Yahya Sinwar: ಹಮಾಸ್ ಮುಖ್ಯಸ್ಥನನ್ನೇ ಹೊಡೆದು ಹಾಕಿದ ಇಸ್ರೇಲ್ ಸೇನೆ; ಹೇಗಿತ್ತು ಆ ರೋಚಕ ಕಾರ್ಯಾಚರಣೆ

ಇಸ್ರೇಲ್, ಕೆಣಕಿದವರಿಗೆ ಉತ್ತರ ಕೊಡದೇ ಸುಮ್ಮನಿರುವ ದೇಶವೇ ಅಲ್ಲ, ತನ್ನ ಜನಗಳ ತಂಟೆಗೆ ಬಂದವರನ್ನು ಜಗತ್ತಿನ ಯಾವ ಮೂಲೆಯಲ್ಲಿದ್ದರೂ ಹುಡುಕಿ ಹೊಡೆಯುವುದಕ್ಕೆ ಇಸ್ರೇಲ್ ಹೆಸರುವಾಸಿ. ಅಂತಹ ಇಸ್ರೇಲ್‌ಗೆ ನುಗ್ಗಿದ್ದ ಹಮಾಸ್‌ ಉಗ್ರರನ್ನು ಇಸ್ರೇಲ್ ಹುಡುಕಿ ಹುಡುಕಿ ಸದೆಬಡಿಯುತ್ತಿದೆ. ಇದೀಗ ಕಳೆದ ವರ್ಷ ಅಕ್ಟೋಬರ್ 7ರಂದು ಇಸ್ರೇಲ್ ಮೇಲೆ ದಾಳಿಯ ಮಾಸ್ಟರ್ ಮೈಂಡ್ ಹಮಾಸ್ ಮುಖಂಡ ಯಾಹ್ಯಾ ಸಿನ್ವಾರ್ ನನ್ನು ಇಸ್ರೇಲ್ ಹೊಡೆದುಹಾಕಿದೆ.

ಇಸ್ರೇಲ್ ಸೇನೆಯುವ ಗಾಜಾ ಪಟ್ಟಿಯಲ್ಲಿದ್ದ ಹಮಾಸ್ ನಾಯಕ ಯಾಹ್ಯಾ ಸಿನ್ವಾರ್ ನನ್ನು ಟ್ರ್ಯಾಕ್ ಮಾಡಿದ್ದು ಗುಂಡಿನ ದಾಳಿಯಲ್ಲಿ ಹತ್ಯೆ ಮಾಡಲಾಗಿದೆ ಎಂದು ಇಸ್ರೇಲಿ ಮಿಲಿಟರಿ ಸ್ಪಷ್ಟಪಡಿಸಿದೆ. ಸತತ ಒಂದು ವರ್ಷಗಳಿಂದ ಹಮಾಸ್ ನಾಯಕನಿಗಾಗಿ ಇಸ್ರೇಲ್ ಸೇನೆ ಹುಡುಕಾಡಿದೆ, ಅಕ್ಟೋಬರ್ 16, 2024ರಂದು ಇಸ್ರೇಲ್ ಸೇನೆಯು ಗಾಜಾ ಪಟ್ಟಿಯಲ್ಲಿ ನಡೆಸಿದ ಕಾರ್ಯಾಚರಣೆಯಲ್ಲಿ ಹಮಾಸ್ ಭಯೋತ್ಪಾದಕ ಸಂಘಟನೆಯ ನಾಯಕ ಯಾಹ್ಯಾ ಸಿನ್ವಾರ್‌ನನ್ನು ಹತ್ಯೆ ಮಾಡಿರುವುದಾಗಿ ಹೇಳಿದೆ.

Israeli Military s Tracking and Killing of Hamas Leader Yahya Sinwar

ಒಂದು ವರ್ಷದಿಂದಲೂ ಇಸ್ರೇಸ್ ರಕ್ಷಣಾ ಪಡೆ ಮತ್ತು ಐಎಸ್‌ಎ (ಶಿನ್ ಬೆಟ್ ಆಂತರಿಕ ಭದ್ರತಾ ಸಂಸ್ಥೆ) ನಡೆಸಿದ ಹತ್ತಾರು ಕಾರ್ಯಾಚರಣೆಗಳು ನಡೆಸಿದ್ದು, ಯಾಹ್ಯಾ ಸಿನ್ವಾರ್ ತನ್ನ ನೆಲೆಯಿಂದ ಹೊರಬರುವಂತೆ ಮಾಡಿತು. ಇದರಿಂದ ಇಸ್ರೇಲ್ ರಕ್ಷಣಾ ಪಡೆಗಳಿಗೆ ಅವರನ್ನ ಪತ್ತೆ ಹಚ್ಚುವುದು ಸುಲಭವಾಯಿತು.

ಗಾಜಾಪಟ್ಟಿಯಲ್ಲಿ ಇಸ್ರೇಲ್ ರಕ್ಷಣಾ ಪಡೆಯ 828ನೇ ಬ್ರಿಗೇಡ್‌ನ ಸೈನಿಕರು ಮೂವರು ಭಯೋತ್ಪಾದಕರನ್ನು ಗುರುತಿಸಿದ್ದು, ಅವರನ್ನು ಹೊಡೆದು ಹಾಕಿದ್ದಾರೆ. ಬಳಿಕ ತಾವು ಕೊಂದವರಲ್ಲಿ ಯಾಹ್ಯಾ ಸಿನ್ವಾರ್ ಇರುವುದನ್ನು ಖಚಿತಪಡಿಸಿದ್ದಾರೆ. ಸೇನಾ ಮುಖ್ಯಸ್ಥ ರಿಯರ್ ಅಡ್ಮಿರಲ್ ಡೇನಿಯಲ್ ಹಗರಿ ರಫಾ ಜಿಲ್ಲೆಯಲ್ಲಿ ಇಬ್ಬರು ಸಹಚರರ ಜೊತೆ ಕಾಣಿಸಿಕೊಂಡ ಯಾಹ್ಯಾ ಸಿನ್ವಾರ್ ಅವರಬ್ಬಯ ಕೊಲ್ಲಲಾಗಿದೆ ಎಂದು ಘೋಷಣೆ ಮಾಡಿದರು.

ಮನೆಯೊಳಗೆ ಓಡಿಹೋದ ಸಿನ್ವಾರ್

ಮನೆಯಿಂದ ಮನೆಗೆ ಹೋಗುತ್ತಿದ್ದ ಮೂವರು ಭಯೋತ್ಪಾದಕರನ್ನು ಇಸ್ರೇಲ್ ರಕ್ಷಣಾ ಪಡೆಗಳು ಗುರುತಿಸಿದ್ದಯ, ಪಡೆಗಳು ಮೂವರು ಭಯೋತ್ಪಾಕರನ್ನು ಗುರಿಯಾಗಿಸಿಕೊಂಡು ಗುಂಡು ಹಾರಿಸಿವೆ. ಇಸ್ರೇಲ್ ಸೈನಿಕರು ಗುಂಡು ಹಾರಿಸುತ್ತಿದ್ದಂತೆ ಸಿನ್ವಾರ್ ಮನೆಯೊಳಗೆ ಓಡಿ ಹೋಗಿ ಅವಿತುಕೊಂಡಿದ್ದಾರೆ. ಇಸ್ರೇಲ್ ಪಡೆಗಳು ತಕ್ಷಣ ಡ್ರೋನ್ ಮೂಲಕ ಹುಡುಕಾಟ ನಡೆಸಿದ್ದು, ಗಾಯಗೊಂಡಿದ್ದ ಯಾಹ್ಯಾ ಸಿನ್ವಾರ್ ಕಟ್ಟಡದಲ್ಲಿ ಇರುವುದು ಕಾಣಿಸಿದೆ, ಆದರೆ ಸಿನ್ವಾರ್ ಮುಖ ಮುಚ್ಚಿಕೊಂಡಿದ್ದರು, ಡ್ರೋನ್ ನೋಡಿದ ಅವರು ಕಟ್ಟಿಗೆಯೊಂದನ್ನು ತೆಗೆದು ಡ್ರೋನ್ ಕಡೆ ಎಸೆದಿದ್ದಾರೆ.

ಇಸ್ರೇಲ್ ಸೇನೆಯು ಡ್ರೋನ್ ದೃಶ್ಯಗಳನ್ನು ಬಿಡುಗಡೆ ಮಾಡಿದೆ. ಆತ ಭಯೋತ್ಪಾದಕ ಎಂದು ನಾವು ಗುರುತಿಸಿದ್ದೇವೆ. ಆತನ ಜೊತೆಯಿದ್ದ ಬಂದೂಕು ಮತ್ತು 40 ಸಾವಿರ ಶೆಕೆಲ್‌ಗಳು ಸಿಕ್ಕಿದೆ. ಆತ ಓಡಿಹೋಗಲು ಪ್ರಯತ್ನಿಸಿದ್ದು ನಮ್ಮ ಪಡೆಗಳು ಹೊಡೆದುರುಳಿಸಿವೆ ಎಂದು ಇಸ್ರೇಲ್ ಸೇನೆ ತಿಳಿಸಿದೆ.

ಆತನ ಮೇಲೆ ಗುಂಡಿನ ದಾಳಿ ಮಾಡಿದಾಗ ಯಾವುದೇ ಒತ್ತೆಯಾಳುಗಳು ಇರಲಿಲ್ಲ. ನಮ್ಮ ಪಡೆಗಳು ಆ ಸ್ಥಳವನ್ನು ಶೋಧಿಸುತ್ತಿದ್ದಾರೆ ಎಂದು ಸೇನೆ ಹೇಳಿದೆ. ಕಳೆದ ವರ್ಷ ಅಕ್ಟೋಬರ್ 7ರಂದು ಇಸ್ರೇಲ್ ಮೇಲೆ ನಡೆದ ದಾಳಿಯ ಮಾಸ್ಟರ್ ಮೈಂಡ್ ಹಮಾಸ್ ಸೇನಾ ಮುಖ್ಯಸ್ಥ ಮೊಹಮ್ಮದ್ ಡೀಫ್ ಜೊತೆಗೆ ಸಿನ್ವಾರ್ ಕೂಡ ಇದ್ದರು ಎಂದು ಇಸ್ರೇಲ್ ಸೇನೆ ಆರೋಪಿಸಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+