ಇರಾನ್‌ನಿಂದ ಪ್ರತಿದಾಳಿ ಸಾಧ್ಯತೆ ಹಿನ್ನೆಲೆ ಇಸ್ರೇಲ್ ಹೈ ಅಲರ್ಟ್: ಜನರಿಗೆ ಎಚ್ಚರಿಕೆ ಸಂದೇಶ ರವಾನೆ
Israel Vs Iran War: ಇರಾನ್-ಅಮೆರಿಕ ನಡುವಿನ ಅಣು ಒಪ್ಪಂದದ ವಿಚಾರದಲ್ಲಿ ತೀವ್ರ ಚರ್ಚೆಗಳು ನಡೆಯುತ್ತಿರುವ ಹಿನ್ನೆಲೆ, ಶನಿವಾರ ಇಸ್ರೇಲ್ ಇರಾನ್ ಮೇಲೆ ಮುಂಜಾಗ್ರತಾ ಕ್ಷಿಪಣಿ ದಾಳಿ ನಡೆಸಿರುವುದಾಗಿ ತಿಳಿಸಿದೆ. ಅಲ್ಲದೆ, ಪ್ರತಿದಾಳಿಯ ಸಾಧ್ಯತೆ ಹಿನ್ನೆಲೆ ದೇಶದ ಜನರಿಗೆ ಎಚ್ಚರಿಕೆ ಸಂದೇಶವನ್ನು ಸಹ ರವಾನೆ ಮಾಡಿದೆ.
ಇರಾನ್ ರಾಜಧಾನಿ ಟೆಹ್ರಾನ್‌ನ ವಿವಿಧ ಭಾಗಗಳಲ್ಲಿ ಸ್ಫೋಟಗಳ ಶಬ್ದಗಳು ಕೇಳಿಬಂದಿದ್ದು, ನಗರದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ. ಅಂತಾರಾಷ್ಟ್ರೀಯ ಸುದ್ದಿ ಮೂಲಗಳ ಪ್ರಕಾರ, ಯೂನಿವರ್ಸಿಟಿ ಸ್ಟ್ರೀಟ್ ಹಾಗೂ ಜೊಮ್ಹೌರಿ ಪ್ರದೇಶಗಳತ್ತ ಕ್ಷಿಪಣಿಗಳು ಅಪ್ಪಳಿಸಿವೆ. ನಗರದ ಕೇಂದ್ರ ಭಾಗದಲ್ಲಿರುವ ಪಾಸ್ಟರ್ ಸ್ಟ್ರೀಟ್ ಸಮೀಪ ಸ್ಫೋಟದ ನಂತರ ದಟ್ಟ ಹೊಗೆಯ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿವೆ.

ಸೈರನ್ ಮೊಳಗಿಸಿದ ಇಸ್ರೇಲ್ ರಕ್ಷಣಾ ಪಡೆ
ದಾಳಿಯ ಬೆನ್ನಲ್ಲೇ ಇರಾನ್‌ನಿಂದ ಪ್ರತಿದಾಳಿ ನಡೆಯುವ ಸಾಧ್ಯತೆಯನ್ನು ಮನಗಂಡು, ಇಸ್ರೇಲ್ ರಕ್ಷಣಾ ಪಡೆ ದೇಶಾದ್ಯಂತ ಎಚ್ಚರಿಕಾ ಸೈರನ್‌ಗಳನ್ನು ಮೊಳಗಿಸಿದೆ. "ಇರಾನ್‌ನಿಂದ ಕ್ಷಿಪಣಿ ದಾಳಿ ಸಂಭವಿಸಬಹುದಾದ ಸಾಧ್ಯತೆ ಇರುವುದರಿಂದ ನಾಗರಿಕರು ತಕ್ಷಣವೇ ಸುರಕ್ಷಿತ ಸ್ಥಳಗಳಿಗೆ ತೆರಳಲು ಸಿದ್ಧರಾಗಿರಬೇಕು," ಎಂದು ಎಚ್ಚರಿಕೆ ನೀಡಲಾಗಿದೆ.
ಇಸ್ರೇಲ್‌ನಲ್ಲಿ ಎಲ್ಲಾ ಸಮಾರಂಭಗಳಿಗೂ ತಾತ್ಕಾಲಿಕ ನಿಷೇಧ
ಅಲ್ಲದೆ ಮುಂಜಾಗ್ರತಾ ಕ್ರಮವಾಗಿ ಇಡೀ ದೇಶದಲ್ಲಿ ಶಾಲೆಗಳು ಮುಚ್ಚಲಾಗಿದೆ. ಸಾರ್ವಜನಿಕ ಸಭೆಗಳು ಹಾಗೂ ಸಮಾರಂಭಗಳನ್ನು ತಾತ್ಕಾಲಿಕವಾಗಿ ನಿಷೇಧಿಸಲಾಗಿದೆ. ಅಗತ್ಯ ಸೇವೆಗಳನ್ನು ಹೊರತುಪಡಿಸಿ ಉಳಿದ ಕಾರ್ಯಚಟುವಟಿಕೆಗಳನ್ನು ಸ್ಥಗಿತಗೊಳಿಸಲು ಸೂಚಿಸಲಾಗಿದೆ. ಇತ್ತ ಇರಾನ್‌ನ ಮಾಧ್ಯಮ ವರದಿಯ ಪ್ರಕಾರ, ಟೆಹ್ರಾನ್‌ನ ಪಶ್ಚಿಮ ಭಾಗದಲ್ಲಿಯೂ ಭಾರೀ ಸ್ಫೋಟಗಳ ಶಬ್ದ ಕೇಳಿಬಂದಿದೆ. ಆದರೆ, ಸದ್ಯದ ಮಾಹಿತಿ ಪ್ರಕಾರ, ಇರಾನ್‌ನಿಂದ ಇಸ್ರೇಲ್ ಮೇಲೆ ಪ್ರತಿದಾಳಿ ನಡೆದಿಲ್ಲ ಎಂದು ತಿಳಿದುಬಂದಿದೆ.
ಪ್ರಮುಖ ಸೂಚನೆ
ಇನ್ನೂ ಇರಾನ್ ಸೇನೆ ದಾಳಿ ನಡೆಸುವ ಸಾಧ್ಯತೆ ಇರುವ ಹಿನ್ನೆಲೆ ಮುನ್ನೆಚ್ಚರಿಕಾ ಕ್ರಮವಾಗಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಇಸ್ರೇಲ್ ಸ್ಪಷ್ಟನೆ ನೀಡಿದೆ. ಈ ಮಧ್ಯೆ ಇಸ್ರೇಲ್‌ನಲ್ಲಿರುವ ಭಾರತೀಯ ನಾಗರಿಕರಿಗೆ ಭಾರತೀಯ ರಾಯಭಾರ ಕಚೇರಿಯ ಗಂಭೀರ ಎಚ್ಚರಿಕೆಯನ್ನು ನೀಡಿದೆ.
ಇರಾನ್‌ಗೆ ಪ್ರಯಾಣಿಸದಂತೆ ಸರ್ಕಾರವು ಭಾರತೀಯ ನಾಗರಿಕರಿಗೆ ಸಲಹೆ ನೀಡಿದ್ದು, ಅಧಿಕಾರಿಗಳು ಇರಾನ್‌ನಲ್ಲಿರುವ ಭಾರತೀಯರಿಗೆ ಜಾಗರೂಕರಾಗಿರಲು ಮತ್ತು ಟೆಹರಾನ್‌ನಲ್ಲಿರುವ ರಾಯಭಾರ ಕಚೇರಿಯೊಂದಿಗೆ ಸಂಪರ್ಕದಲ್ಲಿರಲು ಸೂಚಿಸಿದ್ದಾರೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ಪ್ರಕಟಣೆ ಮೂಲಕ ತಿಳಿಸಿದೆ. ಭಾರತೀಯ ರಾಯಭಾರ ಕಚೇರಿ ಇರಾನ್‌ನಲ್ಲಿರುವ ಭಾರತೀಯ ನಾಗರಿಕರಿಗೆ ತುರ್ತು ಸಂಪರ್ಕ ಸಂಖ್ಯೆಗಳನ್ನೂ ನೀಡಿದೆ. ಯಾವುದೇ ತುರ್ತು ಸಮಯದಲ್ಲಿ 972-54-7520711 ಅಥವಾ [email protected] ಸಂಪರ್ಕಿಸಬಹುದಾಗಿದೆ ಎಂದು ತಿಳಿಸಿಲಾಗಿದೆ.
ಸದ್ಯದ ಬೆಳವಣಿಗೆಯನಗನು ಗಮನದಲ್ಲಿಟ್ಟುಕೊಂಡು ಯಾರೂ ಇರಾನ್ ಪ್ರವಾಸ ಮಾಡದಂತೆ ವಿದೇಶಾಂಗ ಇಲಾಖೆ ಕಟ್ಟುನಿಟ್ಟಿನ ಸೂಚನೆ ನೀಡಿದೆ. ಮುಂದಿನ ಸೂಚನೆ ಬರುವವರೆಗೂ ಯಾರೂ ಇರಾನ್ ದೇಶನಕ್ಕೆ ಪ್ರಯಾಣ ಮಾಡದಂತೆ ಸೂಚಿಸಲಾಗಿದೆ.












Click it and Unblock the Notifications