ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೊರೊನಾ ಭೀತಿ: 1.6 ಕೋಟಿ ಜನರ ಸಂಚಾರಕ್ಕೆ ಇಟಲಿ ನಿರ್ಬಂಧ

|
Google Oneindia Kannada News

ರೋಮ್, ಮಾರ್ಚ್ 9: ಇಟಲಿಯಲ್ಲಿ ಬರೋಬ್ಬರಿ 233 ಮಂದಿಯನ್ನು ಬಲಿ ಪಡೆದಿರುವ ಮಾರಣಾಂತಿಕ ಕೋವಿಡ್ 19ಗೆ ಹೆದರಿ ಜನರ ಸಂಚಾರಕ್ಕೆ ನಿಷೇಧ ಹೇರಲಾಗಿದೆ.

ದೇಶಾದ್ಯಂತ ಚಿತ್ರಮಂದಿರ, ರಂಗಮಂದಿರ, ಮ್ಯೂಸಿಯಂ, ಶಾಲೆ, ನೈಟ್‌ಕ್ಲಬ್, ಕ್ಯಾಸಿನೋಗಳನ್ನು ಬಂದ್ ಮಾಡಿದೆ. ವಿಶ್ವದಾದ್ಯಂತ ತಲ್ಲಣ ಸೃಷ್ಟಿಸಿರುವ ಮಾರಕ ಕೊರೊನಾ ವೈರಸ್ 16 ದಿನಗಳಲ್ಲಿ ಬರೋಬ್ಬರಿ 233 ಮಂದಿಯನ್ನು ಬಲಿ ಪಡೆದಿದೆ.

ಕೊರೊನಾ ಭೀತಿ: ಬೆಂಗಳೂರಿನ ಎಲ್‌ಕೆಜಿ, ಯುಕೆಜಿ ಶಾಲೆಗಳಿಗೆ ಇಂದಿನಿಂದ ರಜೆಕೊರೊನಾ ಭೀತಿ: ಬೆಂಗಳೂರಿನ ಎಲ್‌ಕೆಜಿ, ಯುಕೆಜಿ ಶಾಲೆಗಳಿಗೆ ಇಂದಿನಿಂದ ರಜೆ

ಕೊರೊನಾ ವೈರಸ್ ಭೀತಿ ಹಿನ್ನೆಲೆಯಲ್ಲಿ ನಾಟಿ ವೈದ್ಯ ಪದ್ಧತಿ ಮೂಲಕ ದೇಶದಾದ್ಯಂತ ಪ್ರಸಿದ್ಧಿ ಪಡೆದಿರುವ ನರಸೀಪುರದ ನಾರಾಯಣ ಮೂರ್ತಿ ಅವರು ಔಷಧ ನೀಡುವುದನ್ನು ತಾತ್ಕಾಲಿಕವಾಗಿ ನಿಲ್ಲಿಸಿದ್ದಾರೆ.

ದೇಶದ ವಿವಿಧ ಭಾಗಗಳಿಂದ ಔಷಧಕ್ಕಾಗಿ ವಾರದಲ್ಲಿ ಮೂರು ದಿನ ನರಸೀಪುರಕ್ಕೆ ಸಾವಿರಾರು ಜನರು ಆಗಮಿಸುತ್ತಾರೆ. ಹತ್ತು ಸಾವಿರಕ್ಕೂ ಹೆಚ್ಚು ಜನ ಒಂದೆಡೆ ಸೇರುತ್ತಿದ್ದ ಹಿನ್ನೆಲೆಯಲ್ಲಿ ಜಿಲ್ಲಾ ಆರೋಗ್ಯಾಧಿಕಾರಿಯಿಂದ ತಾತ್ಕಾಲಿಕವಾಗಿ ಔಷಧ ಕೊಡುವುದನ್ನು ನಿಲ್ಲಿಸುವಂತೆ ನಾರಾಯಣಮೂರ್ತಿ ಅವರಿಗೆ ಸೂಚನೆ ನೀಡಲಾಗಿದೆ.

ಫೆ.21ರಂದು ಇಟಲಿಯಲ್ಲಿ ಮೊದಲ ಕೊರೊನಾ ಸೋಂಕು ಪತ್ತೆ

ಫೆ.21ರಂದು ಇಟಲಿಯಲ್ಲಿ ಮೊದಲ ಕೊರೊನಾ ಸೋಂಕು ಪತ್ತೆ

ಇಡೀ ವಿಶ್ವದಲ್ಲಿ ಕೊರೊನಾ ಬಾಧೆಯಿಂದ ಅತಿ ಹೆಚ್ಚು ನಲುಗಿರುವ ದೇಶಗಳಲ್ಲಿ ಚೀನಾ ಬಳಿಕ ಇಟಲಿ ಇದೆ. ಇಲ್ಲಿ ಫೆ.21 ರಂದು ಮೊದಲ ಸೋಂಕು ಪತ್ತೆಯಾಗಿತ್ತು. ಈವರೆಗೆ ಸೋಂಕಿತರ ಸಂಖ್ಯೆ 5883ಕ್ಕೇರಿದೆ.

15 ಪ್ರಾಂತ್ಯಗಳಿಗೆ ಸಂಚಾರ ನಿಷೇಧ

15 ಪ್ರಾಂತ್ಯಗಳಿಗೆ ಸಂಚಾರ ನಿಷೇಧ

ಶ್ರೀಮಂತ ಪ್ರದೇಶವಾದ ಉತ್ತರ ಇಟಲಿಯನ್ನು ಕೊರೊನಾ ಕಾಡುತ್ತಿರುವ ಹಿನ್ನೆಲೆಯಲ್ಲಿ ಅಲ್ಲಿನ ಲೋಂಬಾರ್ಡಿ ಹಾಗೂ ಸುತ್ತಲಿನ ಪ್ರಾಂತ್ಯಗಳಿಗೆ ಜನರು ಪ್ರವೇಶಿಸುವುದು ಅಥವಾ ಆ ಪ್ರಾಂತ್ಯದೊಳಕ್ಕೆ ಸುತ್ತಾಡುವುದಕ್ಕೆ ಏ.3ರವರೆಗೆ ನಿರ್ಬಂಧಿಸಲಾಗಿದೆ.

80 ಕೊರೊನಾ ಸೋಂಕಿತರನ್ನು ಇರಿಸಿದ್ದ ಹೋಟೆಲ್ ಕುಸಿತ: 10 ಮಂದಿ ಸಾವು80 ಕೊರೊನಾ ಸೋಂಕಿತರನ್ನು ಇರಿಸಿದ್ದ ಹೋಟೆಲ್ ಕುಸಿತ: 10 ಮಂದಿ ಸಾವು

ಅರುಣಾಚಲ ಪ್ರದೇಶಕ್ಕೆ ವಿದೇಶಿಯರ ಭೇಟಿಗೆ ನಕಾರ

ಅರುಣಾಚಲ ಪ್ರದೇಶಕ್ಕೆ ವಿದೇಶಿಯರ ಭೇಟಿಗೆ ನಕಾರ

ಭಾರತಕ್ಕೆ ಬಂದ ವಿದೇಶಿಯರು ಮತ್ತು ವಿದೇಶಕ್ಕೆ ಹೋಗಿ ಬಂದ ಭಾರತೀಯರಿಂದಾಗಿ , ದೇಶದಲ್ಲಿ ದಿನೇ ದಿನೇ ಕೊರೊನಾ ಸೋಂಕು ಪೀಡಿತರ ಸಂಖ್ಯೆ ಹೆಚ್ಚಾಗುತ್ತಿದೆ. ಈ ಹಿನ್ನೆಲೆಯಲ್ಲಿ ರಾಜ್ಯಕ್ಕೆ ವಿದೇಶಿಯರ ಭೇಟಿ ಮೇಲೆ ಅರುಣಾಚಲ ಪ್ರದೇಶ ಸರ್ಕಾರ ನಿಷೇಧ ಹೇರಿದೆ. ಚೀನಾದೊಂದಿಗೆ ಗಡಿ ಹಂಚಿಕೊಂಡಿರುವ ಅರುಣಾಚಲ ಪ್ರದೇಶಕ್ಕೆ ಭೇಟಿ ನೀಡಬೇಕಾದಲ್ಲಿ ಸುರಕ್ಷಿತ ಪ್ರದೇಶ ಸಮ್ಮತಿ ಪತ್ರ ಪಡೆಯುವುದು ಕಡ್ಡಾಯವಾಗಿದೆ.

ಸ್ಯಾನಿಟೈಸರ್‌ಗೆ 1 ಸಾವಿರ ರೂ

ಸ್ಯಾನಿಟೈಸರ್‌ಗೆ 1 ಸಾವಿರ ರೂ

ಕೊರೊನಾ ವೈರಸ್‌ನಿಂದ ರಕ್ಷಿಸಿಕೊಳ್ಳುವ ನಿಟ್ಟಿನಿಂದ ಜನರು ಹ್ಯಾಂಡ್ ಸ್ಯಾನಿಟೈಸರ್ ಅನ್ನು ಖರೀದಿಸಲು ಅಂಗಡಿಗೆ ಮುಗಿ ಬೀಳುತ್ತಿದ್ದಾರೆ. ಹೀಗಾಗಿ ಹ್ಯಾಂಡ್ ಸ್ಯಾನಿಟೈಸರ್ ಗಳು ಅಂಗಡಿಗಳಲ್ಲಿ ಮಾತ್ರವಲ್ಲದೆ ಆನ್‌ಲೈನ್‌ನಲ್ಲೂ ಹೆಚ್ಚಳ ಕಂಡಿದೆ. 300 ಎಂಎಲ್ ಸ್ಯಾನಿಟೈಸರ್ ಬೆಲೆ 30 ಪಟ್ಟು ಹೆಚ್ಚಾಗಿದೆ. ಒಂದು ಸಾವಿರ ರೂಗೆ ಸ್ಯಾನಿಟೈಸರ್ ದೊರೆಯುತ್ತಿದೆ.

ಕೊರೊನಾ ವೈರಸ್ ಭೀತಿ: 'No Entry' ಬೋರ್ಡ್ ಹಿಡಿದ ಅರುಣಾಚಲ ಪ್ರದೇಶಕೊರೊನಾ ವೈರಸ್ ಭೀತಿ: 'No Entry' ಬೋರ್ಡ್ ಹಿಡಿದ ಅರುಣಾಚಲ ಪ್ರದೇಶ

English summary
Italy has imposed the most draconian lockdown outside mainland China as it attempts to control Europe's biggest outbreak of the novel coronavirus.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X