ಗಾಜಾ ನಗರದ ಮೇಲೆ ಮತ್ತಷ್ಟು ಭೀಕರ ದಾಳಿ ನಡೆಸಿದ ಇಸ್ರೇಲ್ ಸೇನೆ?
ಗಾಜಾ
ಪಟ್ಟಿ ಮೇಲೆ ಇಸ್ರೇಲ್ ಸೇನೆ ನಡೆಸುತ್ತಿರುವ ತನ್ನ ದಾಳಿಯನ್ನ ಈಗಲೂ ನಿಲ್ಲಿಸುವ ಮನಸ್ಸು ಮಾಡ್ತಿಲ್ಲ. ಅಂತಾರಾಷ್ಟ್ರೀಯ ಒತ್ತಡಗಳಿಗೆ ಕೂಡ ಮಣಿಯದೆ ತನ್ನ ದಾಳಿ ಮುಂದುವರಿಸಿರುವ ಇಸ್ರೇಲ್ ಸೇನೆ ಇದೀಗ ಗಾಜಾ ನಗರದ ಮತ್ತಷ್ಟು ಪ್ರದೇಶಗಳನ್ನ ಧೂಳ್ ಧೂಳ್ ಮಾಡಿದೆ ಎಂಬ ಭಾರಿ ಗಂಭೀರ ಆರೋಪ ಇದೀಗ ಕೇಳಿ ಬಂದಿದೆ. ಇದು ಸಾಲದು ಎನ್ನುವಂತೆ ಇದೀಗ ಮತ್ತೊಮ್ಮೆ ಗಾಜಾ ಪಟ್ಟಿ ಮೇಲೆ ಭೀಕರ ದಾಳಿ ನಡೆಸಲು ಇಸ್ರೇಲ್ ರಣಭೀಕರ ಅಸ್ತ್ರಗಳನ್ನು ಬಳಕೆ ಮಾಡಿ ಮುಂದೆ ನುಗ್ಗಿದೆಯಾ? ಎಂಬ ಅನುಮಾನ ಕೂಡ ಜಾಗತಿಕವಾಗಿ ಮೂಡಿದೆ. id="toptextpromo"> id='are-slot-1' class='oiad oi-axt oiadv'> id='top-searched-articles'>ಗಾಜಾ
ಪಟ್ಟಿಯಲ್ಲಿ ಹಿಂಸಾಚಾರ ನಿಲ್ಲಿಸಲು ಖುದ್ದು ಅಮೆರಿಕ ಕೈಯಲ್ಲಿ ಕೂಡ ಸಾಧ್ಯವಾಗುತ್ತಿಲ್ಲ. ಅಮೆರಿಕ ಜಗತ್ತಿನ ಶಕ್ತಿಶಾಲಿ ದೇಶವಾಗಿದ್ದು, ಜಾಗತಿಕವಾಗಿ ಪ್ರಭಾವಶಾಲಿ ದೇಶವಾಗಿದೆ. ಅದರಲ್ಲೂ ಈ ದೇಶದ ವಿರುದ್ಧ ಮಾತನಾಡುವ ಶಕ್ತಿ ಯಾರಲ್ಲೂ ಇಲ್ಲ ಅನ್ನುವಂತೆ ಬಾಳುತ್ತಿದೆ. ಆದರೆ ಇಸ್ರೇಲ್ ಮಾತ್ರ ಅಮೆರಿಕ ಹೇಳುವ ಮಾತು ಕೇಳುತ್ತಿಲ್ಲ ಎಂಬ ಆರೋಪ ಪದೇ ಪದೇ ಕೇಳಿ ಬರುತ್ತಲೇ ಇತ್ತು. ಈ ಆರೋಪ ಇದೀಗ ಗಾಜಾ ಪಟ್ಟಿ ಯುದ್ಧದ ವಿಚಾರದಲ್ಲಿ ಕೂಡ ಮತ್ತೊಮ್ಮೆ ನಿಜವಾಗುತ್ತಿದೆ. ಹೀಗೆ ಅಮೆರಿಕ ಹಲವು ಬಾರಿ ಮನವಿ ಮಾಡಿದರೂ ಗಾಜಾ ಮೇಲೆ ನಡೆಯುತ್ತಿರುವ ದಾಳಿ ಮಾತ್ರ ನಿಲ್ಲುತ್ತಾ ಇಲ್ಲ... id='are-slot-2' class='oiad oi-axt oiadv'>












Click it and Unblock the Notifications