ಪಾಕಿಸ್ತಾನದಲ್ಲಿ ಭೀಕರ ಸ್ಫೋಟಕ್ಕೆ 31 ಜನರ ಜೀವ ಬಲಿ, 160 ಜನ ಆಸ್ಪತ್ರೆಗೆ... Islamabad Incident
ಭಾರತದ ಶತ್ರು ಪಾಕಿಸ್ತಾನ ತಾನೇ ಸಾಕಿರುವ ಉಗ್ರರಿಂದ ನಾಶವಾಗಿ ಹೋಗುತ್ತಿದೆ, ಅಕ್ಕಪಕ್ಕ ಇರುವ ದೇಶಗಳ ಮೇಲೆ ದಾಳಿ ಮಾಡಿಸಿ ನೆಮ್ಮದಿ ಕೆಡಿಸಲು ಪಾಕಿಸ್ತಾನ ಇದೇ ಉಗ್ರರನ್ನು ಬಳಸಿಕೊಳ್ಳುತ್ತಿತ್ತು. ಆದರೆ ಈಗ ಅದೇ ಉಗ್ರರಿಂದ ಪಾಕಿಸ್ತಾನ ನಲುಗಿ ಹೋಗುವಂತೆ ಆಗಿದ್ದು, ಇಂದು ದಿಢೀರ್ ಬಾಂಬ್ ದಾಳಿ ನಡೆಸಿರುವ ಪಾಪಿ ಉಗ್ರರು ಬರೋಬ್ಬರಿ 31 ಜನರ ಜೀವ ಬಲಿ ಪಡೆದು, 160 ಜನರನ್ನು ನರಳುವ ರೀತಿ ಮಾಡಿದ್ದಾರೆ. ಪಾಕಿಸ್ತಾನದ ರಾಜಧಾನಿ ಇಸ್ಲಾಮಾಬಾದ್ ನಗರದಲ್ಲೇ ಈ ರೀತಿಯ ರಣಭೀಕರ ಘಟನೆ ಸಂಭವಿಸಿದ್ದು, ಇಡೀ ಜಗತ್ತಿನಾದ್ಯಂತ ಇದು ಸಂಚಲನ ಸೃಷ್ಟಿ ಮಾಡಿದೆ.
ಭಾರತ ವಿರೋಧಿ & ಭಾರತದ ಆಜನ್ಮ ಶತ್ರು ಪಾಕಿಸ್ತಾನ ತಾನು ಮಾಡಿದ ಪಾಪ ತಾನೇ ಅನುಭವಿಸುವ ಪರಿಸ್ಥಿತಿ ಬಂದಿದ್ದು, ಉಗ್ರರು ಇಂದು ನೇರವಾಗಿ ಪಾಕಿಸ್ತಾನದ ರಾಜಧಾನಿ ಇಸ್ಲಾಮಾಬಾದ್ ನಗರಕ್ಕೇ ನುಗ್ಗಿ ದಾಳಿ ಮಾಡಿ 31 ಜನರ ಜೀವ ಬಲಿ ಪಡೆದಿದ್ದಾರೆ. ಇಸ್ಲಾಮಾಬಾದ್‌ನ ಪ್ರಾರ್ಥನಾ ಮಂದಿರಲ್ಲಿ ಶುಕ್ರವಾರ ಹಿನ್ನೆಲೆ ಮಧ್ಯಾಹ್ನ ಭಾರಿ ಪ್ರಮಾಣದಲ್ಲಿ ಜನರು ಸೇರಿ, ಪ್ರಾರ್ಥನೆ ಸಲ್ಲಿಸುತ್ತಿದ್ದರು. ಇದೇ ಸಮಯಕ್ಕೆ ಕಾದು ಕುಳಿತಿದ್ದ ಪಾಪಿ ಉಗ್ರರು ನೇರವಾಗಿ ಪ್ರಾರ್ಥನಾ ಮಂದಿರಕ್ಕೆ ನುಗ್ಗಿ ಆತ್ಮಾಹುತಿ ದಾಳಿ ನಡೆಸಿದ್ದಾರೆ. ಈ ದಾಳಿಯ ಪರಿಣಾಮ ನೂರಾರು ಜನರು ಗಾಯಗೊಂಡರೆ ಈವರೆಗೂ 31 ಜನ ಬಲಿ ಆಗಿದ್ದಾರೆ.

ಭೀಕರ ಸ್ಫೋಟಕ್ಕೆ ಬೆಚ್ಚಿಬಿದ್ದ ಜನರು
ಅಷ್ಟಕ್ಕೂ ಇಸ್ಲಾಮಾಬಾದ್ ನಗರದಲ್ಲಿರುವ ಶೆಹಜಾದ್ ಟೌನ್ ಪ್ರದೇಶದಲ್ಲಿ ಈ ಘಟನೆ ಸಂಭವಿಸಿದ್ದು, ಪ್ರಾರ್ಥನಾ ಮಂದಿರದ ಮುಖ್ಯ ದ್ವಾರದಲ್ಲಿ ಆತ್ಮಾಹುತಿ ಬಾಂಬರ್ ಸ್ಪೋಟಕ ತುಂಬಿಕೊಂಡು ಬಂದು ತನ್ನನ್ನೇ ತಾನು ಸ್ಫೋಟಿಸಿಕೊಂಡಿದ್ದಾನೆ ಎಂದು ಪಾಕ್ ಮಾಧ್ಯಮಗಳು ವರದಿ ಮಾಡಿವೆ. ಇನ್ನಷ್ಟು ಮಾಹಿತಿಯ ಪ್ರಕಾರ, ಆತ್ಮಾಹುತಿ ದಾಳಿಕೋರ ಪ್ರಾರ್ಥನಾ ಸ್ಥಳಕ್ಕೆ ಬಂದ ಸಮಯದಲ್ಲಿ ಅಲ್ಲಿಯೇ ಇದ್ದ ಕಾವಲುಗಾರರು ಅವನನ್ನು ಒಳಗೆ ಬಿಡದೆ ತಡೆದಿದ್ದಾರೆ. ಆಗ ಕೂಡಲೇ ಒಳಗೆ ನುಸುಳಿ ಆತ ತನ್ನನ್ನೇ ತಾನು ಸ್ಫೋಟಿಸಿಕೊಂಡಿದ್ದಾನೆ ಎಂದು ಆರೋಪಿಸಲಾಗಿದೆ. ಸ್ಪೋಟದ ತೀವ್ರತೆಗೆ ಅಕ್ಕಪಕ್ಕ ಇದ್ದ ಕಟ್ಟಡಗಳಿಗೆ ಕೂಡ ಭಾರಿ ಹಾನಿ ಆಗಿದ್ದು, ಘೋರ ಘಟನೆಯಿಂದ ಪಾಕ್‌ನ ಸಾಮಾನ್ಯ ಜನರು ಬೆಚ್ಚಿ ಬಿದ್ದಿದ್ದಾರೆ.
ತುರ್ತು ಪರಿಸ್ಥಿತಿ ಘೋಷಿದ ಸರ್ಕಾರ
ಉಗ್ರರು ನಡೆಸಿರುವ ಭೀಕರ ಬಾಂಬ್ ದಾಳಿ ಹಿನ್ನೆಲೆ ಇದೀಗ ಪಾಕಿಸ್ತಾನ ರಾಜಧಾನಿಯಲ್ಲಿ ಸೂಕ್ಷ್ಮವಾದ ಪರಿಸ್ಥಿತಿ ನಿರ್ಮಾಣ ಆಗಿದೆ. ಇದೇ ಕಾರಣಕ್ಕೆ ಸರ್ಕಾರ ತುರ್ತು ಪರಿಸ್ಥಿತಿ ಘೋಷಿಸಿ ಅಲರ್ಟ್ ಆಗಿದ್ದು, ಯಾವುದೇ ರೀತಿ ಅಹಿತಕರ ಘಟನೆ ಮತ್ತೆ ನಡೆಯದಂತೆ ಕ್ರಮ ಕೈಗೊಂಡಿದೆ ಎಂದು ಪಾಕ್ ಮೂಲದ ಮಾಧ್ಯಮಗಳು ವರದಿ ಮಾಡಿವೆ. ಆದರೆ ಸ್ವತಃ ಉಗ್ರರನ್ನು ಸಾಕಿದ್ದ ಪಾಕಿಸ್ತಾನಕ್ಕೆ ಈಗ ಅದೇ ಉಗ್ರ ಹುಳುಗಳಿಂದ ತೊಂದರೆ ಆಗಿದೆ ಎಂದು ಸೋಷಿಯಲ್ ಮೀಡಿಯಾದಲ್ಲಿ ಜನ ಚರ್ಚೆ ಮಾಡ್ತಿದ್ದಾರೆ. ಇದೀಗ ಗಾಯಗೊಂಡ ಜನರಲ್ಲಿ ಸಾಕಷ್ಟು ಗಾಯಾಳುಗಳ ಪರಿಸ್ಥಿತಿ ಗಂಭೀರವಾಗಿದ್ದು, ಸಾವಿನ ಸಂಖ್ಯೆ ಏರಿಕೆ ಆಗುವ ಭೀತಿ ಆವರಿಸಿದೆ.












Click it and Unblock the Notifications