗಾಗಿದೆ. ಈ ಸಂದರ್ಭದಲ್ಲಿ ಯಾರೂ ಕೂಡ ತೀರ್ಪು ನಿಡುವಂತ ಪ್ರತಿಕ್ರಿಯೆ ನೀಡಬಾರದು," ಎಂದು ಹೇಳಿದ್ದಾರೆ.

"ಆಕೆ ವೈಯಕ್ತಿಕವಾಗಿ ಮತ್ತು ರಾಜಕೀಯವಾಗಿ ನನ್ನ ಟೀಕಾಕಾರರಾಗಿದ್ದರು. ಆದರೆ ಈ ರೀತಿಯ ಬರ್ಬರ ಕೃತ್ಯವನ್ನು ಸಹಿಸಲು ಸಾಧ್ಯವಿಲ್ಲ," ಎಂದು ಪ್ರಧಾನ ಮಂತ್ರಿ ಜೋಸೆಫ್ ಮಸ್ಕಟ್ ಹೇಳಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
The journalist who led the Panama Papers investigation has been killed in a car bomb blast at Malta. Daphne Caruana Galizia died on Monday afternoon when her car, a Peugeot 108, was destroyed by a powerful explosive device which blew the vehicle into several pieces and threw the debris into a nearby field.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ