ಸ್ವಾತಂತ್ರ್ಯ ದಿನಕ್ಕೆ ಕನ್ನಡದಲ್ಲಿಯೂ ಶುಭ ಕೋರಿದ ಇಸ್ರೇಲ್

ಜೆರುಸಲೆಂ, ಆಗಸ್ಟ್ 15: ಸ್ವಾತಂತ್ರ್ಯ ದಿನದ ಸಂಭ್ರಮದಲ್ಲಿದ್ದ ಭಾರತಕ್ಕೆ ಬುಧವಾರ ಜಗತ್ತಿನ ಅನೇಕ ದೇಶಗಳು ಶುಭಾಶಯ ತಿಳಿಸಿದ್ದವು.

ಆದರೆ, ಇಸ್ರೇಲ್ ಶುಭ ಹಾರೈಸಿದ ಪರಿ ತುಸು ವಿಭಿನ್ನವಾಗಿತ್ತು. ಇಸ್ರೇಲ್ 72ನೇ ಸ್ವಾತಂತ್ರ್ಯ ದಿನಾಚರಣೆಯ ಸಲುವಾಗಿ ಭಾರತಕ್ಕೆ ಶುಭ ಹಾರೈಸಿದ್ದು ವಿಭಿನ್ನ ಭಾಷೆಗಳಲ್ಲಿ.

israel wishes independence day in kannada, marathi, hindi and english

ನಾಲ್ಕು ಭಾಷೆಗಳಲ್ಲಿ ಇಸ್ರೇಲ್ ಶುಭ ಕೋರಿದ್ದು, ಅದರಲ್ಲಿ ಕನ್ನಡವೂ ಸೇರಿದೆ. ಹಿಂದಿ ಮತ್ತು ಮರಾಠಿ ಹೊರತಾಗಿ ಭಾರತದಲ್ಲಿ ಅತಿ ಹೆಚ್ಚು ಮಾತನಾಡುವ ಭಾಷೆಗಳಿಗಿಂತ ಇಸ್ರೇಲ್ ಕನ್ನಡಕ್ಕೆ ಆದ್ಯತೆ ನೀಡಿರುವುದು ವಿಶೇಷ.

ಇಸ್ರೇಲ್ ಸರ್ಕಾರ ತನ್ನ ಅಧಿಕೃತ ಟ್ವಿಟ್ಟರ್ ಖಾತೆಯಲ್ಲಿ 'ಆತ್ಮೀಯ #ಭಾರತ, ಸ್ವಾತಂತ್ರ್ಯ ದಿನದ ಶುಭಾಶಯಗಳು! ಎಂದು ಬರೆದು ಇಸ್ರೇಲ್ ಹಾಗೂ ಭಾರತದ ಧ್ವಜದ ಚಿತ್ರಗಳನ್ನು ಪ್ರಕಟಿಸಿದೆ.

ಇದೇ ರೀತಿ ಹಿಂದಿ, ಕನ್ನಡ ಮತ್ತು ಮರಾಠಿಯಲ್ಲಿಯೂ ಶುಭ ಹಾರೈಸಿದೆ. 'ವಿಧೇಯಪೂರ್ವಕವಾಗಿ ಇಸ್ರೇಲ್' ಎಂದು ಕೆಳಬರಹ ಪ್ರಕಟಿಸಿರುವ ಅದು, 'ಬೆಳೆಯುತ್ತಿರುವ ಸಹಭಾಗಿತ್ವ' ಎಂಬ ಹ್ಯಾಶ್ ಟ್ಯಾಗ್ ಬಳಸಿದೆ.

ಈ ತಿಂಗಳ ಆರಂಭದಲ್ಲಿ ಭಾರತ-ಇಸ್ರೇಲ್ ಸಹಭಾಗಿತ್ವವನ್ನು ಗಟ್ಟಿಗೊಳಿಸುವ ಸಲುವಾಗಿ ಆರೋಗ್ಯ, ಕೃಷಿ ಮತ್ತು ನೀರು ನಿರ್ವಹಣೆ ವಲಯಗಳಲ್ಲಿ ಆರು ಅತ್ಯಾಧುನಿಕ ತಂತ್ರಜ್ಞಾನದ ಸ್ಟಾರ್ಟ್‌ಅಪ್‌ಗಳು ಆರಂಭಿಸುವ ಉದ್ದೇಶದೊಂದಿಗೆ ಇಸ್ರೇಲ್‌ನ ಹೆಜ್ಜೆ ಇರಿಸಿತ್ತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+