• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಮಸೂದ್ ಅಝರ್ ನಮ್ಮಲ್ಲೇ ಇದ್ದಾನೆ:ಸತ್ಯ ಬಾಯ್ಬಿಟ್ಟ ಪಾಕಿಸ್ತಾನ

|

ಇಸ್ಲಾಮಾಬಾದ್, ಮಾರ್ಚ್ 01: ಜೈಷ್ ಇ ಮೊಹಮ್ಮದ್ ಉಗ್ರ ಸಂಘಟನೆಯ ಮುಖಂಡ ಮಸೂದ್ ಅಝರ್ ನಮ್ಮಲ್ಲೇ ಇದ್ದಾನೆ, ಆತನಿಗೆ ಹುಷಾರಿಲ್ಲ ಎಂದು ಪಾಕಿಸ್ತಾನ ಒಪ್ಪಿಕೊಂಡಿದೆ.

ಇಷ್ಟು ದಿನ, 'ಮಸೂದ್ ಅಝರ್ ನಮ್ಮೊಂದಿಗಿಲ್ಲ, ಆತನ ಬಗ್ಗೆ ತನಗೇನೂ ತಿಳಿದಿಲ್ಲ ಎನ್ನುತ್ತಿದ್ದ ಪಾಕಿಸ್ತಾನ, ಇದೀಗ ಆತ ತಮ್ಮ ದೇಶದಲ್ಲೇ ಇದ್ದಾನೆ' ಎಂದು ಪಾಕಿಸ್ತಾನದ ವಿದೇಶಾಂಗ ಸಚಿವ ಶಾ ಮಹ್ಮೂದ್ ಖುರೇಷಿ ಒಪ್ಪಿಕೊಂಡಿದ್ದಾರೆ.

2008 ರ ಮುಂಬೈ ದಾಳಿ, 2016 ರ ಪಠಾಣ್ ಕೋಟ್ ದಾಳಿಗಳ ಸಂಚುಕೋರ ಮಸೂದ್ ಅಝರ್ ಭಾರತದಲ್ಲಿ ನಡೆದ ಹಲವು ಉಗ್ರ ದಾಳಿಯಲ್ಲಿ ಭಾಗಿಯಾಗಿದ್ದ. ಫೆಬ್ರವರಿ 14 ರಂದು ನಡೆದ ಪುಲ್ವಾಮಾ ದಾಳಿಯೂ ಆತನದೇ ಸಂಚಾಗಿತ್ತು. ಜೈಷ್ ಅದನ್ನು ಒಪ್ಪಿಕೊಂಡಿದ್ದರೂ, ಪಾಕಿಸ್ತಾನ ಅದನ್ನು ಒಪ್ಪಿಕೊಂಡಿರಲಿಲ್ಲ!

'ಮಸೂದ್ ಅಝರ್ ಅನಾರೋಗ್ಯದಿಂದ ಬಳಲುತ್ತಿದ್ದಾನೆ. ಆತನಿಗೆ ಮನೆಯಿಂದ ಆಚೆ ಹೋಗುವುದಕ್ಕೂ ಆಗದಷ್ಟು ಹುಷಾರಿಲ್ಲ ಎಂಬ ಮಾಹಿತಿ ನಮಗೆ ಲಭ್ಯವಾಗಿದೆ. ಭಾರತದ ಬಳಿ ಸಾಕ್ಷಿಗಳಿದ್ದರೆ ಅವರು ಅದನ್ನು ನಮ್ಮೊಂದಿಗೆ ಹಂಚಿಕೊಳ್ಳಲಿ. ನಾವು ಅದರ ಮೂಲಕ ಜನರಿಗೆ ಮತ್ತು ನ್ಯಾಯಾಂಗಕ್ಕೆ ಅರ್ಥಮಾಡಿಸುತ್ತೇವೆ' ಎಂದು ಖುರೇಷಿ ಹೇಳಿದ್ದಾರೆ.

English summary
After Pulwama terror attack and India's airstrike on terror camp in Pakistan, Pakistan admits, Jaish e Mohammad chief Masood Azhar is in Pakistan, but he is not well
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X