• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಕೊರೊನಾ ವೈರಸ್ 'ಅಸ್ತಿತ್ವದಲ್ಲಿಲ್ಲ' ಎಂದ ಇಟಲಿಗೆ ವಿಶ್ವ ಆರೋಗ್ಯ ಸಂಸ್ಥೆ ಎಚ್ಚರಿಕೆ

|

ಜಿನೇವಾ, ಜೂನ್ 2: ಇಟಲಿಯಲ್ಲಿ ಕೊರೊನಾವೈರಸ್ 'ಅಸ್ತಿತ್ವದಲ್ಲಿಲ್ಲ' ಎಂದ ಇಟಲಿಯ ವೈದ್ಯರಿಗೆ ವಿಶ್ವ ಆರೋಗ್ಯ ಸಂಸ್ಥೆ ಕೌಂಟರ್ ಕೊಟ್ಟಿದೆ.

   ಪ್ರತಿನಿತ್ಯ ಸೈಕಲ್ ತುಳಿಯೋದ್ರಿಂದ ಪರಿಸರ ಹಾಗೂ ಆರೋಗ್ಯಕ್ಕೂ ಪ್ರಯೋಜನ | Oneindia Kannada

   ಕೊರೊನಾ ವೈರಸ್ ಈಗಲೂ ಮಾರಣಾಂತಿಕವಾಗಿ ಈ ಕೊರೊನಾ ವೈರಸ್ ಇದ್ದಕ್ಕಿದ್ದಂತೆ ಕಡಿಮೆಯಾಗುವುದಿಲ್ಲ. ನಾವು ಎಚ್ಚರಿಕೆಯಿಂದ ಇರಬೇಕಾಗಿದೆ ಈಗಲೂ ಅದು ಮಾರಣಾಂತಿಕವೇ ಆಗಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಮೈಕೇಲ್ ರಿಯಾನ್ ತಿಳಿಸಿದ್ದಾರೆ.

   ಇಟಲಿಯಲ್ಲಿ ಕಡಿಮೆಯಾದ ಕೊರೊನಾ ಸೋಂಕು: ವೈದ್ಯರು ಏನಂತಾರೆ?

   ಕೊರೊನಾ ವಿರುದ್ಧ ಇಟಲಿ ಗೆಲುವು ಸಾಧಿಸಿದೆ. ಸೋಂಕಿನ ಎರಡನೆಯ ಅಲೆಯ ಬಗ್ಗೆ ತಜ್ಞರು ತುಂಬಾ ಎಚ್ಚರವಹಿಸಿದ್ದಾರೆ. ಹೊಸ ವಾಸ್ತವವನ್ನು ರಾಜಕಾರಣಿಗಳು ಪರಿಗಣನೆಗೆ ತೆಗೆದುಕೊಳ್ಳುವ ಅಗತ್ಯವಿದೆ . ದೇಶವನ್ನು ಸಹಜಸ್ಥಿತಿಗೆ ಮರಳಿ ತರಬೇಕಿದೆ ಎಂದು ವೈದ್ಯರು ಹೇಳಿದ್ದರು.

   ಇಟಲಿಯಲ್ಲಿ ಫೆಬ್ರವರಿ 21ರ ಬಳಿಕ 33 ಸಾವಿರ ಮಂದಿ ಸಾವು

   ಇಟಲಿಯಲ್ಲಿ ಫೆಬ್ರವರಿ 21ರ ಬಳಿಕ 33 ಸಾವಿರ ಮಂದಿ ಸಾವು

   ಇಟಲಿಯಲ್ಲಿ ಈಗ ಕೊರೊನಾ ವೈರಸ್ ಅಸ್ತಿತ್ವದಲ್ಲೇ ಇಲ್ಲ. ಫೆಬ್ರವರಿ 21ರ ಬಳಿಕ ಇಲ್ಲಿಯವರೆಗೆ ಇಟಲಿಯಲ್ಲಿ 33,415 ಮಂದಿ ಕೊರೊನಾವೈರಸ್‌ನಿಂದ ಸಾವನ್ನಪ್ಪಿದ್ದರು. 2.33 ಲಕ್ಷಕ್ಕೂ ಹೆಚ್ಚು ಮಂದಿಗೆ ಸೋಂಕು ತಗುಲಿದೆ.

   ಮೇ ತಿಂಗಳಿನಲ್ಲಿ ನಿಯಂತ್ರಣಕ್ಕೆ ಬಂದಿದೆ

   ಮೇ ತಿಂಗಳಿನಲ್ಲಿ ನಿಯಂತ್ರಣಕ್ಕೆ ಬಂದಿದೆ

   ಅಷ್ಟಾದರೂ ಕೂಡ ಸೋಂಕು ಹರಡುವಿಕೆ ಮತ್ತು ಸಾವು ಸಂಭವಿಸುತ್ತಿರುವ ಪ್ರಮಾಣ ಮೇ ತಿಂಗಳಿನಲ್ಲಿ ಸಂಪೂರ್ಣವಾಗಿ ನಿಯಂತ್ರಣಕ್ಕೆ ಬಂದಿತ್ತು ಎಂದು ವೈದ್ಯರು ಮಾಹಿತಿ ನೀಡಿದ್ದಾರೆ.

   ವೈರಸ್ ಅಸ್ತಿತ್ವದಲ್ಲಿಲ್ಲ

   ವೈರಸ್ ಅಸ್ತಿತ್ವದಲ್ಲಿಲ್ಲ

   ಇಟಲಿಯಲ್ಲಿ ಈಗ ಕೊರೊನಾ ವೈರಸ್ ಅಸ್ತಿತ್ವದಲ್ಲಿ ಇಲ್ಲ ಎಂದು ಇಟಲಿಯಲ್ಲಿನ ಮಿಲನ್‌ನಲ್ಲಿರುವ ಸ್ಯಾನ್ ರಾಫೆಲ್ ಆಸ್ಪತ್ರೆ ಮುಖ್ಯಸ್ಥ ಆಲ್ಬರ್ಟೊ ಜಾಂಗ್ರಿಲ್ಲೊ ತಿಳಿಸಿದ್ದಾರೆ.

   ಕಳೆದ ಹತ್ತು ದಿನಗಳಲ್ಲಿ ನಡೆಸಲಾದ ಪರೀಕ್ಷೆಗಳು ಮತ್ತು ಒಂದು ಅಥವಾ ಎರಡು ತಿಂಗಳ ಹಿಂದೆ ನಡೆಸಿದ ಪರೀಕ್ಷೆಗಳನ್ನು ಹೋಲಿಸಿದಾಗ ಈ ವಿಷಯ ಬೆಳಕಿಗೆ ಬಂದಿದೆ.

   ಕೊರೊನಾ ವೈರಸ್ ಈಗಲೂ ಮಾರಣಾಂತಿಕ

   ಕೊರೊನಾ ವೈರಸ್ ಈಗಲೂ ಮಾರಣಾಂತಿಕ

   ಕೊರೊನಾ ವೈರಸ್ ಸಂಪೂರ್ಣವಾಗಿ ನಾಶವಾಗಿಲ್ಲ, ಎಂದು ಬೇಕಾದರೂ ಅದರ ಎರಡನೆಯ ಅಲೆ ಆರಂಭವಾಗಬಹುದು, ಅದು ಬೂದಿಯಲ್ಲಿ ಮುಚ್ಚಿರುವ ಕೆಂಡದಂತೆ ಎಚ್ಚರಿಕೆಯಿಂದ ಇರಬೇಕಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಎಚ್ಚರಿಕೆ ನೀಡಿದೆ. ವೈರಸ್ ಸಂಪೂರ್ಣವಾಗಿ ನಾಶವಾಗಿದೆ ಎಂದು ಹೇಳಲು ಯಾವುದೇ ಸಾಕ್ಷ್ಯಗಳಿಲ್ಲ.

   ಇಟಲಿಯಲ್ಲಿ ಬುಧವಾರದಿಂದ ಲಾಕ್‌ಡೌನ್ ತೆರವುಗೊಳ್ಳಲಿದೆ ಆರ್ಥಿಕತೆ ಪುನರಾರಂಭಗೊಳ್ಳಲಿದೆ. ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು, ಮಾಸ್ಕ್ ಧರಿಸಬೇಕು ಎಂದು ತಿಳಿಸಲಾಗಿದೆ.

   English summary
   Top scientists, health officials and the WHO on Monday rushed to counter claims made by a leading Italian doctor who said the new coronavirus "no longer exists" in the country.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X
   We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more