ಮೂವರು ರಸಾಯನಶಾಸ್ತ್ರ ಸಂಶೋಧಕರಿಗೆ ನೊಬೆಲ್!

Written By: Ramesh
Subscribe to Oneindia Kannada

ಸ್ಟಾಕ್ ಹೋಮ್, ಅಕ್ಟೋಬರ್, 06 : ರಸಾಯನಶಾಸ್ತ್ರಕ್ಕೆ ನೀಡಲಾಗುವ 2016ರ ನೊಬೆಲ್ ಪ್ರಶಸ್ತಿ ಜೀನ್ -ಪಿಯರ್ರೆ ಸೌವಾಜ್, ಜೆ. ಫ್ರೇಸರ್ ಸೊಡ್ಡಾರ್ಟ್ ಮತ್ತು ಬರ್ನಾಡ್ ಫೆರಿಂಗ ಅವರಿಗೆ ದಕ್ಕಿದೆ.

ಮೊಲ್ಯಾಕ್ಯುಲರ್(ಅಣುಗಳ) ಮೆಶಿನ್ ಗಳನ್ನು ಅಭಿವೃದ್ಧಿ ಪಡಿಸಿದಕ್ಕಾಗಿ ಫ್ರೆಂಚ್ ಮೂಲದ ಜೀನ್ -ಪಿಯರ್ರೆ ಸೌವಾಜ್, ಬ್ರಿಟಿಷ್ ಮೂಲದ ಜೆ. ಫ್ರೇಸರ್ ಸೊಡ್ಡಾರ್ಟ್ ಮತ್ತು ಡಚ್ ವಿಜ್ಞಾನಿ ಬರ್ನಾಡ್ ಫೆರಿಂಗ ಅವರು ರಸಾಯನಶಾಸ್ತ್ರಕ್ಕೆ ನೀಡಲಾಗುವ 2016ರ ನೊಬೆಲ್ ಪುರಸ್ಕಾರಕ್ಕೆ ಭಾಜನರಾಗಿದ್ದಾರೆ. ಎಂಟು ದಶಲಕ್ಷ ಸ್ವೀಡಿಶ್ ಕ್ರೌನ್ (9,31,000 ಡಾಲರ್) ಪ್ರಶಸ್ತಿಯನ್ನು ಈ ಮೂವರು ವಿಜ್ಞಾನಿಗಳು ಹಂಚಿಕೊಂಡಿದ್ದಾರೆ. [ಜೀವಕೋಶಗಳ ಸ್ವಯಂಭಕ್ಷಣೆ ಸಂಶೋಧಕನಿಗೆ ನೊಬೆಲ್!]

Nobel

ಅಣುಗಳ ನಿಯಂತ್ರಣಾತ್ಮಕ ಚಲನೆಗಳ ಕುರಿತ ವಿನ್ಯಾಸ ಮತ್ತು ವಿಶ್ಲೇಷಣೆಗಳ ಬಗೆಗಿನ ಸಂಶೋಧನೆಗಾಗಿ ಈ ಪುರಸ್ಕಾರ ನೀಡಲಾಗುತ್ತಿದೆ ಎಂದು ರಾಯಲ್ ಸ್ವೀಡಿಶ್ ವಿಜ್ಞಾನ ಅಕಾಡೆಮಿ ಹೇಳಿಕೆಯೊಂದರಲ್ಲಿ ತಿಳಿಸಿದೆ.

ವೈದ್ಯಕೀಯ ಪುರಸ್ಕಾರ ಈಗಾಗಲೇ ಜಪಾನ್‌ನ ಜೀವಶಾಸಜ್ಞರಿಗೆ ಸಲ್ಲಿಕೆಯಾಗಿದೆ. ಭೌತಶಾಸ್ತ್ರ ವಿಭಾಗದ ಪುರಸ್ಕಾರ ಬ್ರಿಟಿಷ್ ಮೂಲದ ಮೂವರು ವಿಜ್ಞಾನಿಗಳ ಪಾಲಾಗಿದೆ.

ನೊಬೆಲ್ ಶಾಂತಿ ಪುರಸ್ಕಾರ ಕಳೆದ ವಾರ ಪ್ರಕಟವಾಗಿದ್ದು. ಸ್ಟಾಕ್ ಹೋಮ್ ನಲ್ಲಿ ಡಿ.10ರಂದು ನಡೆಯಲಿರುವ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಎಲ್ಲಾ ನೊಬೆಲ್ ವಿಜೇತರಿಗೆ ಪ್ರಶಸ್ತಿ ನೀಡಿ ಗೌರವಿಸಲಾಗುತ್ತದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
Frenchman Jean-Pierre Sauvage, British-born J Fraser Stoddart and Dutch scientist Bernard Feringa today won the Nobel Prize in chemistry for developing molecular machines.
Please Wait while comments are loading...