ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಇಟಲಿಯಲ್ಲಿ 48 ಗಂಟೆಗಳಲ್ಲಿ ಕೊರೊನಾ ವೈರಸ್‌ನಿಂದ 717 ಮಂದಿ ಸಾವು

|
Google Oneindia Kannada News

ರೋಮ್, ಮಾರ್ಚ್ 17: ಇಟಲಿಯಲ್ಲಿ ಕಳೆದ 48 ಗಂಟೆಗಳಲ್ಲಿ 717 ಮಂದಿ ಮೃತಪಟ್ಟಿರುವ ಆತಂಕಕಾರಿ ಮಾಹಿತಿ ಹೊರ ಬಿದ್ದಿದೆ.

ಇದರಿಂದ ಇಟಲಿಯಲ್ಲಿ ಒಟ್ಟು ಕೊರೊನಾದಿಂದ ಮೃತಪಟ್ಟವರ ಸಂಖ್ಯೆ 2158ಕ್ಕೇರಿದೆ.

ಇಟಲಿಯಲ್ಲಿ ಸೋಮವಾರ 349 ಮಂದಿ ಕೊರೊನಾದಿಂದ ಸಾವನ್ನಪ್ಪಿದ್ದಾರೆ. ಇಟಲಿಯಲ್ಲಿ ಇದೀಗ ಕೊರೊನಾ ಸೋಂಕಿತರ ಸಂಖ್ಯೆ 27,980ಕ್ಕೇರಿದೆ. ಕಳೆದ ನಾಲ್ಕು ದಿನಗಳ ಹಿಂದಷ್ಟೇ 15,113 ಮಂದಿ ಸೋಂಕಿತರಿದ್ದರು.

corona

ಮಿಲನ್ಸ್ ಲೋಂಬಾರ್ಡಿಯಲ್ಲಿ 1420 ಮಂದಿ ಮೃತಪಟ್ಟಿದ್ದಾರೆ. ಇಟಲಿಯ ಶೇ.66 ರಷ್ಟು ಭಾಗವನ್ನು ಕೊರೊನಾ ಆವರಿಸಿಕೊಂಡಿದೆ.

Breaking: ಕರ್ನಾಟಕದಲ್ಲಿ 8ಕ್ಕೆ ಏರಿದ ಕೊರೊನಾ ವೈರಸ್ ಸೋಂಕಿತರ ಸಂಖ್ಯೆBreaking: ಕರ್ನಾಟಕದಲ್ಲಿ 8ಕ್ಕೆ ಏರಿದ ಕೊರೊನಾ ವೈರಸ್ ಸೋಂಕಿತರ ಸಂಖ್ಯೆ

ಇನ್ನು ಕೊರೊನಾ ದಾಳಿಗೆ ಇಡೀ ಅಮೆರಿಕಾ ಬಂದ್ ಆಗಿದೆ. ವಿಶ್ವಾದ್ಯಂತ 6 ಸಾವಿರಕ್ಕೂ ಅಧಿಕ ಮಂದಿಯನ್ನು ಬಲಿ ಪಡೆದಿರುವ ಮಾರಕ ಕೊರೊನಾ ವೈರಸ್ ಭೀತಿ ಇದೀಗ ಅಮೆರಿಕವನ್ನೂ ಬಿಟ್ಟಿಲ್ಲ.

ಅಲ್ಲಿನ, ಶಾಲೆ, ಬಾರ್‌, ಮಾಲ್ಗಳು ಸೇರಿದಂತೆ ಎಲ್ಲವೂ ಬಂದ್ ಆಗಿದೆ. ಅಮೆರಿಕ ಸರ್ಕಾರ ಅಧಿಕೃತವಾಗಿ ಯಾವುದೇ ಬಂದ್‌ಗೆ ಆದೇಶ ನೀಡಿಲ್ಲ. ಆದರೆ ಆಯಾ ರಾಜ್ಯಗಳ ಗವರ್ನರ್ ಹಾಗೂ ಮೇಯರ್‌ಗಳು ಅಘೋಷಿತ ಬಂದ್‌ಗೆ ಕರೆ ನೀಡಿವೆ.

English summary
Italy Reports 717 Coronavirus Deaths In 48 Hours And Total Reaches 2158 Deaths.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X