ಮಧ್ಯಪ್ರಾಚ್ಯದಲ್ಲಿ 40,000 ಸೈನಿಕರ ಬಲ ಹೊಂದಿದೆ ಅಮೆರಿಕ, ನೌಕೆಗಳಿಂದಲೂ ದಾಳಿಗೆ ಸಿದ್ಧತೆ | Israel Military
ಅಮೆರಿಕ ಮತ್ತು ಇಸ್ರೇಲ್ ಒಟ್ಟಾಗಿ ಇರಾನ್ ವಿರುದ್ಧ ಯುದ್ಧ ಸಾರಿ ದಾಳಿ ಆರಂಭ ಮಾಡಿವೆ. ಹೀಗೆ ಒಂದು ಕಡೆ ಜಾಗತಿಕ ಮಟ್ಟದಲ್ಲಿ ಯುದ್ಧ ಭಯ ಕಾಡುವ ಸಮಯದಲ್ಲೇ, ಇನ್ನೊಂದು ಕಡೆ ಇರಾನ್ ಮೇಲಿನ ದಾಳಿ ದೊಡ್ಡ ಆತಂಕ ತಂದೊಡ್ಡಿದೆ. ಅಮೆರಿಕ ಮತ್ತು ಇರಾನ್ ನಡುವೆ ಪರಮಾಣು ಶಾಂತಿ ಒಪ್ಪಂದ ಯಶಸ್ಸು ಕಾಣದೆ ಮುರಿದುಬಿದ್ದ ಬೆನ್ನಲ್ಲೇ ಇಸ್ರೇಲ್ ಸೇನೆ ದಾಳಿ ಮಾಡಿದೆ. ಮತ್ತೊಂದೆಡೆ ಈಗಾಗಲೇ ಇರಾನ್ ಗಡಿಯಲ್ಲಿ ಕಾಯುತ್ತಿರುವ ಅಮೆರಿಕದ ನೌಕಾಪಡೆ, ದಿಢೀರ್ ದಾಳಿಗೆ ಸಜ್ಜಾಗಿದೆ. ಹಾಗೇ ಮಧ್ಯಪ್ರಾಚ್ಯದಲ್ಲಿ 40,000 ಸೈನಿಕರ ಬಲ ಹೊಂದಿರುವ ಅಮೆರಿಕ ಯಾವುದೇ ಕ್ಷಣದಲ್ಲಿ ಇಡೀ ಇರಾನ್ ಮೇಲೆ ದಾಳಿ ಮಾಡುವ ಸಾಧ್ಯತೆ ದಟ್ಟವಾಗಿದೆ.
ಮಧ್ಯಪ್ರಾಚ್ಯದಲ್ಲಿ ಮೊದಲಿನಿಂದ ಕೂಡ ದೊಡ್ಡಣ್ಣ ಅಮೆರಿಕ ಭಾರಿ ಹಿಡಿತವನ್ನು ಹೊಂದಿದೆ. ಒಂದು ಅಂದಾಜಿನಂತೆ ಮಧ್ಯಪ್ರಾಚ್ಯ ಭಾಗದಲ್ಲಿ ಅಮೆರಿಕ ಸೇನೆಯ ಸುಮಾರು 40,000 ಸೈನಿಕರು ನೆಲೆಸಿದ್ದಾರೆ. ಗಲ್ಫ್ ಪ್ರದೇಶ ಅಮೆರಿಕ ಸೆಂಟ್ರಲ್ ಕಮಾಂಡ್ ವ್ಯಾಪ್ತಿಗೆ ಬರುತ್ತೆ. ಸೌದಿ ಅರೇಬಿಯಾ, ಯುಎಇ, ಬಹ್ರೇನ್ ಸೇರಿದಂತೆ ಕುವೈತ್, ಓಮನ್ & ಖತಾರ್ ಹಾಗೂ ಇನ್ನೂ ಹಲವು ದೇಶಗಳಲ್ಲಿ ಅಮೆರಿಕ ತನ್ನ ಸೇನಾ ನೆಲೆ ಹೊಂದಿದೆ. ಎಲ್ಲಾ ಸೇರಿ ಸುಮಾರು 40,000 ಅಮೆರಿಕ ಸೈನಿಕರು ಇದ್ದಾರೆ. ಇವರೆಲ್ಲಾ ಇದೀಗ ಇರಾನ್ ವಿರುದ್ಧದ ಯುದ್ದಕ್ಕೆ ಸನ್ನದ್ಧವಾಗಿದ್ದು, ಅಮೆರಿಕ ದೊಡ್ಡ ಮಟ್ಟದಲ್ಲಿ ಕಾರ್ಯಾಚರಣೆ ಶುರು ಮಾಡಿ ಇಡೀ ಇರಾನ್ ಮೇಲೆ ಹಿಡಿತ ಸಾಧಿಸುವ ಸಾಧ್ಯತೆ ದಟ್ಟವಾಗಿದೆ.

800 ಯುದ್ಧ ವಿಮಾನ ಹಾರಿಸಬಹುದು
ಇರಾನ್ ಸಮೀಪಕ್ಕೆ ಅಮೆರಿಕ ಸೇನೆಯ ಬೃಹತ್ ಯುದ್ಧ ನೌಕೆ ಯುಎಸ್‌ಎಸ್ ಅಬ್ರಹಾಂ ಲಿಂಕನ್ ಮತ್ತು ಜೊತೆಗೆ ಫೋರ್ಡ್ ಎಂಬ ಮತ್ತೊಂದು ನೌಕೆ ಬಂದು ನಿಂತು ಹಲವು ದಿನಗಳೇ ಕಳೆದಿವೆ. ಪ್ರಪಂಚದಲ್ಲೇ ಅತ್ಯಂತ ಬಲಿಷ್ಠ ಯುದ್ಧನೌಕೆ ಎಂದು ಯುಎಸ್‌ಎಸ್ ಅಬ್ರಹಾಂ ಲಿಂಕನ್ ಹಾಗೂ ಫೋರ್ಡ್ ಹೆಸರನ್ನು ಮಾಡಿವೆ. ಹೀಗಿದ್ದಾಗಲೇ ಪ್ರಸ್ತುತ ವಾತಾವರಣದಲ್ಲಿ ಈ ಪ್ರದೇಶದಲ್ಲಿ ಇರುವ ಒಟ್ಟು 8 ವಾಯುನೆಲೆಗಳ ಬೆಂಬಲದಿಂದ ಅಮೆರಿಕ ಸೇನೆ ಪ್ರತಿ ದಿನಕ್ಕೆ ಸುಮಾರು 800 ಯುದ್ಧ ವಿಮಾನಗಳ ಹಾರಾಟ ನಡೆಸುವಷ್ಟು ಶಕ್ತಿ ಪಡೆದಿದೆ. ಇನ್ನೊಂದು ಕಡೆ ದೊಡ್ಡ ದೊಡ್ಡ ಯುದ್ಧ ವಿಮಾನಗಳು ಈಗಾಗಲೇ ಮಧ್ಯಪ್ರಾಚ್ಯದ ಕಡೆಗೆ ಬರುತ್ತಿದ್ದು, ಅಮೆರಿಕ ಮತ್ತು ಇರಾನ್ ನಡುವೆ ನೇರ ಕದನ ಶುರುವಾಗುತ್ತಿದೆ.












Click it and Unblock the Notifications