ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬೇಬಿ ಟಾಲ್ಕ್ ಪೌಡರ್ ಮಾರಾಟ ಬಂದ್ ಮಾಡಿದ J & J, ಏನು ಕಾರಣ?

|
Google Oneindia Kannada News

ವಾಷಿಂಗ್ಟನ್, ಆಗಸ್ಟ್ 12: ಮಕ್ಕಳ ವೈದ್ಯಕೀಯ, ಸೌಂದರ್ಯವರ್ಧಕ ಪರಿಕರಗಳ ಉತ್ಪಾದನಾ ಸಂಸ್ಥೆ ಜಾನ್ಸನ್ ಅಂಡ್ ಜಾನ್ಸನ್ ಸಂಸ್ಥೆ ಮತ್ತೊಮ್ಮೆ ಭಾರಿ ಹಿನ್ನಡೆ ಉಂಟಾಗಿದೆ.

ಜಾನ್ಸನ್ ಮತ್ತು ಜಾನ್ಸನ್ ಟಾಲ್ಕ್ ಆಧಾರಿತ ಬೇಬಿ ಪೌಡರ್ ಕ್ಯಾನ್ಸರ್ ಕಾರಕವಾಗಿದೆ. ಮಾರಾಟ ನಿಲ್ಲಿಸುವಂತೆ ಕೋರಿ 38,000ಕ್ಕೂ ಹೆಚ್ಚು ಮೊಕದ್ದಮೆಗಳು ದಾಖಲಾಗಿವೆ.

ಈ ಹಿಂದೆ ಕ್ಯಾಲಿಫೋರ್ನಿಯಾ ನ್ಯಾಯಾಲಯವು ಜಾನ್ಸನ್ ಅಂಡ್ ಜಾನ್ಸನ್ ಸಂಸ್ಥೆಗೆ 29 ಮಿಲಿಯನ್ ಯುಎಸ್ ಡಾಲರ್ ದಂಡ ವಿಧಿಸಿತ್ತು.

ಡ್ರಗ್ ಪ್ರಯೋಗದಿಂದ ಕ್ಯಾನ್ಸರ್ ಮುಕ್ತವಾದ ಯುಕೆ ಮಹಿಳೆಡ್ರಗ್ ಪ್ರಯೋಗದಿಂದ ಕ್ಯಾನ್ಸರ್ ಮುಕ್ತವಾದ ಯುಕೆ ಮಹಿಳೆ

ಸುರಕ್ಷತಾ ಕಾಳಜಿ ಮತ್ತು ಉತ್ಪನ್ನದ ಬೇಡಿಕೆ ಇಳಿಮುಖವಾಗುತ್ತಿರುವ ಪರಿಣಾಮವಾಗಿ ಎರಡು ವರ್ಷಗಳ ಹಿಂದೆ ಯುಎಸ್ ಮತ್ತು ಕೆನಡಾದಲ್ಲಿ ತನ್ನ ಜನಪ್ರಿಯ ಬೇಬಿ ಪೌಡರ್‌ನ ಮಾರಾಟವನ್ನು ನಿಲ್ಲಿಸಿದ ನಂತರ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ. J&J ನ ಅಧಿಕೃತ ಹೇಳಿಕೆ ನೀಡಿ, "ಜಾಗತಿಕ ಪೋರ್ಟ್‌ಫೋಲಿಯೊ ಮೌಲ್ಯಮಾಪನದ ಭಾಗವಾಗಿ, ನಾವು ಎಲ್ಲಾ ಕಾರ್ನ್‌ಸ್ಟಾರ್ಚ್-ಆಧಾರಿತ ಬೇಬಿ ಪೌಡರ್ ಪೋರ್ಟ್‌ಫೋಲಿಯೊವನ್ನು ಮಾರುಕಟ್ಟೆಯಿಂದ ಹಿಂಪಡೆಯುತ್ತಿದ್ದೇವೆ." ಎಂದಿದೆ.

Johnson & Johnson to discontinue talc-based baby powder, over 38,000 cancer lawsuits reported

"ನಮ್ಮ ಕಾಸ್ಮೆಟಿಕ್ ಟಾಲ್ಕ್‌ನ ಸುರಕ್ಷತೆಗೆ ಸಂಬಂಧಿಸಿದಂತೆ, ನಮ್ಮ ನಿಲುವು ಬದಲಾಗಿಲ್ಲ. ಪ್ರಪಂಚದಾದ್ಯಂತದ ವೈದ್ಯಕೀಯ ವೃತ್ತಿಪರರು ನಡೆಸಿದ ದಶಕಗಳ ಸ್ವತಂತ್ರ ವೈಜ್ಞಾನಿಕ ಸಂಶೋಧನೆಯನ್ನು ನಾವು ಸಂಪೂರ್ಣವಾಗಿ ಬೆಂಬಲಿಸುತ್ತೇವೆ, ಇದು ಟಾಲ್ಕ್ ಆಧಾರಿತ ಜಾನ್ಸನ್ ಬೇಬಿ ಪೌಡರ್ ಸುರಕ್ಷಿತವಾಗಿದೆ ಎಂದು ತೋರಿಸುತ್ತದೆ, ಕಲ್ನಾರು(asbestos) ಹೊಂದಿರುವುದಿಲ್ಲ, ಮತ್ತು ಕ್ಯಾನ್ಸರ್‌ಗೆ ಕಾರಣವಾಗುವುದಿಲ್ಲ" ಎಂದು ಕಂಪನಿಯು ತನ್ನ ಅಧಿಕೃತ ಹೇಳಿಕೆಯಲ್ಲಿ ತಿಳಿಸಿದೆ. 1894 ರಿಂದ ಜಾನ್ಸನ್ ಬೇಬಿ ಪೌಡರ್ ಮಾರುಕಟ್ಟೆಯಲ್ಲಿದೆ.

ಪ್ರಕರಣದ ಹಿನ್ನೆಲೆ:
ಜಾನ್ಸನ್ ಅಂಡ್ ಜಾನ್ಸನ್ ಸಂಸ್ಥೆಯ ಟಾಲ್ಕಂ ಪೌಡರ್, ಬೇಬಿ ಪೌಡರ್ ಬಳಕೆಯಿಂದ ಮೆಸೊಥೆಲಿಯೊಮಾ(ಒಂದು ಬಗೆಯ ಕ್ಯಾನ್ಸರ್) ಉಂಟಾಗಿದೆ ಎಂದು ಮಹಿಳೆಯೊಬ್ಬರು ಆರೋಪಿಸಿದ್ದರು. ಸಂಸ್ಥೆಯ ಉತ್ಪನ್ನಗಳಲ್ಲಿರುವ ಆಸ್ಬೆಸ್ಟೋಸ್ ಕ್ಯಾನ್ಸರ್ ಕಾರಕ ಎಂದು ಸಾಬೀತಾದ ಹಿನ್ನಲೆಯಲ್ಲಿ ಮಹಿಳೆಗೆ 29 ಮಿಲಿಯನ್ ಡಾಲರ್ ನೀಡುವಂತೆ ಒಕ್ಲೆಂಡ್ ನಲ್ಲಿರುವ ಕ್ಯಾಲಿಫೋರ್ನಿಯಾ ಸುಪೀರಿಯರ್ ಕೋರ್ಟ್ ಆದೇಶಿಸಿತ್ತು.

ಜಾನ್ಸನ್ಸ್ ಅಂಡ್ ಜಾನ್ಸನ್ ಕಂಪನಿಯ ಟಾಲ್ಕಂ ಪೌಡರ್ ಬಳಕೆಯಿಂದ ಅಂಡಾಶಯ ಕ್ಯಾನ್ಸರ್(ovarian cancer) ಉಂಟಾಗಿದೆ ಎಂದು ಆರೋಪಿಸಿ 22 ಮಹಿಳೆಯರು ದೂರು ನೀಡಿದ್ದರು. ದೂರುದಾರ ಪೈಕಿ ಆರು ಮಂದಿ ಈಗ ಮೃತರಾಗಿದ್ದಾರೆ.

ಈ ಹಿಂದೆ ಅಂತಾರಾಷ್ಟ್ರೀಯ ವೈದ್ಯಕೀಯ ಸಂಸ್ಥೆಯ ಅನುಮತಿ ಪಡೆಯದೇ ಮಕ್ಕಳ ಮನೋ ವೈದ್ಯಕೀಯ ಔಷಧಿ(Risperdal)ಗಳನ್ನು ಮಾರಾಟ ಮಾಡಿರುವುದು ಬೆಳಕಿಗೆ ಬಂದಿದ್ದು, ಸಂಸ್ಥೆಯ ವಿರುದ್ಧ ಸಾಮಾನ್ಯ ಮತ್ತು ಕ್ರಿಮಿನಲ್ ಪ್ರಕರಣಗಳು ದಾಖಲಾಗಿತ್ತು.

Johnson & Johnson to discontinue talc-based baby powder, over 38,000 cancer lawsuits reported

ಮಿತಿ ಮೀರಿರುವ ಮಾರುಕಟ್ಟೆ ಸ್ಪರ್ಧೆಯಿಂದಾಗಿ ವೈದ್ಯಕೀಯ ಪರಿಕರಗಳ ತಯಾರಿಕಾ ಸಂಸ್ಥೆಗಳು ಎಫ್‌ಡಿಎ(Food and Drug Administration) ಮಾನ್ಯತೆ ಪಡೆಯದೆಯೇ ತಮ್ಮ ಉತ್ಪನ್ನಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡುವ ಮೂಲಕ ಜನರ ಆರೋಗ್ಯದ ಮೇಲೆ ಚೆಲ್ಲಾಟವಾಡುತ್ತಿವೆ. ಅಮೆರಿಕದ ಅಂತಾರಾಷ್ಟ್ರೀಯ ನ್ಯಾಯಾಂಗ ಇಲಾಖೆ ಸಂಸ್ಥೆಗೆ ಭಾರಿ ಮೊತ್ತದ ದಂಡ ವಿಧಿಸುವ ಮೂಲಕ ಇತರೆ ಸಂಸ್ಥೆಗಳಿಗೆ ಎಚ್ಚರಿಕೆ ನೀಡಿತ್ತು.

ಅತಿದೊಡ್ಡ ಕ್ಯಾನ್ಸರ್ ಆಸ್ಪತ್ರೆಗಾಗಿ ಶ್ರಮಿಸಿದ ಟಾಟಾ, ಟಿಟಿಡಿ ಟ್ರಸ್ಟ್ಅತಿದೊಡ್ಡ ಕ್ಯಾನ್ಸರ್ ಆಸ್ಪತ್ರೆಗಾಗಿ ಶ್ರಮಿಸಿದ ಟಾಟಾ, ಟಿಟಿಡಿ ಟ್ರಸ್ಟ್

'ಯುರೋಪ್, ಏಷ್ಯಾ ಮತ್ತು ಲ್ಯಾಟಿನ್ ಅಮೆರಿಕಗಳಲ್ಲಿ ಬಿಕರಿಯಾಗಿರುವ ಜಾನ್ಸನ್ ಅಂಡ್ ಜಾನ್ಸನ್ ಕಂಪನಿಯ 3.2 ಕೋಟಿ ಪ್ಯಾಕ್ ಜನನ ನಿಯಂತ್ರಣ ಸೇವನೆ ಮಾತ್ರೆ Cilest ಅನ್ನು ಸ್ವಯಂಪ್ರೇರಿತವಾಗಿ ಹಿಂದಕ್ಕೆ ಪಡೆದುಕೊಂಡಿದ್ದನ್ನು ಇಲ್ಲಿ ಸ್ಮರಿಸಬಹುದು.

ಭಾರತದಲ್ಲೂ ಲೈಸೆನ್ಸ್ ರದ್ದಾಗಿತ್ತು:

2007ರಲ್ಲಿ ಜೆ ಅಂಡ್ ಜೆ ಕಂಪನಿಯ ಮೇಲೆ ಹೂಡಲಾದ ಪ್ರಕರಣವೊಂದರಲ್ಲಿ, ಜಾನ್ಸನ್ ಬೇಬಿ ಪೌಡರ್‌ನಲ್ಲಿ ಕಾರ್ಸಿನೋಜೆನಿಕ್ ಎಂಬ ವಸ್ತುವಿನ ಅಂಶ ಕಂಡುಬಂದಿದೆ. ಪೌಡರ್ ಎಥಿಲಿನ್ ಆಕ್ಸೈಡ್‌ನಿಂದ ಸ್ಟೆರಿಲೈಸ್ ಆಗಿದ್ದರಿಂದ ಕಾರ್ಸಿನೋಜೆನಿಕ್ ವಸ್ತು ಪೌಡರ್‌ನಲ್ಲಿ ಉಳಿದುಕೊಂಡಿದೆ. ಈ ವಸ್ತು ಮಗುವಿನ ಮೃದುವಾದ ಚರ್ಮಕ್ಕೆ ಹಾನಿಕರ, ಇದರಿಂದ ತುರಿಕೆಗಳಾಗುತ್ತವೆ ಎಂದು ಅಧ್ಯಯನದಿಂದ ಕಂಡುಬಂದಿದೆ.

ಪೌಡರ್‌ನಲ್ಲಿ ಎಥಿಲಿನ್ ಆಕ್ಸೈಡ್ ಪ್ರಮಾಣ ಅಧಿಕವಾಗಿದ್ದು, ಇದು ಕ್ಯಾನ್ಸರ್ ಬರಲು ಕೂಡ ಕಾರಣವಾಗಬಹುದು. ಈ ಕಾರಣದಿಂದಾಗಿ ಜಾನ್ಸನ್ ಅಂಡ್ ಜಾನ್ಸನ್ ಕಂಪನಿಯ ಲೈಸೆನ್ಸ್ ಅನ್ನು ರದ್ದುಪಡಿಸಲಾಗಿತ್ತು. ಮಹಾರಾಷ್ಟ್ರದ ಫುಡ್ ಅಂಡ್ ಡ್ರಗ್ ಅಡ್ಮಿನಿಸ್ಟ್ರೇಷನ್ (FDA) ಬಹುರಾಷ್ಟ್ರೀಯ ಮತ್ತು ಜನಪ್ರಿಯ ಜಾನ್ಸನ್ ಅಂಡ್ ಜಾನ್ಸನ್ ಕಂಪನಿಯ ಲೈಸೆನ್ಸ್ ಅನ್ನೇ ರದ್ದು ಮಾಡಿತ್ತು. ಈ ಆದೇಶದ ಪ್ರಕಾರ, ಜಾನ್ಸನ್ ಅಂಡ್ ಜಾನ್ಸನ್ ಕಂಪನಿ ಮುಳುಂದ್ ಪ್ಲಾಂಟ್‌ನಲ್ಲಿ ಯಾವುದೇ ಉತ್ಪನ್ನಗಳನ್ನು ಉತ್ಪಾದಿಸುವಂತಿರಲಿಲ್ಲ.

English summary
Johnson & Johnson has announced that it will discontinue its talc-based baby powder internationally in 2023 and switch to a baby powder portfolio based on cornstarch.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X