ಚೀನಾದೊಂದಿಗೆ ಭಾರತದ ಸಂಬಂಧ ಕ್ಲಿಷ್ಟಕರವಾಗಿದೆ: ಜೈಶಂಕರ್

ಚೀನಾದೊಂದಿಗೆ ಭಾರತದ ಸಂಬಂಧ ತುಂಬಾ ಕ್ಲಿಷ್ಟಕರವಾಗಿದೆ ಎಂದು ವಿದೇಶಾಂಗ ಸಚಿವ ಎಸ್ ಜೈಶಂಕರ್ ಹೇಳಿದ್ದಾರೆ.

ಮ್ಯೂನಿಚ್ ಭದ್ರತಾ ಸಮ್ಮೇಳನದಲ್ಲಿ ಮಾತನಾಡಿದ ಎಸ್. ಜೈಶಂಕರ್, ದ್ವಿಪಕ್ಷೀಯ ಸಂಬಂಧಗಳ ಪ್ರಗತಿಯು ಗಡಿಯೊಳಗಿನ ಪರಿಸ್ಥಿತಿಗಳನ್ನು ಅವಲಂಬಿಸಿರುತ್ತದೆ ಎಂಬುದನ್ನು ಸ್ಪಷ್ಟಪಡಿಸಿದರು.

ಗಡಿಯಲ್ಲಿ ಸೇನೆಯನ್ನು ನಿಯೋಜಿಸಬಾರದು ಎಂಬ ಒಪ್ಪಂದಗಳನ್ನು ಚೀನಾ ಉಲ್ಲಂಘಿಸಿರುವುದರಿಂದ ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸಿರುವುದಾಗಿ ತಿಳಿಸಿದ್ದಾರೆ.

ದೂರದಲ್ಲಿರುವ ಸಣ್ಣ ಸಣ್ಣ ದೇಶಗಳಿಗೆ ಭಾರೀ ಪ್ರಮಾಣದಲ್ಲಿ ಸಾಲ ನೀಡುವ ಮೂಲಕ ಚೀನಾ ಆಯಕಟ್ಟಿನ ಪ್ರದೇಶಗಳ ಮೇಲೆ ಹಿಡಿತ ಸಾಧಿಸುತ್ತಿರುವುದು ಆತಂಕಕಾರಿ ಸಂಗತಿ ಎಂದು ಜೈ ಶಂಕರ್ ಹೇಳಿದರು. ವಿಲೀನದ ಅನ್ವೇಷಣೆಯಲ್ಲಿ ಮಾಡಲಾಗುತ್ತಿರುವ ಇಂತಹ ಕೃತ್ಯಗಳು ಇತರ ರಾಷ್ಟ್ರಗಳ ಸಾರ್ವಭೌಮತ್ವಕ್ಕೆ ಧಕ್ಕೆಯುಂಟಾಗುವಂತಹದ್ದು ಎಂದು ಅಭಿಪ್ರಾಯಪಟ್ಟರು.

Jaishankar Says, Indias Relations With China Going Through Very Difficult Phase

45 ವರ್ಷಗಳಿಂದ ಶಾಂತಿಯುತವಾಗಿದ್ದ ವಾಸ್ತವ ಗಡಿ ರೇಖೆಯುದ್ದಕ್ಕೂ ಚೀನಾದಂತಹ ದೊಡ್ಡ ದೊಡ್ಡ ದೇಶ ಒಪ್ಪಂದಗಳನ್ನು ಉಲ್ಲಂಘಿಸಿದರೆ ಅದು ಇಡೀ ಅಂತಾರಾಷ್ಟ್ರೀಯ ಸಮುದಾಯಕ್ಕೆ ಕಳವಕಾರಿ ಸಂಗತಿಯಾಗಿದೆ ಎಂದು ಹೇಳಿದರು.

ದ್ವಿಪಕ್ಷೀಯ ಸಹಕಾರ, ಉಕ್ರೇನ್ ಪರಿಸ್ಥಿತಿ ಮತ್ತು ಇಂಡೋ-ಸ್ಪೆಸಿಫಿಕ್ ಸಹಕಾರ ಸೇರಿದಂತೆ ಹಲವು ವಿಚಾರಗಳ ಕುರಿತು ಫ್ರಾನ್ಸ್ ವಿದೇಶಾಂಗ ಸಚಿವ ಜೀನ್‌ ವೆಸ್‌ಲೆ ಅವರೊಂದಿಗೆ ಜೈಶಂಕರ್ ಮಾತನಾಡಿದ್ದಾರೆ.

ಪ್ಯಾರಿಸ್‌ಗೆ ಆಗಮಿಸಿದ್ದೇನೆ, ವೆಸ್‌ಲೆ ಅವರ ಬಳಿ ಸುದೀರ್ಘ ಮಾತುಕತೆ ನಡೆಸಿದ್ದೇನೆ, ಉಕ್ರೇನ್ ಪರಿಸ್ಥಿತಿ, ಇಂಡೋ ಫೆಸಿಫಿಕ್ ಮತ್ತು ಜಂಟಿ ಸಮಗ್ರ ಕ್ರಿಯಾ ಯೋಜನೆ ಮೇಲಿನ ಚರ್ಚೆಯು ಪರಸ್ಪರ ನಂಬಿಕೆ ಹಾಗೂ ಜಾಗತಿಕ ಪಾಲುದಾರಿಕೆಯನ್ನು ಪ್ರತಿಬಿಂಬಿಸುತ್ತದೆ.

ಇಂಡೋ-ಪೆಸಿಫಿಕ್ ಸಹಕಾರಕ್ಕೆ ಸಂಬಂಧಿಸಿದಂತೆ ಯುರೋಪಿಯನ್ ಒಕ್ಕೂಟದ ಮಂತ್ರಿಗಳ ವೇದಿಕೆಯಲ್ಲಿ ಚರ್ಚಿಸಲು ಎದುರುನೋಡುತ್ತಿದ್ದೇವೆ ಎಂದು ಹೇಳಿದರು.

ಜೈಶಂಕರ್ ಅವರು ಜರ್ಮನಿಯಲ್ಲಿ ನಡೆದ ಮ್ಯೂನಿಚ್ ಭದ್ರತಾ ಸಮ್ಮೇಳನ-2022, ಯುರೋಪ್ , ಏಷ್ಯಾ ಹಾಗೂ ಪ್ರಪಂಚದ ಇತರೆ ಭಾಗಗಳ ಸಚಿವರೊಂದಿಗೆ ಸರಣಿ ಸಭೆಗಳಲ್ಲಿ ಭಾಗವಹಿಸಿದ ಬಳಿಕ ಫ್ರಾನ್ಸ್‌ಗೆ ಆಗಮಿಸಿದ್ದಾರೆ.

ಜೈಶಂಕರ್ ಅವರು ಭಾನುವಾರದಿಂದ ಮೂರು ದಿನಗಳ ಭೇಟಿ ಸಲುವಾಗಿ ಫ್ರಾನ್ಸ್‌ಗೆ ಆಗಮಿಸಿದ್ದಾರೆ. ಫೆಬ್ರವರಿ 22 ರಂದು ಯುರೋಪಿಯನ್ ಒಕ್ಕೂಟಗಳ ಮಂತ್ರಿಗಳ ವೇದಿಕೆಯಲ್ಲಿ ಪಾಲ್ಗೊಳ್ಳಲಿದ್ದಾರೆ.

Recommended Video

      Rohit Sharma Lifestyle: 200 ಕೋಟಿ ರೂ. ಒಡೆಯ ರೋಹಿತ್ ಶರ್ಮಾ ಲೈಫ್ ಸ್ಟೈಲ್ ಹೇಗಿದೆ ಗೊತ್ತಾ? | Oneindia Kannada

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+