ಸರ್ವಾಧಿಕಾರಿ ವಿರುದ್ಧ ಗುಡುಗಿದ ಅಮೆರಿಕದ ಯುದ್ಧ ವಿಮಾನಗಳು!

ಸೋಲ್‌: ಉತ್ತರ ಕೊರಿಯಾ ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ನಡೆಸುತ್ತಿರುವ ಪರಮಾಣು ಸಾಮರ್ಥ್ಯದ ಕ್ಷಿಪಣಿ ಪರೀಕ್ಷೆ ಕಂಡು ಬೆಚ್ಚಿಬಿದ್ದಿರುವ ದಕ್ಷಿಣ ಕೊರಿಯಾ (south korea), ತನ್ನ ಪರಮಾಪ್ತ ಸ್ನೇಹಿತ ಅಮೆರಿಕ ಮತ್ತು ಜಪಾನ್ ಜೊತೆ ಸೇರಿ ಸಮರಾಭ್ಯಾಸ ಆರಂಭಿಸಿದೆ. ಇದು ಕಿಮ್ (kim jong un) ಮತ್ತೆ ಕೆಂಗಣ್ಣು ಬೀರುವಂತೆ ಮಾಡಿದೆ.

ಅಮೆರಿಕ, ದಕ್ಷಿಣ ಕೊರಿಯಾ ಹಾಗೂ ಜಪಾನ್‌ ಜಂಟಿಯಾಗಿ ದಕ್ಷಿಣ ಕೊರಿಯಾ ಕಡಲ ತೀರದಲ್ಲಿ ಕ್ಷಿಪಣಿ ನಿಗ್ರಹ ಸಮರಾಭ್ಯಾಸ ನಡೆಸಿವೆ. ಇನ್ನು ಈ ಸಮರಾಭ್ಯಾಸದಲ್ಲಿ ಸುಮಾರು 110 ಯುದ್ಧ ವಿಮಾನಗಳ ಭಾಗಿಯಾಗಿದ್ದವು. ಈ ಚಟುವಟಿಕೆ ಒಂದೇ ದಿನಕ್ಕೆ ಮುಗಿಯುವುದಿಲ್ಲ, ಉತ್ತರ ಕೊರಿಯಾಗೆ ತಕ್ಕ ಉತ್ತರ ನೀಡುವ ಉದ್ದೇಶದಿಂದ ಏ.28ರ ವರೆಗೂ ಜಂಟಿ ಸಮರಭ್ಯಾಸ ನಡೆಸಲು ಅಮೆರಿಕ, ದಕ್ಷಿಣ ಕೊರಿಯಾ ನಿರ್ಧಾರ ಮಾಡಿವೆ. ಸ್ಥಳೀಯರಲ್ಲಿ ಈ ನಿರ್ಧಾರ ನೆಮ್ಮದಿ ಕೆಡಿಸಿದೆ.

Japan and South Korea started joint military drill with America

ಜಪಾನ್ ಬುಡಕ್ಕೂ ಬತ್ತಿ ಪಕ್ಕಾ!

ಕಳೆದ ವಾರವಷ್ಟೇ ಸರ್ವಾಧಿಕಾರಿ ಕಿಮ್ ಜಾಂಗ್ ಉನ್, ಸುಲಭವಾಗಿ ಪತ್ತೆ ಮಾಡಲು ಸಾಧ್ಯವಾಗದ ಮತ್ತು ಶತ್ರುಗಳ ನೆಲವನ್ನ ಸರ್ವನಾಶ ಮಾಡಬಲ್ಲ ಖಂಡಾಂತರ ಕ್ಷಿಪಣಿ ಪರೀಕ್ಷೆ ಮಾಡಿದ್ದ. ಘನ-ಇಂಧನ ಬಳಸಿ ಉಡಾಯಿಸಬಲ್ಲ ಹೊಸ ಖಂಡಾಂತರ ಕ್ಷಿಪಣಿ (ICBM) ಅಮೆರಿಕ ಮಾತ್ರವಲ್ಲ ಉ.ಕೊರಿಯಾ ಪಕ್ಕದ ಶತ್ರು ರಾಷ್ಟ್ರ ದಕ್ಷಿಣ ಕೊರಿಯಾ ಹಾಗೂ ಜಪಾನ್ ಬುಡಕ್ಕೂ ಬತ್ತಿ ಇಡುವುದು ಪಕ್ಕಾ ಎಂಬ ಎಚ್ಚರಿಕೆ ನೀಡಲಾಗಿತ್ತು. ಈ ಬೆಳವಣಿಗೆ ಹಿನ್ನೆಲೆಯಲ್ಲಿ ಕಿಮ್‌ಗೆ ತಕ್ಕ ಉತ್ತರ ನೀಡಲಾಗುತ್ತಿದೆ.

100ಕ್ಕೂ ಹೆಚ್ಚು ಕ್ಷಿಪಣಿ ಪ್ರಯೋಗ

ಕಿಮ್ ಜಾಂಗ್ ಉನ್ ಅಮೆರಿಕ ಮತ್ತು ಜಪಾನ್, ದಕ್ಷಿಣ ಕೊರಿಯಾ ವಿರುದ್ಧ ಅದೆಷ್ಟು ರೊಚ್ಚಿಗೆದ್ದಿದ್ದಾನೆ ಎಂದರೆ, ಕಳೆದ 1 ವರ್ಷದಲ್ಲಿ ಸುಮಾರು 100ಕ್ಕೂ ಹೆಚ್ಚು ಕ್ಷಿಪಣಿಗಳನ್ನು ಸಮುದ್ರಕ್ಕೆ ಉಡಾಯಿಸಿದ್ದಾನೆ. ಈ ಮೂಲಕ ತನ್ನ ಶತ್ರುಗಳಿಗೆ ಮೇಲಿಂದ ಮೇಲೆ ಎಚ್ಚರಿಕೆ ನೀಡುವ ಜೊತೆಗೆ, ತನ್ನ ತಂಟೆಗೆ ಬಂದರೆ ಸುಮ್ಮನೆ ಇರುವುದಿಲ್ಲ ಎಂದು ಉತ್ತರಿಸುತ್ತಿದ್ದಾನೆ. ಆದರೂ ಈಗ ದಕ್ಷಿಣ ಕೊರಿಯಾ ಮತ್ತು ಜಪಾನ್ ಸೇನೆ ಅಮೆರಿಕದ ಜೊತೆಗೆ ಸೇರಿ ಕಿಮ್ ಕೆಣಕುವ ಕೆಲಸ ಮಾಡಿದೆ.

Japan and South Korea started joint military drill with America

ದಕ್ಷಿಣ ಕೊರಿಯಾ ತಪ್ಪು ಜಪಾನ್‌ಗೆ ಬರೆ!

ಅಂದಹಾಗೆ ತಪ್ಪು ಮಾಡಿರುವುದು ದಕ್ಷಿಣ ಕೊರಿಯಾ, ಆದರೆ ಪೆಟ್ಟು ಬೀಳುತ್ತಿರುವುದು ಮಾತ್ರ ಜಪಾನ್‌ಗೆ. ದಕ್ಷಿಣ ಕೊರಿಯಾ ಅಮೆರಿಕ ಜೊತೆ ಸೇರಿ ಮಿಲಿಟರಿ ಡ್ರಿಲ್ ನಡೆಸಿದ ನಂತರ ತನ್ನ ಸಿಟ್ಟನ್ನು ಮತ್ತೊಂದು ನೆರೆ ರಾಷ್ಟ್ರ ಜಪಾನ್ ಮೇಲೆ ತೋರಿಸುತ್ತಿದ್ದಾನೆ ಕಿಮ್. ಮಿಲಿಟರಿ ಸಾಮರ್ಥ್ಯದ ಮೂಲಕ ಎಚ್ಚರಿಕೆ ನೀಡುತ್ತಾ ಬಂದಿರುವ ಕಿಮ್ ಜಾಂಗ್ ಉನ್ ಜಪಾನ್ ಎದೆ ನಡುಗುವಂತೆ ಮಾಡಿದ್ದ. ಆದರೆ ಅಮೆರಿಕ ಎರಡೂ ರಾಷ್ಟ್ರಗಳಿಗೆ ಧೈರ್ಯ ತುಂಬುವ ನೆಪದಲ್ಲಿ ಬಂದಿದ್ದರೂ ಕಿಮ್ ಜೊತೆ ಕಿರಿಕ್ ಪಕ್ಕಾ.

Japan and South Korea started joint military drill with America

ಹೀಗೆ ಕೆಂಡದಂತಹ ನೆಲಕ್ಕೆ ಕಾಲಿಟ್ಟಿರುವ ಅಮೆರಿಕ ಸೇನೆ ತನ್ನ ಸ್ನೆಹಿತರಾದ ಜಪಾನ್ ಮತ್ತು ದಕ್ಷಿಣ ಕೊರಿಯಾಗೆ ಧೈರ್ಯ ತುಂಬುವ ಕೆಲಸ ಮಾಡುತ್ತಿದೆ. ಇನ್ನೊಂದು ಕಡೆ ಎಲ್ಲಾ ಬೆಳವಣಿಗೆ ಬಗ್ಗೆ ಕಿಮ್ ಜಾಂಗ್ ಉನ್ ತನ್ನದೇ ಲೆಕ್ಕಾಚಾರ ಹಾಕಿ ಸುಮ್ಮನೆ ಕೂತಿದ್ದಾನೆ. ಕಿಮ್ ಕೋಪ ಅದ್ಯಾವ ಕ್ಷಿಪಣಿಯ ರೂಪದಲ್ಲಿ ಹೊರಗೆ ಬರಲಿದೆ ಎಂಬುದನ್ನ ಕಾದು ನೋಡಬೇಕು. ಹಾಗೇ ಅಮೆರಿಕ ಜೊತೆ ದಕ್ಷಿಣ ಕೊರಿಯಾ ಮತ್ತು ಜಪಾನ್ ನಡೆಸುತ್ತಿರುವ ಜಂಟಿ ಸಮರಭ್ಯಾಸದ ಬಗ್ಗೆ ಚೀನಾ ಹೇಗೆ ರಿಯಾಕ್ಟ್ ಮಾಡಲಿದೆ ಎಂಬುದು ಕುತೂಹಲ ಕೆರಳಿಸಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+