Get Updates
Get notified of breaking news, exclusive insights, and must-see stories!

Iran vs Israel: ಯುದ್ಧ ನಡೆದರೆ ಗೆಲ್ಲುವವರು ಯಾರು? ಇರಾನ್-ಇಸ್ರೇಲ್ ರಕ್ಷಣಾ ಶಕ್ತಿ-ಸಾಮರ್ಥ್ಯ ಎಷ್ಟಿದೆ?

ಎರಡು ವರ್ಷಗಳ ಹಿಂದೆ ಅಮೆರಿಕದ ಮಿತ್ರ ರಾಷ್ಟ್ರಇಸ್ರೇಲ್ ಹಾಗೂ ಪ್ಯಾಲೆಸ್ಟೀನಿಯನ್ ಇರಾನ್ ಬೆಂಬಲಿತ ಉಗ್ರಗಾಮಿ ಗುಂಪು ಹಮಾಸ್ ಮಧ್ಯ ಯುದ್ಧ ಆರಂಭವಾದ ಬಳಿಕ ಇರಾನ್ ಮತ್ತು ಇಸ್ರೇಲ್ ದೇಶಗಳ ನಡುವೆ ಸಂಘರ್ಷ, ಉದ್ವಿಘ್ನತೆ ಹೆಚ್ಚಾಯಿತು. ಅಂದಿನಿಂದ ಯುದ್ಧದ ಭೀತಿ ಮುಂದುವರಿದಿದೆ. ಯಾವುದೇ ಕ್ಷಣದಲ್ಲಾದರೂ ಯುದ್ಧ ನಡೆಯುವ ಸ್ಥಿತಿ ಅಲ್ಲಿದೆ. ಒಂದು ವೇಳೆ ಯುದ್ಧ ನಡೆದರೆ ಯಾವ ದೇಶ ಗೆಲ್ಲಬಹುದು. ಎರಡು ದೇಶಗಳ ಸೈನ ಬಲ ಎಷ್ಟೆಷ್ಟು ಇದೆ. ಅದರ ಆಧಾರದಲ್ಲಿ ಯಾರು ಬಲಿಷ್ಠರು ಎಂಬುದನ್ನು ತಿಳಿಯಬಹುದು.

ಎರಡು ದೇಶಗಳ ಸೈನಿಕ ಸಂಖ್ಯೆ ಎಷ್ಟಿದೆ?

ಇಸ್ರೇಲ್‌ ದೇಶದಲ್ಲಿ 1,69,500 ಸೈನಿಕರಿದ್ದು, ಅವರಿಗೆ ಹೋಲಿಸಿದರೆ ಇರಾನ್ ದೇಶದ ಸೈನ್ಯ ಬಲ ಹೆಚ್ಚಿದೆ. ಅದಲ್ಲಿ ಸುಮಾರು 6,10,000 ಸಕ್ರಿಯ ಸೈನಿಕ ಸಿಬ್ಬಂದಿ ಕಾಯ ನಿರ್ವಹಿಸುತ್ತಿದ್ದಾರೆ. ಇಸ್ಲಾಮಿಕ್ ಗಣರಾಜ್ಯವು ಪ್ರತ್ಯೇಕ ಗಣ್ಯ ಶಾಖೆಯಾದ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ (IRGC) ಅನ್ನು ನಿಯಂತ್ರಿಸುತ್ತದೆ. ಇಸ್ರೇಲ್ ಸಾಮೂಹಿಕ ಜನರ ಶಕ್ತಿಗಿಂತ ತಂತ್ರಜ್ಞಾನಕ್ಕೆ ಆದ್ಯತೆ ಕೊಡುವ ಸಣ್ಣ, ಅತ್ಯಧಿಕ ವೃತ್ತಿಪರ ಸೈನ್ಯ ಹೊಂದಿದೆ.

Israel vs Iran Military Comparison Tech Power vs Manpower Mass If War Who Will Win Know details

465,000 ಇಸ್ರೇಲಿ ಮೀಸಲು ಪಡೆಗಳು

ಯುದ್ಧ ಲಕ್ಷಣಗಳು ಕಂಡು ಬರುತ್ತಿದ್ದಂತೆ ಅಂದಾಜು 4,65,000 ಮೀಸಲು ಪಡೆಗಳನ್ನು ಇಸ್ರೇಲ್ ಸಜ್ಜುಗೊಳಿಸಿದೆ. ಈ ಮೂಲಕ ಬೃಹತ್ ಹೋರಾಟಕ್ಕೆ ತಾವು ಸಿದ್ಧವಾಗಿರುವ ಬಗ್ಗೆ ಸಂದೇಶ ರವಾನಿಸಿದೆ. ಇದರಿಂದ ಇಸ್ರೇಲ್ ರಕ್ಷಣಾ ಪಡೆಗಳ (IDF) ಸಾಮರ್ಥ್ಯವು ಸುಮಾರು ಮೂರು ಪಟ್ಟು ಹೆಚ್ಚಾಗಿದೆ ಎನ್ನಲಾಗಿದೆ. ಇರಾನ್ ಸುಮಾರು 350,000 ಸಣ್ಣ ಅಧಿಕೃತ ಮೀಸಲು ಪಡೆ ಹೊಂದಿದೆ. ಈ ದೇಶ ತನ್ನ ಬೃಹತ್ ಸೈನ್ ಮತ್ತು ಅರೆಸೈನಿಕ ಘಟಕಗಳ ಮೇಲೆ ಅವಲಂಬಿತವಾಗಿದೆ.

ಇಸ್ರೇಲ್‌ನಲ್ಲಿವೆ 340 ಆಧುನಿಕ ಫೈಟರ್ ಜೆಟ್‌ಗಳು

ಇಸ್ರೇಲ್ ನಲ್ಲಿ ಸ್ಟೆಲ್ತ್ F-35I ಆದಿರ್ ಜೆಟ್‌ ಸೇರಿದಂತೆ 340 ಕ್ಕೂ ಅಧಿಕ ಆಧುನಿಕ ವಿಮಾನಗಳನ್ನು ಹೊಂದಿದೆ. ತಾಂತ್ರಿಕವಾಗಿ ಉನ್ನತ ಫೈಟರ್ ಜೆಟ್‌ ಫ್ಲೀಟ್‌ ಅನ್ನು ಇಸ್ರೆಲ್ ನಿಯಂತ್ರಿಸುತ್ತದೆ. ಅವರು ನಿಖರವಾದ ದಾಳಿ ಮಾಡುವಷ್ಟು ಸಾಮರ್ಥ್ಯ ಹೊಂದಿವೆ. ಇದಕ್ಕೆ ವಿರುದ್ಧವಾಗಿ ಇರಾನ್‌ನ ವಾಯುಪಡೆಯು ಹಳೆಯ F-14 ಟಾಮ್‌ಕ್ಯಾಟ್‌ಗಳು ಹಾಗೂ ಮಿಗ್ 29 ಫೈಟರ್ ಜೆಟ್ ಒಳಗೊಂಡಿದೆ. ಈ ದೇಶ ಅಂತಾರಾಷ್ಟ್ರೀಯ ಯುದ್ಧ ಸನ್ನಿವೇಶ ನಿರ್ವಹಣೆಗೆ ಹೆಣಗಾಡುತ್ತಿದೆ.

ಇಸ್ರೇಲ್‌ನಲ್ಲಿವೆ 2,200 ಮೆರ್ಕವಾ ಯುದ್ಧ ಟ್ಯಾಂಕ್‌ಗಳು

ಇಸ್ರೇಲ್ ಸೈನಿಕ ಪಡೆಯುವ ಒಟ್ಟು ಸುಮಾರು 2,200 ಟ್ಯಾಂಕ್‌ಗಳನ್ನು ನಿರ್ವಹಿಸುತ್ತಾರೆ. ಅವುಗಳನ್ನು ಸ್ಥಳೀಯ ಮೆರ್ಕವಾ Mk 4 ಮುನ್ನಡೆಸುತ್ತದೆ. ಇದೊಂದು ಸುಧಾರಿತ ರಕ್ಷಣಾ ವ್ಯವಸ್ಥೆಯಾಗಿದೆ. ಇರಾನ್ ಒಟ್ಟು 2,800 ಟ್ಯಾಂಕ್‌ಗಳ ಹೊಂದಿದ್ದು, ಇದರಲ್ಲಿ ಇಸ್ರೇಲ್‌ಗಿಂತ ಮುಂದಿದೆ. ಕರ್ರಾರ್ ಮತ್ತು ಹಳೆಯ T-72 ಮಾದರಿಗಳ ಟ್ಯಾಂಕ್‌ಗಳ ಈ ದೇಶದಲ್ಲಿವೆ. ಆದರೆ ಇಸ್ರೇಲ್‌ನ ರಕ್ಷಾಕ ವಚವು ಆಧುನಿಕ ಯುದ್ಧಭೂಮಿಯಲ್ಲಿನ ದಾಳಿ ಎದರುಸುವ ಸಾಮರ್ಥ್ಯ ಹೊಂದಿವೆ.

3,000 ಇರಾನಿನ ಬ್ಯಾಲಿಸ್ಟಿಕ್ ಕ್ಷಿಪಣಿಗಳ ಶಸ್ತ್ರಾಗಾರುವ ಟೆಹ್ರಾನ್ ಮಧ್ಯಪ್ರಾಚ್ಯದಲ್ಲಿದೆ. ಸುಮಾರು 2,000 ಕಿಲೋ ಮೀಟರ್ ದೂರದ ಶತ್ರುವಿನತ್ತ ಗುರಿ ಇಡಬಲ್ಲ ಸಾಮರ್ಥ್ಯ ಅವುಗಳಿಗಿದೆ. ಅದರಲ್ಲಿ ಸೆಜ್ಜಿಲ್ ಮತ್ತು ಖೈಬರ್ ಕ್ಷಿಪಣಿಗಳು ಸೇರಿವೆ. ಇಸ್ರೇಲ್ ತನ್ನದೇ ಆದ ಜೆರಿಕೊ ಕ್ಷಿಪಣಿಗಳನ್ನು ನಿರ್ವಹಿಸುತ್ತದೆ.

ಇಸ್ರೇಲ್ ವಿವಿಧ ಹಂತಗಳಲ್ಲಿ ವಾಯು ರಕ್ಷಣಾ ಪಡೆ ಹೊಂದಿದೆ. ಐರನ್ ಡೋಮ್, ಡೇವಿಡ್ಸ್ ಸ್ಲಿಂಗ್ ಮತ್ತು ಆರೋ ವಾಯು ವ್ಯವಸ್ಥೆಗಳು ಸೇರಿವೆ. ಶೇಕಡಾ 90ರಷ್ಟು ಅಧಿಕ ಪ್ರತಿಬಂಧಕ ದರಗಳನ್ನು ಹೊಂದಿವೆ. ಇನ್ನೂ ಇರಾನ್ ತನ್ನ ವಾಯು ಪ್ರದೇಶ ರಕ್ಷಿಸಲು ರಷ್ಯಾದ ಎಸ್‌-300 ಮತ್ತು ದೇಶೀಯ ಬವರ್-373 ಮೇಲೆ ಅವಲಂಬಿತವಾಗಿದೆ.

19 ಇರಾನಿನ ನೌಕಾ ಜಲಾಂತರ್ಗಾಮಿ ನೌಕೆಗಳು

ಇರಾನ್‌ನ ನೌಕಾಪಡೆಯು 19 ಜಲಾಂತರ್ಗಾಮಿ ನೌಕೆಗಳನ್ನು ಹೊಂದಿದೆ. ಕರಾವಳಿ ಮೇಲೆ ದಾಳಿ ಆದರೆ ಪ್ರತಿ ದಾಳಿ ನಡೆಸುವ ಸಾಮರ್ಥ್ಯ ಹೊಂದಿವೆ. ಕಿಲೋ-ಕ್ಲಾಸ್ ಹಡಗುಗಳು ಮತ್ತು ಸಣ್ಣ ಘಾದಿರ್ ಮಿಡ್ಜೆಟ್ ಜಲಾಂತರ್ಗಾಮಿ ನೌಕೆಗಳು ಇವೆ. ಎದುರಾಳಿ ರಾಷ್ಟ್ರ ಇಸ್ರೇಲ್ 5 ಜರ್ಮನ್-ನಿರ್ಮಿತ ಡಾಲ್ಫಿನ್-ಕ್ಲಾಸ್ ಜಲಾಂತರ್ಗಾಮಿ ನೌಕೆಗಳಿವೆ. ಇರಾನ್‌ಗೆ ಹೋಲಿಕೆ ಮಾಡಿದರೆ ಈ ದೇಶದ ನೌಕಾ ಬಲ ಸಂಖ್ಯೆಯಲ್ಲಿ ಕಡಿಮೆ ಅನ್ನಿಸುತ್ತದೆ. ಆದರೆ ಇಸ್ರೇಲಿ ಹಡಗುಗಳು ಎರಡನೇ-ಸ್ಟ್ರೈಕ್ ಸಾಮರ್ಥ್ಯಕ್ಕಾಗಿ ಪರಮಾಣು-ತುದಿಯ ಕ್ರೂಸ್ ಕ್ಷಿಪಣಿಗಳನ್ನು ಸಾಗಿಸುವ ಸಾಮರ್ಥ್ಯ ಒಳಗೊಂಡಿರುವುದು ಆ ದೇಶದ ನೌಕಾಪಡೆಯ ಮತ್ತೊಂದು ವಿಶೇಷ ಎನ್ನಬಹುದು.

ಇಸ್ರೇಲಿ ಬಳಿ ಇವೆ 48 ಹೆಲಿಕಾಪ್ಟರ್‌ಗಳು

ಇಸ್ರೇಲ್ 48 ಬೋಯಿಂಗ್ ಎಎಚ್‌-64 ಅಪಾಚೆ ದಾಳಿ ಹೆಲಿಕಾಪ್ಟರ್ ಜಾಲ ಹೊಂದಿದೆ. ಇವುಗಳ ಟ್ಯಾಂಕ್ ದಾಳಿಗಳನ್ನು ಸಮರ್ಥವಾಗಿ ತಡೆಯುವ, ಪ್ರತಿ ದಾಳಿ ಮಾಡಬಲ್ಲವುಗಳಾಗಿವೆ. ಈ ಗನ್‌ಶಿಪ್‌ಗಳನ್ನು ನಿಖರ ದಾಳಿಗೆಂದು ಸಂಯೋಜಿಸಲಾಗಿದೆ. ಇತ್ತ ಇರಾನ್ ಸುಮಾರು 12 ಹಳೆಯ ಕೋಬ್ರಾ ಹೆಲಿಕಾಪ್ಟರ್, ಟೌಫಾನ್‌ನಂತಹ ಆವೃತ್ತಿಗಳನ್ನು ನಿರ್ವಹಿಸುತ್ತಿದೆ. ಇದರಲ್ಲಿ ಇರಾನ್ ಹಿಂದಿದೆ ಎಂದು ವಿಶ್ಲೇಷಿಸಲಾಗಿದೆ.

ಇರಾನಿನ ಶಸ್ತ್ರಸಜ್ಜಿತ ವಾಹನ ಸಂಖ್ಯೆ 65,000

ಇರಾನ್ ಪ್ರತಿದಾಳಿಗಾಗಿ ಸುಮಾರು 65,000 ಶಸ್ತ್ರಸಜ್ಜಿತ ವಾಹನಗಳ ಬೃಹತ್ ಪಡೆ ನಿರ್ವಹಿಸುತ್ತಿದೆ. ಇದರಲ್ಲಿ ಸಿಬ್ಬಂದಿ ವಾಹಕಗಳು ಮತ್ತು ಸಾಮೂಹಿಕ ಚಲನೆಗಾಗಿ ಪದಾತಿಸೈನ್ಯದ ಹೋರಾಟದ ವಾಹನಗಳು ಒಳಗೊಂಡಿವೆ. ಇಸ್ರೇಲ್ ಸುಮಾರು 43,000 ಶಸ್ತ್ರಸಜ್ಜಿತ ವಾಹನ ಹೊಂದಿದ್ದು, ಸೈನಿಕರಿಗೆ ಟ್ಯಾಂಕ್ ಮಟ್ಟದ ರಕ್ಷಣೆ ನೀಡುವ ಭಾರೀ ನೇಮರ್ ಎಪಿಸಿ ಮೇಲೆ ಆಧ್ಯತೆ ನೀಡುತ್ತದೆ. ಎಂದಿಗೂ ಘೋಷಿಸಿದ 90 ಪರಮಾಣು ಶಸ್ತ್ರಾಸ್ತ್ರ ಸಾಮರ್ಥ್ಯ ಇಸ್ರೇಲ್ ಹೊಂದಿದೆ. ಇದು ಆ ದೇಶದ ಅಂತಿಮ ಕಾರ್ಯತಂತ್ರ, ಯುದ್ಧದ ಕೊನೆಯ ನಿರ್ಣಾಯಕವಾಗಿ ಉಪಯೋಗಿಸುವ ಪ್ರಮುಖ ಅಸ್ತ್ರವಾಗಿದೆ. ಆದರೆ ಇರಾನ್ ಪರಮಾಣು ಶಸ್ತ್ರಾಸ್ತ್ರ ಹೊಂದಿಲ್ಲ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+