ಜೋರ್ಡಾನ್: ಅಕಾಬಾ ಬಂದರಿನಲ್ಲಿ ವಿಷಕಾರಿ ಅನಿಲ ಸೋರಿಕೆ: 13 ಸಾವು- 250 ಜನ ಅಸ್ವಸ್ಥ
ಜೋರ್ಡಾನ್ ಜೂನ್ 28: ಜೋರ್ಡಾನ್‌ನ ಅಕಾಬಾ ಬಂದರಿನಲ್ಲಿ ವಿಷಕಾರಿ ಅನಿಲ ಬಿಡುಗಡೆಯಾಗಿ ಸ್ಫೋಟದಿಂದ 13 ಜನ ಸಾವನ್ನಪ್ಪಿದ್ದು ಸುಮಾರು 250 ಜನರು ಅಸ್ವಸ್ಥರಾಗಿದ್ದಾರೆ.
ಕ್ಲೋರಿನ್ ಟ್ಯಾಂಕ್‌ಗಳನ್ನು ಹಡಗಿನಲ್ಲಿ ತುಂಬಿಸುತ್ತಿದ್ದ ಕ್ರೇನ್ ಅದರಲ್ಲಿ ಒಂದುನ್ನು ಬೀಳಿಸಿದ ಪರಿಣಾಮ ಕನಿಷ್ಠ 13 ಜನರು ಸಾವನ್ನಪ್ಪಿದ್ದಾರೆ. ಸುಮಾರು 250 ಜನರು ಅಸ್ವಸ್ಥರಾಗಿದ್ದಾರೆ. ಸೋಮವಾರ (ಸ್ಥಳೀಯ ಕಾಲಮಾನ) ಜೋರ್ಡಾನ್‌ನ ಬಂದರಿನ ಅಕಾಬಾದಲ್ಲಿ ಸುತ್ತಮುತ್ತಲಿನ ವಿಷಕಾರಿ ಹಳದಿ ಹೊಗೆ ಸ್ಫೋಟವನ್ನು ಪ್ರಚೋದಿಸಿತು. ಆರಂಭದ ತನಿಖೆಯಿಂದ ಇದನ್ನು ಅನಿಲ ಸೋರಿಕೆ ಎಂದು ಸಾರ್ವಜನಿಕ ಭದ್ರತಾ ನಿರ್ದೇಶನಾಲಯ ಹೇಳಿದೆ.

ಅಧಿಕಾರಿಗಳು ಗಾಯಗೊಂಡವರನ್ನು ಸ್ಥಳಾಂತರಿಸಿದ ನಂತರ ಪ್ರದೇಶವನ್ನು ಮುಚ್ಚಿದ್ದಾರೆ ಮತ್ತು ಪರಿಸ್ಥಿತಿಯನ್ನು ಪರಿಹರಿಸಲು ತಜ್ಞರನ್ನು ಕಳುಹಿಸಿದ್ದಾರೆ. ಘಟನೆಯಲ್ಲಿ 13 ಜನರು ಸಾವನ್ನಪ್ಪಿದ್ದಾರೆ ಎಂದು ಸರ್ಕಾರಿ ಸ್ವಾಮ್ಯದ ಜೋರ್ಡಾನ್ ಟಿವಿ ಹೇಳಿದೆ. 199 ಮಂದಿ ಇನ್ನೂ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಮತ್ತೊಂದು ಅಧಿಕೃತ ಔಟ್ಲೆಟ್ ಅಲ್-ಮಮ್ಲಾಕಾ ಟಿವಿ ಹೇಳಿದೆ. ಜೊತೆಗೆ ಒಟ್ಟು 251 ಮಂದಿ ಗಾಯಗೊಂಡಿದ್ದಾರೆ ಎಂದು ಸಾರ್ವಜನಿಕ ಭದ್ರತಾ ನಿರ್ದೇಶನಾಲಯ ತಿಳಿಸಿದೆ.
CORRECTION: Jordan says 10 dead, over 200 hurt in Aqaba toxic gas leak (Changes city to Aqaba, not Petra)
— AFP News Agency (@AFP) June 27, 2022
ಸ್ಥಳೀಯ ಆರೋಗ್ಯ ಅಧಿಕಾರಿ ಡಾ. ಜಮಾಲ್ ಒಬೇದತ್, ಸುತ್ತಲು ಪ್ರದೇಶದಲ್ಲಿ ಜನರನ್ನು ಸುರಕ್ಷಿತವಾಗಿರಿಸಲು ಕಿಟಕಿ ಮತ್ತು ಬಾಗಿಲುಗಳನ್ನು ಮುಚ್ಚುವಂತೆ ಒತ್ತಾಯಿಸಿದರು. ಈ ಸ್ಥಳ ಹತ್ತಿರದ ವಸತಿ ಪ್ರದೇಶ 25 ಕಿಲೋಮೀಟರ್ (15 ಮೈಲುಗಳು) ದೂರದಲ್ಲಿದೆ.
Recommended Video
ಅಕಾಬಾವು ಕೆಂಪು ಸಮುದ್ರದ ಉತ್ತರದ ತುದಿಯಲ್ಲಿ ಇಸ್ರೇಲಿ ನಗರದ ಐಲಾಟ್‌ನ ಪಕ್ಕದಲ್ಲಿದೆ. ಇದು ಗಡಿಯುದ್ದಕ್ಕೂ ವ್ಯಾಪಿಸಿದೆ. ಇದು ಜನಪ್ರಿಯ ಬೀಚ್ ಮತ್ತು ಡೈವಿಂಗ್ ತಾಣಗಳಾಗಿವೆ. ಅನಿಲ ಗಾಳಿಯಲ್ಲಿ ವಿಲೀನವಾದಂತೆ ಅದರ ಪರಿಣಾಮ ಕಡಿಮೆಯಾಗುತ್ತದೆ. ಇದರಿಂದ ನಗರದ ಮೇಲೆ ಯಾವುದೇ ಪರಿಣಾಮ ಬೀರಿಲ್ಲ. ಆದರೂ ಪರಿಸ್ಥಿತಿಯನ್ನು ಪರಿಶೀಲಿಸಲಾಗುತ್ತಿದೆ ಎಂದು ಐಲಾಟ್‌ನ ತುರ್ತು ಸೇವೆಗಳು ಹೇಳಿಕೆಯಲ್ಲಿ ತಿಳಿಸಿವೆ.












Click it and Unblock the Notifications