Israel War: ಕೆಲ ನಿಮಿಷದಲ್ಲೇ ಗಾಜಾದಿಂದ ಹಾರಿದ 5,000 ರಾಕೆಟ್- ರಕ್ತದೋಕುಳಿಯಲ್ಲಿ ಮಿಂದೆದ್ದ ಇಸ್ರೇಲ್‌ನಿಂದ ಯುದ್ಧ ಘೋಷಣೆ
ಜೆರುಸಲೇಂ, ಅಕ್ಟೋಬರ್ 07: ಪ್ಯಾಲೆಸ್ತೇನ್‌ನ ಗಾಜಾ ಪಟ್ಟಿ ಕಡೆಯಿಂದ ಭೀಕರ ರಾಕೆಟ್ ದಾಳಿ ನಡೆದಿರುವ ಹಿನ್ನೆಲೆಯಲ್ಲಿ ಇಸ್ರೇಲ್ ಯುದ್ಧವನ್ನು ಘೋಷಣೆ ಮಾಡಿದೆ. ಗಾಜಾ ಪಟ್ಟಿಯಿಂದ ಹಲವು ಬಾರಿ ರಾಕೆಟ್ ದಾಳಿ ನಡೆಸಲಾಗಿದೆ ಎಂದು ಇಸ್ರೇಲ್ ಆರೋಪಿಸಿದೆ.
ಶನಿವಾರ ಬೆಳಿಗ್ಗೆಯಿಂದಲೇ ರಾಕೆಟ್ ದಾಳಿ ಆರಂಭವಾಗಿದ್ದು, ಗಾಜಾ ಪಟ್ಟಿಯ ವಿವಿಧ ಕಡೆಗಳಿಂದ ಇಸ್ರೇಲಿನ ಭೂಭಾಗದೊಳಗೆ ಸ್ಪೋಟಗಳು ಕಂಡುಬಂದಿವೆ. ಇದಕ್ಕೆ ಉತ್ತರ ನೀಡಲು ಮುಂದಾಗಿರುವ ಇಸ್ರೇಲ್ ಯುದ್ಧದ ಪರಿಸ್ಥಿತಿಯನ್ನು ಘೋಷಣೆ ಮಾಡಿದೆ.

ಹಮಾಸ್ ಉಗ್ರಗಾಮಿಗಳು 5,000 ಕ್ಕೂ ಹೆಚ್ಚು ರಾಕೆಟ್‌ಗಳನ್ನು ಇಸ್ರೇಲ್‌ನೊಳಗೆ ನುಗ್ಗಿಸಿದ್ದಾರೆ. ಇವು ಇಸ್ರೇಲ್‌ನಾದ್ಯಂತ ಭೀಕರ ಸಾವು ನೋವುಗಳಿಗೆ ಕಾರಣವಾಗಿರುವುದು ವಿಡಿಯೋಗಳಲ್ಲಿ ಬಹಿರಂಗಗೊಂಡಿವೆ.
This is guerrilla warfare on the streets of southern Israel. The images are chilling. Many dead, and many hostages taken. Israel seems to have been taken completely off guard. It is a full fledge war. #Israel #Gaza pic.twitter.com/FP3tw9tld5
— The Fall Of Rome (@LaCadutaDiRoma) October 7, 2023
ಇಸ್ರೇಲ್‌ನಲ್ಲಿ ಭಯೋತ್ಪಾದಕರೆಂದು ಪರಿಗಣಿಸಲ್ಪಟ್ಟಿರುವ ಹಮಾಸ್ ಉಗ್ರಗಾಮಿಗಳ ಒಳನುಸುಳುವಿಕೆಯ ಬಗ್ಗೆ ದೇಶದ ರಕ್ಷಣಾ ಪಡೆಗಳು ಜನರಿಗೆ ಎಚ್ಚರಿಕೆ ನೀಡಿವೆ. ದಾಳಿಯಲ್ಲಿ ಪ್ಯಾರಾಗ್ಲೈಡರ್‌ಗಳನ್ನು ಬಳಸಲಾಗಿದ್ದು, ನಾಗರಿಕರ ಪ್ರಾಣ ಹಾನಿಗೆ ಕಾರಣವಾಗಿವೆ.

ಈ ಭೀಕರ ದಾಳಿಯ ಹಿನ್ನೆಲೆಯಲ್ಲಿ ಇಸ್ರೇಲ್ ಯುದ್ಧವನ್ನು ಘೋಷಿಸಿದೆ. ಇದು ಜಾಗತಿಕವಾಗಿ ಭಾರೀ ಸಂಚಲವನ್ನು ಸೃಷ್ಟಿಸಿದೆ.
🇮🇱 “𝗜𝘀𝗿𝗮𝗲𝗹 𝘂𝗻𝗱𝗲𝗿 𝗮𝘁𝘁𝗮𝗰𝗸”
— Noor Dahri - نور ڈاہری 🇬🇧 (@dahrinoor2) October 7, 2023
Terrorists are firing rockets at communities across southern and central Israel.
Heavy rocket barrage launched from Gaza toward Israel — rocket alert sirens sound throughout the south and center of the country including Tel Aviv.… pic.twitter.com/8DRvAG7YAP
ಈ ಕುರಿತು ಟ್ವೀಟ್ ಮಾಡಿರುವ ಇಸ್ರೇಲ್ ರಕ್ಷಣಾ ಪಡೆ, 'ಗಾಜಾ ಪಟ್ಟಿಯಿಂದ ಹಲವಾರು ಭಯೋತ್ಪಾದಕರು ಇಸ್ರೇಲಿ ಭೂಪ್ರದೇಶಕ್ಕೆ ನುಸುಳಿದ್ದಾರೆ. ಗಾಜಾ ಪಟ್ಟಿಯ ಸುತ್ತಮುತ್ತಲಿನ ಪ್ರದೇಶದ ನಿವಾಸಿಗಳು ತಮ್ಮ ಮನೆಗಳಲ್ಲಿ ಉಳಿಯಲು ನಾವು ಮನವಿ ಮಾಡುತ್ತೇವೆ' ಎಂದು ತಿಳಿಸಿದೆ.
ಪವಿತ್ರ ನಗರವಾದ ಜೆರುಸಲೇಮ್ ಮತ್ತು ಇಸ್ರೇಲ್‌ನಾದ್ಯಂತ ಸೈರನ್‌ಗಳು ಮೊಳಗುತ್ತಿವೆ. ದೇಶದಾದ್ಯಂತ ಬಾಂಬ್‌ಗಳು ಸ್ಫೋಟಗೊಳ್ಳುತ್ತಿವೆ.
ಹಮಾಸ್‌ನ ಸಶಸ್ತ್ರ ವಿಭಾಗವು 'ಆಪರೇಷನ್ ಅಲ್-ಅಕ್ಸಾ ಫ್ಲಡ್' ಅನ್ನು ಪ್ರಾರಂಭಿಸಿದೆ ಎಂದು ಘೋಷಿಸಿದೆ. 20 ನಿಮಿಷಗಳ ಮೊದಲ ದಾಳಿಯಲ್ಲಿ 5,000 ರಾಕೆಟ್‌ಗಳನ್ನು ಹಾರಿಸಿದೆ ಎಂದು ಹೇಳಿಕೊಂಡಿದೆ.
'ನಾವು ಎಲ್ಲಾ ಇಸ್ರೇಲ್ ಅಪರಾಧಗಳನ್ನು ಕೊನೆಗೊಳಿಸಲು ನಿರ್ಧರಿಸಿದ್ದೇವೆ ಎಂದು ಹಮಾಸ್ ಹೇಳಿಕೊಂಡಿದೆ.
ಗಾಜಾ ಪಟ್ಟಿಗೆ ಹೊಂದಿಕೊಂಡಿರುವ ಇಸ್ರೇಲ್‌ನ ಗಡಿಯುದ್ದಕ್ಕೂ ವಾರಗಳಿಂದ ಸಂಘರ್ಷಗಳು ಉಂಟಾಗಿದ್ದವು. ಇಸ್ರೇಲಿ ಆಕ್ರಮಿತ ಪಶ್ಚಿಮ ಪ್ರದೇಶದಲ್ಲಿ ಗುಂಡಿನ ಚಕಮಕಿ ನಡೆಯುತ್ತಲಿದ್ದವು. ಇದು ವಿಕೋಪಕ್ಕೆ ತಿರುಗಿದ ಹಿನ್ನೆಲೆಯಲ್ಲಿ ಹಮಾಸ್ ಉಗ್ರರು ಪ್ರತಿಕಾರದ ದಾಳಿ ನಡೆಸಿದ್ದಾರೆ.
ಇಸ್ರೇಲ್‌ನ ರಕ್ಷಣಾ ಸಚಿವ ಜೋವ್ ಗ್ಯಾಲಂಟ್ ಅವರು ಯುದ್ಧ ಸಾರುವ ಪ್ರಕ್ರಿಯೆಗೆ ಅನುಮೋದಿಸಿದ್ದಾರೆ. ಮಿಲಿಟರಿಯ ಅಗತ್ಯಗಳಿಗೆ ಅನುಗುಣವಾಗಿ ಕರ್ತವ್ಯಕ್ಕೆ ಹಾಜರಾಗುವಂತೆ ಯೋಧರಿಗೆ ಸೂಚಿಸಿದ್ದಾರೆ.
ಇಸ್ರೇಲಿ ಬ್ರಾಡ್‌ಕಾಸ್ಟಿಂಗ್ ಅಥಾರಿಟಿ ವರದಿಗಳ ಪ್ರಕಾರ, ಹಮಾಜ್ ಹೋರಾಟಗಾರರು ಇಸ್ರೇಲ್‌ನ ಸ್ಡೆರೋಟ್‌ನಲ್ಲಿ ಪೊಲೀಸ್ ಠಾಣೆಯ ಮೇಲೆ ಹಿಡಿತ ಸಾಧಿಸಿದ್ದಾರೆ. ಸಂಘರ್ಷದಲ್ಲಿ ಹಲವಾರು ಜನರು ಗಾಯಗೊಂಡಿದ್ದಾರೆ ಎಂದು ತಿಳಿಸಿದೆ.
ಪ್ಯಾಲೇಸ್ಟಿನಿಯನ್ ಸೈನಿಕರು ಇಸ್ರೇಲ್‌ನ ಸ್ಡೆರೋಟ್‌ನ ಸುತ್ತಲೂ ತಿರುಗಾಡುತ್ತಿದ್ದಾರೆ. ಬೀದಿಗಳಲ್ಲಿ ನಾಗರಿಕರನ್ನು ಗುಂಡಿಕ್ಕಿ ಕೊಲ್ಲುತ್ತಿದ್ದಾರೆ ಎಂದು ಹೇಳಿದೆ.
ಗಾಜಾ ಪಟ್ಟಿಯ ಗಡಿ ಮೇಲೆ ಇಸ್ರೇಲ್ ಸೇನೆಯು ತನ್ನ ನಿಯಂತ್ರಣವನ್ನು ಕಳೆದುಕೊಂಡಿದೆ ಎಂದು ಹಲವಾರು ವರದಿಗಳು ಹೇಳುತ್ತಿವೆ.
ರಕ್ಷಣಾ ಸಚಿವ ಯೋವ್ ಗ್ಯಾಲಂಟ್ ಅವರು ಗಾಜಾ ಪಟ್ಟಿಯಿಂದ 80 ಕಿಮೀ ವ್ಯಾಪ್ತಿಯಲ್ಲಿ ತುರ್ತು ಪರಿಸ್ಥಿತಿಯನ್ನು ಘೋಷಿಸಿದ್ದಾರೆ.












Click it and Unblock the Notifications