ಯೆಮೆನ್ ಬಂಡುಕೋರರ ಮೇಲೆ ತಿರುಗಿಬಿದ್ದ ಇಸ್ರೇಲ್; ಮಾರಣಾಂತಿಕ ದಾಳಿ
ಕೆಣಕಿದವರಿಗೆ ಯಾವಾಗಲೂ ತಿರುಗೇಟು ಕೊಡುವುದರಲ್ಲಿ ಇಸ್ರೇಲ್ ಹಿಂದೆ ಬಿದ್ದಿಲ್ಲ. ಅದರಲ್ಲೂ ಸುತ್ತಲೂ ಇರುವ ಶತ್ರುರಾಷ್ಟ್ರಗಳು ಕೆಣಕಿದರೆ ಮುಗಿದೇ ಹೋಯಿತು. ಹೌತಿ ಬಂಡುಕೋರರು ಇಸ್ರೇಲ್ ಮೇಲೆ ದಾಳಿ ಮಾಡಿದ್ದು, ಅದಕ್ಕೆ ಪ್ರತ್ಯುತ್ತರವನ್ನು ಪಡೆಯುತ್ತಿದ್ದಾರೆ.
ಹೌತಿ ನಿಯಂತ್ರಿತ ಯೆಮೆನ್ ಬಂದರಿನಲ್ಲಿ ಇಸ್ರೇಲಿ ಯುದ್ಧವಿಮಾನಗಳು ಮೂವರನ್ನು ಕೊಂದುಹಾಕಿವೆ ಎಂದು ಇರಾನ್ ಬೆಂಬಲಿತ ದಾಳಿಕೋರರು ಹೇಳಿದ್ದಾರೆ. ಭಾನುವಾರ ಟೆಲ್ ಅವೀವ್‌ನಲ್ಲಿ ಮಾರಣಾಂತಿಕ ಡ್ರೋನ್ ದಾಳಿಗೆ ಇದು ಪ್ರತ್ಯುತ್ತರವಾಗಿದೆ.

ಇಸ್ರೇಲ್ ನಾಗರಿಕರ ರಕ್ತಕ್ಕೆ ಬೆಲೆ ಇದೆ ಎಂದಿರುವ ರಕ್ಷಣಾ ಸಚಿವ ಯೋವ್ ಗ್ಯಾಲಂಟ್, ನಮ್ಮ ಮೇಲೆ ದಾಳಿ ಮಾಡುವ ಧೈರ್ಯ ಮಾಡಿದರೆ ಹೌತಿ ಬಂಡುಕೋರರ ವಿರುದ್ಧ ಕಾರ್ಯಾಚರಣೆ ಮತ್ತಷ್ಟು ತೀವ್ರಗೊಳ್ಳಲಿದೆ ಎಂದು ಎಚ್ಚರಿಕೆ ನೀಡಿದರು.
ಗಾಜಾ ಯುದ್ಧದ ಸಮಯದಲ್ಲಿ ಇಸ್ರೇಲ್ ಮೇಲೆ ದಾಳಿ ನಡೆಸಿದೆ ಎಂದು ಹೇಳಿಕೊಂಡ ಮಧ್ಯಪ್ರಾಚ್ಯದ ಸುತ್ತಲಿನ ಇತರ ಇರಾನ್ ಬೆಂಬಲಿತ ಸಶಸ್ತ್ರ ಗುಂಪುಗಳಿಗೆ ಹೊಡೆಡಾ ಮೇಲೆ ಮಾಡಿರುವ ದಾಳಿ ಎಚ್ಚರಿಕೆಯಾಗಲಿ ಎಂದು ಗ್ಯಾಲಂಟ್ ಹೇಳಿದರು.
ಇಸ್ರೇಲಿ ದಾಳಿಯಲ್ಲಿ ಮೂವರು ಸಾವನ್ನಪ್ಪಿದ್ದಾರೆ ಮತ್ತು 87 ಮಂದಿ ಗಾಯಗೊಂಡಿದ್ದಾರೆ ಎಂದು ಬಂಡುಕೋರರು ನಡೆಸುತ್ತಿರುವ ಆರೋಗ್ಯ ಸಚಿವಾಲಯವು ಹೌತಿ ಮಾಧ್ಯಮದ ಹೇಳಿಕೆಯಲ್ಲಿ ತಿಳಿಸಿದೆ.
ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರು ದೂರದರ್ಶನದ ಭಾಷಣದಲ್ಲಿ ಕೂಡ ಎಚ್ಚರಿಕೆ ಕೊಟ್ಟಿದ್ದು, "ನಮಗೆ ಯಾರೇ ಹಾನಿ ಮಾಡಲು ಪ್ರಯತ್ನಿಸಿದರೂ ಅದಕ್ಕೆ ಭಾರಿ ಬೆಲೆ ತೆರಬೇಕಾಗುತ್ತದೆ" ಎಂದು ಹೇಳಿದ್ದಾರೆ.
תיעוד בלעדי מתימן . צפייה מהנה . סרטון מיוחד שלא הופץ עדיין בישראל רק אצלי pic.twitter.com/oaKlZz9t2C
— כל החדשות בזמן אמת 🟢 (@Saher95755738) July 20, 2024
ಟೆಲ್ ಅವಿವ್‌ನಲ್ಲಿ ಶುಕ್ರವಾರ ದಾಳಿ ಮಾಡಿದ ಕೆಲವೇ ಗಂಟೆಗಳ ನಂತರ, ರಕ್ಷಣಾ ಸಚಿವ ಗ್ಯಾಲಂಟ್ ಇಸ್ರೇಲ್ ತನ್ನ ಕೆಂಪು ಸಮುದ್ರದ ಕರಾವಳಿಯ ಬಹುಭಾಗವನ್ನು ಒಳಗೊಂಡಂತೆ ಯೆಮೆನ್‌ನ ಪ್ರದೇಶಗಳನ್ನು ನಿಯಂತ್ರಿಸುವ ಹೌತಿಗಳ ವಿರುದ್ಧ ಪ್ರತೀಕಾರ ತೀರಿಸಿಕೊಳ್ಳುವುದಾಗಿ ಪ್ರತಿಜ್ಞೆ ಮಾಡಿದ್ದರು.
ಇಸ್ರೇಲಿ ಸೇನಾ ವಕ್ತಾರ ಡೇನಿಯಲ್ ಹಗರಿ ಅವರು ಎಫ್-15 ಜೆಟ್‌ಗಳು ದಾಳಿ ನಡೆಸಿವೆ ಮತ್ತು ಎಲ್ಲರೂ ಸುರಕ್ಷಿತವಾಗಿ ನೆಲೆಗೆ ವಾಪಸ್ ಬಂದಿದ್ದಾರೆ ಎಂದು ಹೇಳಿದ್ದಾರೆ.
ಕ್ರೂರ ಆಕ್ರಮಣ ಎಂದ ಹೌತಿ ಅಧಿಕಾರಿ
ಯೆಮೆನ್ ವಿರುದ್ಧ ಇಸ್ರೇಲ್ ಕ್ರೂರ ಆಕ್ರಮಣ ಮಾಡಿದೆ ಎಂದು ಉನ್ನತ ಹೌತಿ ಅಧಿಕಾರಿ ಮೊಹಮ್ಮದ್ ಅಬ್ದುಲ್‌ಸಲಾಮ್ ಸಾಮಾಜಿಕ ಮಾಧ್ಯಮ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಗಾಜಾ ಯುದ್ಧದಲ್ಲಿ ಪ್ಯಾಲೇಸ್ಟಿನಿಯನ್ನರನ್ನು ಬೆಂಬಲಿಸುವುದನ್ನು ನಿಲ್ಲಿಸುವಂತೆ ಯೆಮೆನ್‌ಗೆ ಒತ್ತಡ ಹೇರಲು ಹೊಡೆಡಾದಲ್ಲಿ "ಇಂಧನ ಸಂಗ್ರಹಣಾ ಸೌಲಭ್ಯಗಳು ಮತ್ತು ವಿದ್ಯುತ್ ಸ್ಥಾವರ" ವನ್ನು ಗುರಿಯಾಗಿರಿಸಿಕೊಂಡು ದಾಳಿ ನಡೆಸಲಾಗಿದೆ ಎಂದು ಆರೋಪಿಸಿದ್ದಾರೆ.
ಅಂತರಾಷ್ಟ್ರೀಯ ಮಾಧ್ಯಮ ಸಂಸ್ಥೆ ಎಎಫ್‌ಪಿ ಘಟನೆ ಬಗ್ಗೆ ಸ್ವತಂತ್ರವಾಗಿ ಪರಿಶೀಲಿಸಲು ಸಾಧ್ಯವಾಗದಿದ್ದರೂ, ಬಂಡುಕೋರರ ಅಲ್-ಮಸಿರಾ ವಾಹಿನಿಯಲ್ಲಿ ಪ್ರಸಾರವಾದ ದೃಶ್ಯಾವಳಿಗಳು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಗಾಯಾಳುಗಳನ್ನು ತೋರಿಸಿವೆ.
"ನಗರವು ಕತ್ತಲೆಯಾಗಿದೆ, ಜನರು ಬೀದಿಯಲ್ಲಿದ್ದಾರೆ, ಪೆಟ್ರೋಲ್ ಬಂಕ್‌ಗಳು ಮುಚ್ಚಲ್ಪಟ್ಟಿವೆ ಮತ್ತು ಇಂಧನಕ್ಕೆ ಉದ್ದನೆಯ ಸರತಿ ಸಾಲುಗಳನ್ನು ನೋಡುತ್ತಿವೆ" ಎಂದು ನಿವಾಸಿಯೊಬ್ಬರು ತಿಳಿಸಿದ್ದಾರೆ ಎಂದು ವರದಿಯಾಗಿದೆ.












Click it and Unblock the Notifications