ಭಾರತದ ಬಗ್ಗೆ ಹೆಮ್ಮೆಯ ಮಾತುಗಳನ್ನಾಡಿದ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು | Israel Prime Minister
ಭಾರತ ಹಾಗೂ ಇಸ್ರೇಲ್ ಸಂಬಂಧ ಅತ್ಯುತ್ತಮ ಹಂತದಲ್ಲಿ ಇದ್ದು, ಎರಡೂ ದೇಶಗಳು ಹಲವಾರು ವಿಚಾರಗಳಲ್ಲಿ ಒಟ್ಟಾಗಿ ಸಾಗುತ್ತಿವೆ. ವ್ಯಾಪಾರ & ವಹಿವಾಟು ಜೊತೆಗೆ, ಇಸ್ರೇಲ್ ಜೊತೆಗೆ ಭಾರತವು ಅವಿನಾಭಾವ ನಂಟು ಹೊಂದಿದೆ. ಅದರಲ್ಲೂ ಮಧ್ಯಪ್ರಾಚ್ಯ ಭಾಗದಲ್ಲಿ ಇಸ್ರೇಲ್ ಮತ್ತು ಇತರ ದೇಶಗಳ ನಡುವೆ ತಿಕ್ಕಾಟ ನಡೆಯುವಾಗ ಕೂಡ, ಭಾರತ ಸೂಕ್ತವಾದ ಹೆಜ್ಜೆ ಇಟ್ಟು ಇಸ್ರೇಲ್ ಜೊತೆಗಿನ ಸ್ನೇಹ ಉಳಿಸಿಕೊಂಡು ಬಂದಿದೆ. ಹಾಗೇ ಮಧ್ಯಪ್ರಾಚ್ಯ ದೇಶಗಳ ಜೊತೆ ಉತ್ತಮ ಬಾಂಧವ್ಯ ಕಾಪಾಡಿಕೊಂಡಿದೆ. ಇಂತಹ ಸಮಯದಲ್ಲಿ ಭಾರತದ ಬಗ್ಗೆ ಹೆಮ್ಮೆಯ ಮಾತುಗಳನ್ನಾಡಿದ್ದಾರೆ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು.
ಇಸ್ರೇಲ್‌ಗೆ ನಂಬಿಕಸ್ಥ ಸ್ನೇಹಿತರು ಕಡಿಮೆ ಇದ್ದರೂ, ಸ್ನೇಹಿತ ದೇಶಗಳ ಮೇಲೆ ತುಂಬಾ ನಂಬಿಕೆಯ ಇಟ್ಟುಕೊಂಡಿದೆ ಆ ದೇಶ. ಅದರಲ್ಲೂ ಭಾರತದ ಮೇಲೆ ಇಸ್ರೇಲ್ ಸಾಕಷ್ಟು ನಂಬಿಕೆ ಇಟ್ಟುಕೊಂಡು ವ್ಯಾಪಾರ ಹಾಗೂ ವಹಿವಾಟು ನಡೆಸಲಾಗುತ್ತಿದೆ. ಇಂತಹ ಸಮಯದಲ್ಲಿ ಮಧ್ಯಪ್ರಾಚ್ಯ ಭಾಗದಲ್ಲೀಗ ಭಾರಿ ದೊಡ್ಡ ಅಲ್ಲೋಲ ಕಲ್ಲೋಲ ಸೃಷ್ಟಿಯಾಗಿದ್ದು, ಯಾವಾಗ ಏನಾಗುತ್ತೋ? ಎಂಬ ಪರಿಸ್ಥಿತಿಯೂ ಎದುರಾಗಿದೆ. ಇದೇ ಸಮಯದಲ್ಲಿ ಭಾರತ ಪರೋಕ್ಷವಾಗಿ ಇಸ್ರೇಲ್‌ಗೆ ಅಗತ್ಯ ಇರುವ ಎಲ್ಲಾ ಸಹಾಯ ಮಾಡಿದ್ದು, ಜಾಗತಿಕ ಮಟ್ಟದಲ್ಲಿ ಗಮನ ಸೆಳೆದಿತ್ತು. ಇದರ ಜೊತೆಗೆ ಸಾಕಷ್ಟು ಎಚ್ಚರಿಕೆಯ ಹೆಜ್ಜೆ ಕೂಡ ಇಡಲಾಗಿತ್ತು. ಇದೀಗ ಖುದ್ದು ಇಸ್ರೇಲ್ ಪ್ರಧಾನಿ ಭಾರತವನ್ನು ಇಸ್ರೇಲ್ ಸಂಸತ್‌ನಲ್ಲೇ ನಿಂತು ಹೊಗಳಿದ್ದಾರೆ.

ಪ್ರಧಾನಿ ಮೋದಿ ಅವರ ಬಗ್ಗೆಯೂ ಹೊಗಳಿಕೆ
ಇಸ್ರೇಲ್ ಸಂಸತ್ತಿನಲ್ಲಿ ಮಾತನಾಡಿದ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರು, ಭಾರತವನ್ನು ಜಾಗತಿಕ ಶಕ್ತಿ ಎಂದು ಬಣ್ಣಿಸಿ ಹೊಗಳಿದ್ದಾರೆ. ಇದರ ಜೊತೆಗೆ ಭಾರತವನ್ನ ಪ್ರಮುಖವಾಗಿ ಒಳಗೊಂಡು ಅರಬ್, ಆಫ್ರಿಕಾ ಖಂಡದ ದೇಶಗಳು, ಗ್ರೀಸ್ ಮತ್ತು ಸೈಪ್ರಸ್ ಜೊತೆಗೆ ಹೊಸ ಮೈತ್ರಿ ಕೂಟದ ರಚನೆ ಬಗ್ಗೆಯೂ ಅವರು ಮಾಹಿತಿ ನೀಡಿದ್ದಾರೆ. ಹಾಗೇ ಪ್ರಧಾನಿ ನರೇಂದ್ರ ಮೋದಿ ಅವರನ್ನು, ನನ್ನ ಆತ್ಮೀಯ ಸ್ನೇಹಿತ ಎಂದು ಕೂಡ ಬಣ್ಣಿಸಿದ್ದಾರೆ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರು. ನೆತನ್ಯಾಹು ಅವರ ಈ ಹೇಳಿಕೆ ಇದೀಗ ಜಾಗತಿಕ ಮಟ್ಟದಲ್ಲಿ ಗಮನ ಸೆಳೆದಿದೆ. ಅಲ್ಲದೆ ಇರಾನ್ ಹಾಗೂ ಗಾಜಾ ಸೇರಿದಂತೆ ಮಧ್ಯಪ್ರಾಚ್ಯ ಭಾಗದಲ್ಲಿ ಹಲವು ತಿಕ್ಕಾಟ ನಡೆಯುವಾಗ, ಭಾರತ ಎಲ್ಲರ ಜೊತೆಗೂ ಇದೇ ರೀತಿ ಉತ್ತಮ ಸಂಬಂಧ ಕಾಪಾಡಿಕೊಂಡು ಬಂದಿರುವುದು ಗಮನ ಸೆಳೆದಿದೆ.
ಮೊಬೈಲ್ ಸಂಭಾಷಣೆ ವಿಚಾರ ಪ್ರಸ್ತಾಪ
ಮತ್ತೊಂದು ಕಡೆ ಫೆಬ್ರವರಿ 25 ಹಾಗೂ 26 ಸೇರಿ ಒಟ್ಟು 2 ದಿನಗಳ ಕಾಲ ಪ್ರಧಾನಿ ನರೇಂದ್ರ ಮೋದಿ ಅವರು ಇಸ್ರೇಲ್ ಪ್ರವಾಸವನ್ನ ಕೈಗೊಳ್ಳುತ್ತಿದ್ದಾರೆ. ಅದಕ್ಕೂ ಮೊದಲೇ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರು ಇಸ್ರೇಲ್ ಸಂಸತ್‌ನಲ್ಲಿ ನಿಂತು ಭಾರತದ ಬಗ್ಗೆ ಹೊಗಳಿಕೆಯ ಮಾತುಗಳನ್ನಾಡಿದ್ದು ಗಮನ ಸೆಳೆದಿದೆ. ಮತ್ತೊಂದು ಕಡೆ ಪ್ರಧಾನಿ ನರೇಂದ್ರ ಮೋದಿ ಅವರ ಜೊತೆ ಇಸ್ರೇಲ್ ನಿರಂತರವಾಗಿ ಫೋನ್ ಸಂಪರ್ಕದಲ್ಲಿ ಇರುವ ಬಗ್ಗೆಯೂ ನೆತನ್ಯಾಹು ಅವರು ತಿಳಿಸಿದ್ದು, ಈ ಮೂಲಕ ಭಾರತ & ಇಸ್ರೇಲ್ ಸಂಬಂಧ ಇನ್ನಷ್ಟು ಗಟ್ಟಿ ಮಾಡುವ ನಿರ್ಧಾರಕ್ಕೆ ಬಂದಿದ್ದಾರೆ.












Click it and Unblock the Notifications