Human Washing Machine: 15 ನಿಮಿಷಗಳಲ್ಲಿ ಸ್ನಾನ ಮಾಡಿಸಿ, ಮೈ ಒಣಗಿಸುವ ಯಂತ್ರ
ಜಪಾನಿನ ವಿಜ್ಞಾನಿಗಳು ಒಂದು ಹೊಸ ಯಂತ್ರವನ್ನು ಕಂಡು ಹಿಡಿದಿದ್ದಾರೆ. ಈ ಯಂತ್ರ ಮಾಡುವ ಕೆಲಸದ ಬಗ್ಗೆ ಕೇಳಿದರೆ ನೀವು ಅಚ್ಚರಿ ಪಡುವುದರೊಂದಿಗೆ ಮುಗುಳುನಗೆ ಬೀರುವುದು ಖಚಿತ. ಯಾಕೆಂದರೆ ತೋರಿಕೆಗೆ ವಾಷಿಂಗ್ ಮೆಷಿನ್‌ನಂತೆ ಕಾಣುವ ಈ ಯಂತ್ರ ಬಟ್ಟೆ ಒಗೆಯುವುದಿಲ್ಲ ಬದಲಾಗಿ ಮೈ ತೊಳಿಯುತ್ತದೆ. ಅಷ್ಟೇ ಅಲ್ಲ ಮಾನವ ದೇಹವನ್ನು ನೀರಿನಿಂದ ತೊಳೆದು ಕೇವಲ 15 ನಿಮಿಷಗಳಲ್ಲಿ ಒಣಗಿಸುತ್ತದೆ. ಇದರ ನಂತರ ದೇಹ ಬಟ್ಟೆಯಂತೆ ಸಂಪೂರ್ಣವಾಗಿ ಹೊಸದಾಗಿ ಕಾಣಿಸುತ್ತದೆ.
ಹೌದು... ಜಪಾನಿನ ಎಂಜಿನಿಯರ್‌ಗಳು ನಂಬಲು ಅಸಾಧ್ಯವಾದ ಯಂತ್ರವನ್ನು ಪರಿಚಯಿಸಿದ್ದಾರೆ. ಇದು AI ಚಾಲಿತ ಯಂತ್ರವಾಗಿದ್ದು, ಇದನ್ನು ಮಿರೈ ನಿಂಗೆನ್ ಸೆಂಟಾಕುಕಿ (Mirai Ningen Sentakuki) ಎಂದು ಹೆಸರಿಸಲಾಗಿದೆ. ಇದು ಮಾನವ ದೇಹವನ್ನು ತೊಳೆಯುವ ಮತ್ತು ಒಣಗಿಸುವ ಕೆಲಸ ಮಾಡುತ್ತದೆ.

ಈ ಸಾಧನವನ್ನು ಜಪಾನ್‌ನ ಸೈನ್ಸ್ ಕಂ ಅಭಿವೃದ್ಧಿಪಡಿಸಿದೆ. ಒಸಾಕಾದಲ್ಲಿರುವ ಕಂಪನಿಯಿಂದ ಇದನ್ನು ತಯಾರಿಸಲಾಗಿದೆ. ಪ್ರಸ್ತುತ ಈ ಯಂತ್ರವನ್ನು ಒಸಾಕಾದಲ್ಲಿನ ಎಕ್ಸ್‌ಪೋದಲ್ಲಿ ತೋರಿಸಲಾಗಿದೆ. ಶೀಘ್ರದಲ್ಲೇ ಇದನ್ನು 1,000 ಜನರ ಮೇಲೆ ಪರೀಕ್ಷೆಗೆ ಪ್ರಸ್ತುತಪಡಿಸಲಾಗುವುದು ಎಂದು ಕಂಪನಿ ಹೇಳಿದೆ.
ಕೇವಲ 15 ನಿಮಿಷಗಳಲ್ಲಿ ಸ್ನಾನ
ಈ ಸಾಧನ ಕೇವಲ 15 ನಿಮಿಷಗಳಲ್ಲಿ ತನ್ನ ಕೆಲಸವನ್ನು ಪೂರ್ಣಗೊಳಿಸುತ್ತದೆ ಎಂದು ಕಂಪನಿ ಹೇಳಿಕೊಂಡಿದೆ. ಮೊದಲು ಅದು ದೇಹವನ್ನು ತೊಳೆದು ನಂತರ ಒಣಗಿಸುತ್ತದೆ. ಒಣಗಿಸುವುದು ಎಂದರೆ ಅದು ದೇಹವನ್ನು ಸಂಪೂರ್ಣವಾಗಿ ಹೊಸದಾಗಿ ಮಾಡುತ್ತದೆ. ಈ ಯಂತ್ರ ತೋರಿಕೆಗೆ ಫೈಟರ್ ಜೆಟ್‌ನಂತೆ ಕಾಣುತ್ತದೆ.
ಈ ಯಂತ್ರ ಹೇಗೆ ಕೆಲಸ ಮಾಡುತ್ತದೆ?
ಇದು ವಾಷಿಂಗ್ ಮೆಷಿನ್‌ನಂತೆ ಕೆಲಸ ಮಾಡುತ್ತದೆ. ಅಂದರೆ ಇದರೊಳಗೆ ಮಾನವ ಕುಳಿತು ಸ್ಟಾರ್ಟ್ ಬಟನ್ ಒತ್ತಬೇಕು. ಆರಂಭದಲ್ಲಿ ಶವರ್ ಆನ್ ಆಗುತ್ತದೆ. ಮೈ ಪೂರ್ಣ ಒದ್ದೆ ಮಾಡಲಾಗುತ್ತದೆ. ನಂತರ ಸೋಪು ಮಿಶ್ರಿತ ನೀರು ಮೈ ಮೇಲೆ ಚಲ್ಲುತ್ತದೆ. ಇದರ ಮೂಲಕ ದೇಹದ ಶುಚಿಗೊಳಿಸುವಿಕೆ ಮಾಡಲಾಗುತ್ತದೆ. ಇದರ ಒಳಗಡೆ ಕುಳಿತವರು ಸ್ಪಾ ರೀತಿಯ ಅನುಭವವನ್ನು ಪಡೆಯುತ್ತಾರೆ. ಪ್ರತಿ ವ್ಯಕ್ತಿಯ ದೈಹಿಕ ಅಗತ್ಯಗಳಿಗೆ ಹಾಗೂ ತಾಪಮಾನಕ್ಕೆ ಅನುಗುಣವಾಗಿ ಯಂತ್ರವನ್ನು ನಿರ್ಮಾಣ ಮಾಡಲಾಗಿದೆ. ಈ ಯಂತ್ರ ಭಾವನೆಗಳನ್ನು ಸಹ ಪರಿಶೀಲಿಸುತ್ತದೆ ಮತ್ತು ಅದರ ಪ್ರಕಾರ ತನ್ನ ಕೆಲಸವನ್ನು ಸ್ಮಾರ್ಟ್ ಆಗಿ ಮಾಡುತ್ತದೆ.
ಇದರಲ್ಲಿ ಸ್ನಾನ ಮಾಡುವ ವ್ಯಕ್ತಿಗೆ ಸಂಪೂರ್ಣ ಆರಾಮಧಾಯಕವಾದ ಅನುಭವ ಸಿಗಲಿದೆ. ಅಲ್ಲದೆ ಮಾನಸಿಕ ಒತ್ತಡವನ್ನೂ ಇದು ಕಡಿಮೆ ಮಾಡುತ್ತದೆ. ದೇಹಕ್ಕೆ ಬೇಕಾದಷ್ಟು ವಿಶ್ರಾಂತಿ ನೀಡಿ ಹೊಸ ಉತ್ಸಾಹವನ್ನು ತುಂಬುತ್ತದೆ. ಸದ್ಯ ಸಾಮಾಜಿಕ ಜಾಲತಾಣದಲ್ಲಿ ಈ ಫೋಟೋ ಭಾರೀ ವೈರಲ್ ಆಗಿದ್ದು ವಿಭಿನ್ನ ಪ್ರತಿಕ್ರಿಯೆಗಳು ಬರುತ್ತಿವೆ.












Click it and Unblock the Notifications