ಭಯೋತ್ಪಾದನೆಯಿಂದ ದೂರ ಇರೋಕೆ ತಿಂಗಳಿಗೆ ಐನೂರು ಡಾಲರ್

Posted By:
Subscribe to Oneindia Kannada

ಇಟಲಿ, ಆಗಸ್ಟ್ 31: ಇಸ್ಲಾಮಿಕ್ ಸ್ಟೇಟ್ ಮತ್ತಿತರ ಭಯೋತ್ಪಾದನೆ ಸಂಘಟನೆಗಳು ಇಡೀ ಯುರೋಪ್ ಗೆ ತಲೆ ನೋವಾಗಿದ್ದು, ಇಟಲಿ ಸರ್ಕಾರ ಭಯೋತ್ಪಾದನೆ ವಿರುದ್ಧದ ಹೋರಾಟವನ್ನು ಮತ್ತೊಂದು ಎತ್ತರಕ್ಕೆ ತೆಗೆದುಕೊಂಡು ಹೋಗಿದೆ. ಅದಕ್ಕಾಗಿ ಹೊಸ ಯೋಜನೆಯೊಂದನ್ನ ಪರಿಚಯಿಸುತ್ತಿದೆ.

ಈ ಯೋಜನೆ ಪ್ರಕಾರ, 18 ವರ್ಷ ತುಂಬಿದ 5 ಲಕ್ಷಕ್ಕೂ ಹೆಚ್ಚು ಮಂದಿಗೆ ಸರ್ಕಾರ ಐನೂರು ಡಾಲರ್ ಗೂ ಹೆಚ್ಚು ಮೊತ್ತದ ಗಿಫ್ಟ್ ವೋಚರ್ ಕೊಡುತ್ತದೆ. ಅದರಲ್ಲಿ ಮ್ಯೂಸಿಯಂಗಳಿಗೆ ಫ್ರೀಯಾಗಿ ಹೋಗಬಹುದು, ಸಂಗೀತ ಕಛೇರಿಗಳಿಗೆ ರಿಯಾಯ್ತಿ ದರದಲ್ಲಿ, ಸಿನಿಮಾಗಳಿಗೆ ಫ್ರೀಯಾಗಿ ಹೋಗಬಹುದು.[ಬೆಂಗಳೂರು, ಮುಂಬೈನಲ್ಲೂ ಐಎಸ್ ಐಎಸ್ ನಿಂದ ಚಾಕು ದಾಳಿಗೆ ಸ್ಕೆಚ್]

Italians receive free money to stay away from terrorism

ಇದರಿಂದ ಒಂದು ಸಂದೇಶ ಸ್ಪಷ್ಟವಾಗಿ ತಿಳಿಯುತ್ತದೆ. 18 ವರ್ಷ ತುಂಬಿದವರಿಗೆ ನಮ್ಮ ಸಂಸ್ಕೃತಿಯ ಪ್ರಾಮುಖ್ಯತೆ ಗೊತ್ತಾಗಬೇಕು. ಅದರಿಂದ ಅವರ ವೈಯಕ್ತಿಕ ಜೀವನ, ಸಾಮಾಜಿಕ ಜೀವನ ಎರಡರಲ್ಲೂ ಬದಲಾವಣೆ ಆಗುತ್ತದೆ ಎಂದಿದ್ದಾರೆ ಈ ಯೋಜನೆಯ ಹೊಣೆ ಹೊತ್ತಿರುವವರು.

ಪ್ಯಾರಿಸ್ ನಲ್ಲಿ ಭಯೋತ್ಪಾದಕರು ದಾಳಿ ನಡೆಸಿ, 130 ಜನರನ್ನು ಕೊಂದ ಮರುದಿನವೇ ಈ ಯೋಜನೆ ಘೋಷಿಸಲಾಯಿತು. ಇಟಲಿಯಲ್ಲಿ ನಿರುದ್ಯೋಗ ಸಮಸ್ಯೆ ಶೇ 35ರಷ್ಟಿದೆ. ಈ ರೀತಿ ಹಣ ನೀಡುವುದರಿಂದ ದೇಶದ ಬಗ್ಗೆ ಸಕಾರಾತ್ಮಕ ಆಲೋಚನೆ ಬೆಳೆಯುತ್ತದೆ ಎಂಬುದು ಸರ್ಕಾರದ ನಂಬಿಕೆ.[ಕಾಬೂಲ್ : ಅಮೆರಿಕದ ವಿವಿ ಮೇಲೆ ದಾಳಿ, 12 ಜನ ಸಾವು]

ಆದರೆ, ಈ ಕ್ರಮಕ್ಕೆ ವಿರೋಧ ವ್ಯಕ್ತಪಡಿಸಿರುವ ಕೆಲ ಮುಸ್ಲಿಂ ಸಮುದಾಯದವರು, ಶಂಕಿತ ಉಗ್ರರ ಮೇಲೆ ಕಣ್ಣಿಡಲು ಪೊಲೀಸರೇ ಹೀಗೊಂದು ಯೋಜನೆಯನ್ನು ಜಾರಿಗೆ ತರುವಂತೆ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ. ಆದರೆ ಇಟಲಿ ಸರ್ಕಾರ ತನ್ನ ನಿರ್ಧಾರದ ಬಗ್ಗೆ ಗಟ್ಟಿಯಾಗಿದೆ. ಈ ಯೋಜನೆಗಾಗಿಯೇ 300 ಮಿಲಿಯನ್ ಡಾಲರ್ ಮೀಸಲಾಗಿಟ್ಟಿದೆ.

ಈ ಯೋಜನೆ ಮುಂದಿನ ವರ್ಷದ ಕೊನೆಗೆ ಜಾರಿಗೆ ಬರುತ್ತದೆ. ವಿಪಕ್ಷಗಳೇನೋ ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದರೆ, ಅಂತಾರಾಷ್ಟ್ರೀಯ ಮಟ್ಟದಿಂದ ಮೆಚ್ಚುಗೆ ವ್ಯಕ್ತವಾಗಿದೆ. ಒಟ್ಟಿನಲ್ಲಿ ಇಟಲಿಯಲ್ಲಿ 18 ವರ್ಷದ ಎಲ್ಲರಿಗೂ ಈ ಯೋಜನೆಯಲ್ಲಿ ಹಣ ಸಿಗೋದು ಗ್ಯಾರಂಟಿ. ಜತೆಗೆ ಅದನ್ನು ಖರ್ಚು ಮಾಡೋದು ಹೇಗೆ ಅಂತ ಮೊಬೈಲ್ ಅಪ್ಲಿಕೇಷನ್ ಕೂಡ ಬಿಡುಗಡೆ ಮಾಡ್ತಾರಂತೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Italian government is set to launch a scheme, more than half a million 18-year-olds living in Italy are eligible to receive vouchers valued at more than $500 each. The vouchers will allow to visit museums free, go to concerts for reduced prices or watch movies.
Please Wait while comments are loading...