ಒತ್ತೆಯಾಳು ಮೃತದೇಹ ವಶಕ್ಕೆ ಪಡೆದ ಇಸ್ರೇಲ್ ಸೇನೆ

ಹಮಾಸ್ ಮತ್ತು ಇಸ್ರೇಲ್ ನಡುವಿನ ರಣ ಕಾಳಗದಲ್ಲಿ ಈಗಾಗಲೇ ಸಾವಿರಾರು ಜನರು ಬಲಿಯಾಗಿದ್ದಾರೆ. ಇದೇ ಸಮಯದಲ್ಲಿ ಹಮಾಸ್ ಉಗ್ರರ ವಿರುದ್ಧ ಕಾರ್ಯಾಚರಣೆಯ ಭಾಗವಾಗಿ, ಇಸ್ರೇಲ್ ಮೂಲದ ಒತ್ತೆಯಾಳುಗಳನ್ನ ಬಿಡಿಸಲು ಇಸ್ರೇಲ್ ಸೇನೆ ಮುಂದೆ ನುಗ್ಗಿತ್ತು. ಈ ವೇಳೆ ಒತ್ತೆಯಾಳು ಮೃತದೇಹ, ವಶಕ್ಕೆ ಪಡೆದ ಕುರಿತು ಮಾಹಿತಿ ಸಿಕ್ಕಿದೆ. ಅದರಲ್ಲೂ ರಾತ್ರಿ ವೇಳೆ ನಡೆದ ಕಾರ್ಯಾಚರಣೆ ವೇಳೆ ಈ ಘಟನೆ ಸಂಭವಿಸಿದೆ.

ಅಕ್ಟೋಬರ್ 7ರಂದು ಹಮಾಸ್ ಉಗ್ರರು ಅಪಹರಣ ಮಾಡಿದ್ದ ಇಸ್ರೇಲ್ ಒತ್ತೆಯಾಳು ಪೈಕಿ, ಇದೀಗ ಒಬ್ಬರ ಮೃತದೇಹ ವಶಕ್ಕೆ ಪಡೆಯಲಾಗಿದೆ ಎಂಬ ಮಾಹಿತಿ ಸಿಗುತ್ತಿದೆ. ಈ ಮೂಲಕ ಇಸ್ರೇಲ್ ಸೇನೆ ಮತ್ತಷ್ಟು ಅಲರ್ಟ್ ಆಗಿ, ಅನುಮಾನ ಬಂದ ಕಡೆಗೆಲ್ಲಾ ಹುಡುಕಾಟ ತೀವ್ರಗೊಳಿಸಿದೆ. ಯುದ್ಧ ಮತ್ತಷ್ಟು ಸೂಕ್ಷ್ಮವಾಗುತ್ತಿದೆ. ಈ ಹಿನ್ನೆಲೆಯಲ್ಲಿ ಗಾಜಾಪಟ್ಟಿ ಮತ್ತಷ್ಟು ಹಿಂಸಾಚಾರದಲ್ಲಿ ಮುಳುಗುವ ಭಯವೂ ಇದೀಗ ಆವರಿಸಿದೆ.

Israel Said That They Have Been Recovered Body Of Hostage

ಮತ್ತೊಂದು ಯುದ್ಧ ಶುರು?

ಒಂದ್ಕಡೆ ಇಸ್ರೇಲ್ & ಹಮಾಸ್ ಯುದ್ಧ ನಡುವೆ ಮತ್ತೊಂದು ಯುದ್ಧ ಭೀತಿ ಆವರಿಸಿದೆ. ಇಸ್ರೇಲ್ ದಾಳಿಗೆ ಇರಾನ್ ಪ್ರತೀಕಾರ ತೆಗೆದುಕೊಳ್ಳುವ ಸಂಭವ ಇದ್ದು, ಮಧ್ಯ ಪ್ರಾಚ್ಯದಲ್ಲಿ ಮಿಲಿಟರಿ & ರಾಯಭಾರ ಅಧಿಕಾರಿಗಳಿಗೆ ಅಮೆರಿಕ ಹೈ ಅಲರ್ಟ್ ನೀಡಿದೆ ಎನ್ನಲಾಗಿದ್ದು. ಇದರ ನಡುವೆ ಇಸ್ರೇಲ್, ರಜೆ ಮೇಲೆ ಹೋದ ಸೇನಾಧಿಕಾರಿಗಳ ವಾಪಸ್ ಕರೆಸಿಕೊಂಡಿದೆ. ಹಾಗೆಯೇ ಸೇನಾ ಸಿಬ್ಬಂದಿ ರಜೆಯ ರದ್ದು ಮಾಡಿದೆ. ಜಿಪಿಎಸ್ ಸಿಗ್ನಲ್‌ ಸ್ಥಗಿತ ಮಾಡಿ, ಸಂಭಾವ್ಯ ದಾಳಿ ಎದುರಿಸಲು ಎಲ್ಲ ರೀತಿ ಸಿದ್ಧತೆ ನಡೆಸಿದೆ.

ಅಮೆರಿಕ & ಇಸ್ರೇಲ್ ದೂರ ದೂರ?

ಇಸ್ರೇಲ್ ಸೇನೆ ಗಾಜಾಪಟ್ಟಿ ನಗರವನ್ನು ಧ್ವಂಸ ಮಾಡಿ ಹಾಕಿದ್ದು 20 ಲಕ್ಷಕ್ಕೂ ಹೆಚ್ಚು ಜನರು ನರಳಾಡುತ್ತಿದ್ದಾರೆ ಎಂಬ ಆರೋಪ ಇದೆ. ಈ ಬೆಳವಣಿಗೆ ನಡುವೆ, ಮುರಿದು ಬಿದ್ದ ಕಟ್ಟಡಗಳಲ್ಲೇ ಜನ ಜೀವನ ಮಾಡುತ್ತಿದ್ದಾರೆ. ಹೀಗಾಗಿ ಸ್ಥಿತಿ ಕೈಮೀರಿ ಹೋಗಿದ್ದು ಏನು ಮಾಡಬೇಕು ಎಂಬುದೇ ತೋಚುತ್ತಿಲ್ಲ. ಇಂತಹ ಪರಿಸ್ಥಿತಿಯ ಹೊತ್ತಲ್ಲೇ ಅಮೆರಿಕ ಕೂಡ ಅಲರ್ಟ್ ಆಗಿ ಯುದ್ಧ ನಿಲ್ಲಿಸಲು ಪರೋಕ್ಷವಾಗಿ ಇಸ್ರೇಲ್ ಸೇನೆ ಮೇಲೆ ಒತ್ತಡ ಹಾಕುತ್ತಿತ್ತು. ಇನ್ನೊಂದು ಕಡೆ ಇರಾನ್ ಮತ್ತು ಇಸ್ರೇಲ್ ನಡುವೆ ಯುದ್ಧ ಶುರುವಾಗಿ ಕಿಚ್ಚು ಹೊತ್ತಿಕೊಳ್ಳುವ ಭಯ ಕಾಡುತ್ತಿದೆ.

ಹಮಾಸ್ ನೆಲೆಗಳು ಭಾಗಶಃ ನಾಶ

ಇಸ್ರೇಲ್ ಸೇನೆ ಈವರೆಗೆ ನಡೆಸಿರುವ ದಾಳಿಯಲ್ಲಿ, ಹಮಾಸ್ ಉಗ್ರರ ನೆಲೆಗಳು ಸದ್ಯಕ್ಕೆ ಭಾಗಶಃ ನಾಶವಾಗಿ ಹೋಗಿವೆ ಎನ್ನಲಾಗಿದೆ. ಹೀಗಿದ್ದರೂ ಉಗ್ರರನ್ನು ಸಂಪೂರ್ಣವಾಗಿ ನಾಶ ಮಾಡಲು ಇಸ್ರೇಲ್ ಪಣತೊಟ್ಟಿದೆ. ಹೀಗಾಗಿ ಪರಿಸ್ಥಿತಿ ಕ್ಷಣಕ್ಷಣಕ್ಕೂ ಭೀಕರವಾಗಿ ಜನ ಪರದಾಡುತ್ತಿದ್ದಾರೆ. ಇನ್ನೊಂದು ಕಡೆ ಇರಾನ್ ಕೂಡ ಇಸ್ರೇಲ್ ವಿರುದ್ಧ ಯುದ್ಧ ಸಾರಿದರೆ ಕಥೆ ಏನು? ಅನ್ನೋ ಭಯ ಕಾಡುತ್ತಿದೆ. ಗಾಜಾ ಪಟ್ಟಿ ಭಾಗದಲ್ಲಿ ಆಹಾರ & ನೀರು ಇಲ್ಲದೆ ಜನರು ಪರದಾಡುತ್ತಿದ್ದಾರೆ. ಹೀಗಾಗಿ, ಅಗತ್ಯ ವಸ್ತುಗಳನ್ನ ಪೂರೈಸಲಿ ಎಂಬ ಬೇಡಿಕೆ ಕೂಡ ಮುಂದಿಡಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+