• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ವಿಶ್ವಸಂಸ್ಥೆಯಲ್ಲಿ ಪಾಕಿಸ್ತಾನಕ್ಕೆ ಮತ್ತೆ ಮುಖಭಂಗ, ಸಿಕ್ಕಿದ್ದು ಚೀನಾ ಬೆಂಬಲ ಮಾತ್ರ

|

ನ್ಯೂಯಾರ್ಕ್, ಆಗಸ್ಟ್ 16: ಜಮ್ಮು ಮತ್ತು ಕಾಶ್ಮೀರದ ವಿಶೇಷ ಸ್ಥಾನಮಾನ ರದ್ದುಗೊಳಿಸಿರುವ ಭಾರತದ ಕ್ರಮವನ್ನು ವಿರೋಧಿಸಿ ವಿಶ್ವಸಂಸ್ಥೆಯ ಭದ್ರತಾ ಮಂಡಳಿಗೆ ದೂರು ಸಲ್ಲಿಸಿದ್ದ ಪಾಕಿಸ್ತಾನಕ್ಕೆ ತೀವ್ರ ಮುಖಭಂಗವಾಗಿದೆ.

ಮೊದಲಿನಿಂದಲೂ ಪಾಕಿಸ್ತಾನಕ್ಕೆ ಬೆಂಬಲ ಸೂಚಿಸುತ್ತಾ ಬಂದಿರುವ ಚೀನಾ ಮಾತ್ರ ಭದ್ರತಾ ಮಂಡಳಿಯಲ್ಲಿ ಶುಕ್ರವಾರ ನಡೆದ ಮುಚ್ಚಿದ ಬಾಗಿಲಿನ ಸಭೆಯಲ್ಲಿ ಪಾಕ್ ಪರವಾಗಿ ನಿಂತಿತ್ತು. ಆದರೆ, ಬೇರೆ ಯಾವ ದೇಶಗಳಿಂದಲೂ ಪಾಕಿಸ್ತಾನದ ಅಹವಾಲಿಗೆ ಬೆಂಬಲ ಸಿಗಲಿಲ್ಲ.

ವಿಡಿಯೋ: ಪಾಕಿಸ್ತಾನಿ ಪತ್ರಕರ್ತರತ್ತ 'ಸ್ನೇಹದ ಹಸ್ತ' ನೀಡಿದ ಭಾರತ ರಾಯಭಾರಿ

ಇದು ಮುಚ್ಚಿದ ಬಾಗಿಲಿನ ಅನೌಪಚಾರಿಕ ಸಭೆ ಆಗಿದ್ದರಿಂದ ಯಾವುದೇ ಔಪಚಾರಿಕ ನಿರ್ಧಾರದ ಕುರಿತಾದ ಪ್ರಕಟಣೆ ನೀಡಲಿಲ್ಲ.

ಭಾರತದ ನಿರ್ಧಾರವು ಏಕಪಕ್ಷೀಯವಾಗಿದೆ ಮತ್ತು ಅಪಾಯಕಾರಿಯಾಗಿದೆ ಎಂದು ಚೀನಾ ಪ್ರತಿಪಾದಿಸಿತು. ಈ ವಿಚಾರದಲ್ಲಿ ಪಾಕಿಸ್ತಾನವನ್ನು ಬೆಂಬಲಿಸುವುದಾಗಿ ಹೇಳಿದ ಚೀನಾ, ಎರಡೂ ದೇಶಗಳು ಸ್ವಯಂ ನಿಯಂತ್ರಣ ಕಾಪಾಡಿಕೊಳ್ಳುವಂತೆ ಸಲಹೆ ನೀಡಿತು.

ಭಾರತದ ನಿರ್ಧಾರಕ್ಕೆ ಬೆಂಬಲ ವ್ಯಕ್ತಪಡಿಸಿದ ರಷ್ಯಾ, ಈ ವಿವಾದವನ್ನು ಉಭಯ ದೇಶಗಳು ದ್ವಿಪಕ್ಷೀಯ ಮಾತುಕತೆಯ ಮೂಲಕವೇ ಬಗೆಹರಿಸಿಕೊಳ್ಳಬೇಕು ಎಂದು ಹೇಳಿತು.

370 ನೇ ವಿಧಿ ರದ್ದು: ವಿಶ್ವಸಂಸ್ಥೆಗೆ ಚಾಡಿ ಹೇಳಲು ಹೊರಟಿತೇ ಚೀನಾ?

ರಷ್ಯಾದ ಉಪ ಕಾಯಂ ಪ್ರತಿನಿಧಿ ಡಿಮಿಟ್ರಿ ಪೊಲಿಯನ್ಸ್‌ಕಿ, ಇದು ಭಾರತ ಮತ್ತು ಪಾಕಿಸ್ತಾನಗಳಿಗೆ ಸಂಬಂಧಿಸಿದ ದ್ವಿಪಕ್ಷೀಯ ವಿಚಾರವಾಗಿದೆ ಎಂಬುದು ತಮ್ಮ ದೇಶದ ನಿಲುವಾಗಿದೆ ಎಂದು ಈ ಮೊದಲು ಹೇಳಿದ್ದರು.

ಈ ವಿಚಾರದ ಕುರಿತಂತೆ ವಿಶ್ವಸಂಸ್ಥೆ ಭದ್ರತಾ ಸಮಿತಿ ಅಧ್ಯಕ್ಷ ಜೊವಾನ್ನಾ ವ್ರೊನೆಕ್ಕಾ ಅವರಿಗೆ ಪಾಕಿಸ್ತಾನ ಇದಕ್ಕೂ ಮೊದಲು ಪತ್ರ ಬರೆದಿತ್ತು. ಪಾಕಿಸ್ತಾನದ ಪತ್ರಕ್ಕೆ ಸ್ಪಂದಿಸಿದ್ದ ಚೀನಾ, ಭದ್ರತಾ ಮಂಡಳಿಯಲ್ಲಿ ಮುಚ್ಚಿದ ಬಾಗಿಲಿನ ಸಭೆಗೆ ಒತ್ತಾಯಿಸಿತ್ತು. 50 ವರ್ಷಗಳಲ್ಲಿಯೇ ಇದೇ ಮೊದಲ ಬಾರಿಗೆ ಕಾಶ್ಮೀರಕ್ಕೆ ಸಂಬಂಧಿಸಿದಂತೆ ಈ ರೀತ ಸಭೆ ನಡೆದಿದೆ.

1965ರಲ್ಲಿ ಈ ರೀತಿಯ ಸಭೆ ನಡೆದಿತ್ತು. ಇದು ಮುಚ್ಚಿದ ಬಾಗಿಲಿನ ಸಭೆಯಾಗಿರುವುದರಿಂದ ಇದನ್ನು ಸಂಪೂರ್ಣ ಭದ್ರತಾ ಸಭೆ ಎಂದು ಪರಿಗಣಿಸುವುದಿಲ್ಲ.

English summary
A closed door meeting on Jammu and Kashmir issue in UNSC has concluded. Russia supports India. China backs Pakistan.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X