Israel War: ಇಸ್ರೇಲ್‌ನತ್ತ ಹೊರಟ ಅಮೆರಿಕ ಯುದ್ಧನೌಕೆ

ಪ್ಯಾಲೆಸ್ತೀನ್‌ನ ಹಮಾಸ್‌ ಉಗ್ರರು ಇಸ್ರೇಲ್‌ ಮೇಲೆ ನಡೆಸಿದ ಹಠಾತ್‌ ಭೂ-ಸಮುದ್ರ-ವಾಯು ದಾಳಿಯಲ್ಲಿ ಹಲವಾರು ಅಮೆರಿಕನ್‌ ನಾಗರಿಕರು ಮೃತಪಟ್ಟಿದ್ದಾರೆ ಎಂದು ಅಮೆರಿಕದ ಅಧಿಕಾರಿಯೊಬ್ಬರು ಭಾನುವಾರ ಖಚಿತಪಡಿಸಿದ್ದಾರೆ. ಸಾವನ್ನಪ್ಪಿದ ನಾಗರಿಕರ ಸಂಖ್ಯೆ ಮತ್ತು ಗುರುತನ್ನು ಬಹಿರಂಗಪಡಿಸಿಲ್ಲ.

ಇಸ್ರೇಲ್ ಸಹಾಯಕ್ಕೆ ಅಮೆರಿಕ ಧಾವಿಸಿದ್ದು ಯುದ್ಧನೌಕೆ ಮತ್ತು ಯುದ್ಧವಿಮಾನಗಳನ್ನು ಕಳುಹಿಸಿಕೊಟ್ಟಿದೆ. ಈ ಮೂಲಕ ಮುಂದಿನ ದಿನಗಳಲ್ಲಿ ಯುದ್ಧ ಮತ್ತಷ್ಟು ತೀವ್ರವಾಗುವ ಆತಂಕ ಹೆಚ್ಚಾಗಿದ್ದು, ಹಮಾಸ್ ಉಗ್ರರ ದಾಳಿಗೆ ಪ್ರತಿಯಾಗಿ ಇಸ್ರೇಲ್ ಆಕ್ರಮಣಕಾರಿಯಾಗಿ ದಾಳಿ ಮಾಡುತ್ತಿದೆ.

Israel Palestine Conflict: US Deploys Warships and Warplanes to Support Israel

ಹಮಾಸ್‌ನಿಂದ ಹೆಚ್ಚುತ್ತಿರುವ ದಾಳಿಯ ಮುಖಾಂತರ ತನ್ನ ಮಿತ್ರರಾಷ್ಟ್ರಕ್ಕೆ ವಾಷಿಂಗ್ಟನ್‌ನ "ಅಚಲ" ಬೆಂಬಲವನ್ನು ಸೂಚಿಸುವ ಮೂಲಕ ಯುಎಸ್‌ ಅಧ್ಯಕ್ಷ ಜೋ ಬಿಡನ್ ಭಾನುವಾರ ಇಸ್ರೇಲ್‌ಗೆ ಅಮೆರಿಕ ಹಡಗುಗಳು ಮತ್ತು ಯುದ್ಧವಿಮಾನಗಳನ್ನು ಇಸ್ರೇಲ್‌ಗೆ ನಿಯೋಜನೆ ಮಾಡಲು ಆದೇಶಿಸಿದರು.

ವಿಮಾನವಾಹಕ ನೌಕೆ ಯುಎಸ್‌ಎಸ್‌ ಗೆರಾಲ್ಡ್ ಆರ್ ಫೋರ್ಡ್ ಮತ್ತು ಅದರ ಜೊತೆಯಲ್ಲಿರುವ ಯುದ್ಧನೌಕೆಗಳನ್ನು ಪೂರ್ವ ಮೆಡಿಟರೇನಿಯನ್‌ಗೆ ಕಳುಹಿಸುತ್ತಿರುವುದಾಗಿ ಪೆಂಟಗನ್ ಕಚೇರಿ ಹೇಳಿದೆ, ಈ ಪ್ರದೇಶದಲ್ಲಿ ಯುದ್ಧ ವಿಮಾನ ಸ್ಕ್ವಾಡ್ರನ್‌ಗಳನ್ನು ಹೆಚ್ಚಿಸುತ್ತಿದೆ.

ದಾಳಿಯನ್ನು ಖಂಡಿಸಿದ ಅಮೆರಿಕ

ಗಾಜಾ ಪಟ್ಟಿಯಿಂದ ಮಾರಣಾಂತಿಕ ದಾಳಿಯ ನಂತರ ಶ್ವೇತಭವನವು ಇಸ್ರೇಲ್‌ಗೆ ಅಮೆರಿಕ ಬೆಂಬಲವನ್ನು ಘೋಷಿಸಿತು. ಇಸ್ರೇಲ್‌ಗೆ ನೆರವು ನೀಡಲು ಐಕಮತ್ಯವನ್ನು ಪ್ರತಿಜ್ಞೆ ಮಾಡಿತು ಮತ್ತು ದಾಳಿಯಿಂದಾಗಿ ಇಸ್ರೇಲ್‌ನಲ್ಲಿ ಹಲವಾರು ಅಮೇರಿಕನ್ ನಾಗರಿಕರು ಸಾವನ್ನಪ್ಪಿದ ನಂತರ, ಇಸ್ರೇಲ್‌ಗೆ ಸಹಾಯ ಮಾಡಲು ಎಲ್ಲಾ ಪಕ್ಷಗಳು ಒಪ್ಪಿಗೆ ನೀಡಿದವು.

ಅಧ್ಯಕ್ಷ ಬಿಡೆನ್ ಭಾನುವಾರ ಇಸ್ರೇಲಿ ಪ್ರಧಾನ ಮಂತ್ರಿ ಬೆಂಜಮಿನ್ ನೆತನ್ಯಾಹು ಅವರೊಂದಿಗೆ ಮಾತನಾಡಿದರು ಮತ್ತು ಇಸ್ರೇಲಿ ರಕ್ಷಣಾ ಪಡೆಗಳಿಗೆ ಹೆಚ್ಚುವರಿ ಸಹಾಯ ನೀಡುವುದಾಗಿ ಭರವಸೆ ನೀಡಿದರು. ಈಗ ಅಮೆರಿಕ ಯುದ್ಧನೌಕೆ ಮತ್ತು ವಿಮಾನಗಳು ಇಸ್ರೇಲ್‌ನತ್ತ ಹೊರಟಿವೆ.

"ಯಾವುದೇ ಶತ್ರುಗಳು ಇಸ್ರೇಲ್‌ನ ಪ್ರಸ್ತುತ ಪರಿಸ್ಥಿತಿಯಿಂದ ಪ್ರಯೋಜನವನ್ನು ಪಡೆಯುವ ಆತಂಕ ಇದ್ದು, ಈ ಬಗ್ಗೆ ಖಚಿತಪಡಿಸಿಕೊಳ್ಳಲು ನಡೆಯುತ್ತಿರುವ ಪ್ರಯತ್ನಗಳನ್ನು ನಾಯಕರು ಚರ್ಚಿಸಿದ್ದಾರೆ" ಎಂದು ಶ್ವೇತಭವನದ ಹೇಳಿಕೆಯಲ್ಲಿ ತಿಳಿಸಿದೆ.

ಹಮಾಸ್ ಉಗ್ರರ ದಾಳಿಯ ನಂತರ ಕಾಣೆಯಾದ ಮತ್ತು ಸಾವನ್ನಪ್ಪಿದ ಅಮೆರಿಕನ್ನರ ವರದಿಗಳನ್ನು ಪರಿಶೀಲಿಸಲು ಯುಎಸ್ ಕೆಲಸ ಮಾಡುತ್ತಿದೆ ಎಂದು ವಿದೇಶಾಂಗ ಕಾರ್ಯದರ್ಶಿ ಆಂಟೋನಿ ಬ್ಲಿಂಕೆನ್ ಭಾನುವಾರ ಹೇಳಿದ್ದಾರೆ.

"ಇಸ್ರೇಲ್ ವಿರುದ್ಧದ ಭಯೋತ್ಪಾದಕ ದಾಳಿಗಳ ಕುರಿತು ಚರ್ಚಿಸಲು ನಾನು ಪ್ಯಾಲೇಸ್ಟಿನಿಯನ್ ಪ್ರಾಧಿಕಾರದ ಅಧ್ಯಕ್ಷ ಅಬ್ಬಾಸ್ ಅವರೊಂದಿಗೆ ಮಾತನಾಡಿದ್ದೇನೆ. ಈ ಪ್ರದೇಶದ ಎಲ್ಲಾ ನಾಯಕರು ಭಯೋತ್ಪಾದನೆಯ ಕೃತ್ಯಗಳನ್ನು ಖಂಡಿಸಬೇಕು ಎಂದು ನಾನು ಒತ್ತಾಯಿಸಿದೆ" ಎಂದು ಬ್ಲಿಂಕೆನ್ ಎಕ್ಸ್ (ಟ್ವಿಟರ್) ನಲ್ಲಿ ಬರೆದಿದ್ದಾರೆ.

ಇಸ್ರೇಲ್‌ಗೆ ಪ್ರಮುಖ ಶಸ್ತ್ರಾಸ್ತ್ರ ಪೂರೈಕೆದಾರರಾದ ಯುನೈಟೆಡ್ ಸ್ಟೇಟ್ಸ್, ವಿಮಾನವಾಹಕ ನೌಕೆಯನ್ನು ನಿಯೋಜಿಸುವ ಮೂಲಕ "ನಮ್ಮ ಜನರ ವಿರುದ್ಧದ ಆಕ್ರಮಣ" ದಲ್ಲಿ ಭಾಗಿಯಾಗಿದೆ ಎಂದು ಹಮಾಸ್ ಆರೋಪಿಸಿದೆ.

ಇಸ್ರೇಲಿ-ಪ್ಯಾಲೆಸ್ಟಿನಿಯನ್ ಸಂಘರ್ಷ ತೀವ್ರ ಸ್ವರೂಪ ಪಡೆದುಕೊಂಡಿದ್ದು ಈವರೆಗೂ 1100 ಕ್ಕೂ ಹೆಚ್ಚ ಮಂದಿ ಸಾವನ್ನಪ್ಪಿದ್ದಾರೆ. ಇಸ್ರೇಲ್‌ನಲ್ಲಿ 700ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದರೆ, ಗಾಜಾ ಪಟ್ಟಿಯಲ್ಲಿ 400ಕ್ಕೂ ಹೆಚ್ಚು ಜನ ಸಾವನ್ನಪ್ಪಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+