ಕಾಶ್ಮೀರ ವಿಚಾರದಲ್ಲಿ ಮತ್ತೆ ಕ್ಯಾತೆ ತೆಗೆದ ಪಾಕಿಸ್ತಾನಕ್ಕೆ ಬೆವರು ಇಳಿಸುತ್ತಿರುವ ಭಾರತೀಯರು

ಪಾಕಿಸ್ತಾನಕ್ಕೆ ತನ್ನನ್ನು ತಾನು ಸಾಕಿಕೊಳ್ಳುವ ಹಾಗೂ ರಕ್ಷಿಸಿಕೊಳ್ಳುವ ಯೋಗ್ಯತೆ ಇಲ್ಲದೇ ಇದ್ದರೂ ಅಕ್ಕಪಕ್ಕದ ದೇಶಗಳ ಮೇಲೆ ಕಣ್ಣು ಹಾಕುವ ಕೆಟ್ಟ ಅಭ್ಯಾಸ ಇದೆ. ಉಗ್ರರು ಪಾಕಿಸ್ತಾನದ ಒಳಗಡೆಗೆ ನುಗ್ಗಿ ಸಾವಿರಾರು ಜನರನ್ನು ಬಲಿ ಪಡೆಯುತ್ತಿದ್ದರೂ ಅದರ ಬಗ್ಗೆ ಕೇರ್ ಮಾಡದ ಅಲ್ಲಿನ ರಾಜಕೀಯ ನಾಯಕರು ಹಾಗೂ ಸರ್ಕಾರ, ಭಾರತದ ಕಿರೀಟ ಕಾಶ್ಮೀರದ ಮೇಲೆ ಕಣ್ಣು ಹಾಕಿ ಪದೇ ಪದೇ ಪೆಟ್ಟು ತಿಂದು ಹೋಗುತ್ತಿದೆ. ಇಷ್ಟೆಲ್ಲದರ ನಡುವೆ ಮತ್ತೊಮ್ಮೆ ಭಾರತದ ಪ್ರಮುಖ ಭಾಗ ಕಾಶ್ಮೀರದ ಕುರಿತು ಊಸರವಳ್ಳಿ ಪಾಕಿಸ್ತಾನ ಪ್ರಸ್ತಾಪ ಮಾಡಿದ್ದು, ಭಾರತೀಯರು ಪಾಕಿಸ್ತಾನಕ್ಕೆ ಬೆವರು ಇಳಿಸುತ್ತಿದ್ದಾರೆ.

ಕಾಶ್ಮೀರ ಒಗ್ಗಟ್ಟು ದಿನ ಎಂದು ಉಗ್ರ ಪೋಷಕ ಪಾಕಿಸ್ತಾನದ ರಾಜಕಾರಣಿಗಳು ಮೊದಲಿನಿಂದ ಕೂಡ ಆಚರಣೆ ಮಾಡಿಕೊಂಡು ಬರುತ್ತಿದ್ದಾರೆ. ಅದೇ ರೀತಿ ಈ ಬಾರಿ ಕೂಡ ಈ ದಿನಾಚರಣೆ ನಡೆಯುವಾಗ ಪಿಒಕೆ ಅಸೆಂಬ್ಲಿ ಉದ್ದೇಶಿಸಿ ಮಾತನಾಡಿದ ಪಾಕಿಸ್ತಾನ ಪ್ರಧಾನಿ ಶೆಹಬಾಜ್‌ ಷರೀಫ್‌, ಸಂಪೂರ್ಣ ಕಾಶ್ಮೀರ ಪಾಕಿಸ್ತಾನದ ಭಾಗವಾಗುವುದು ನಿಶ್ಚಿತ ಎಂದು ಬಾಯಿಗೆ ಬಂದಂತೆ ತಲೆಬುಡ ಇಲ್ಲದ ಹೇಳಿಕೆ ನೀಡಿದ್ದು ಕಿಚ್ಚು ಹೊತ್ತಿಸಿದೆ. ಅದರಲ್ಲೂ ತನ್ನ ಕೈಯಲ್ಲಿ ಈಗಾಗಲೇ ಇರುವ ಜಾಗಗಳನ್ನೇ ಪಾಕಿಸ್ತಾನ ಇದೀಗ ಸರಿಯಾಗಿ ನೋಡಿಕೊಳ್ಳಲು ಆಗುತ್ತಿಲ್ಲ, ಹೀಗಿದ್ದರೂ ಬೇರೆ ಬೇರೆ ದೇಶಗಳ ಭೂಮಿ ಮೇಲೆ ಕಣ್ಣು ಹಾಕಿ ಸರಿಯಾಗಿ ಏಟು ತಿನ್ನುವುದು ಬಿಟ್ಟಿಲ್ಲ ಎಂದು ಭಾರತೀಯರು ಈಗ ಪಾಕಿಸ್ತಾನಕ್ಕೆ ಖಡಕ್ ಎಚ್ಚರಿಕೆ ಕೊಡುತ್ತಿದ್ದಾರೆ.

Islamabad Incident

ಚಪ್ಪಾಳೆ ತಟ್ಟಿ ಸ್ವಾಗತಿಸಿದ ಪಾಕ್ ಸಂಸದರು

ಆರ್ಥಿಕವಾಗಿ ದೇಶವನ್ನು ಸರಿಯಾಗಿ ಮುನ್ನಡೆಸಿಕೊಂಡು ಹೋಗಲು ಆಗದ ಪಾಕಿಸ್ತಾನದ ರಾಜಕೀಯ ನಾಯಕರಿಗೆ ಪದೇ ಪದೇ ಭಾರತದ ಬಹುಮುಖ್ಯ ಪ್ರದೇಶ ಕಾಶ್ಮೀರದ ವಿಚಾರವೇ ಆಧಾರವಾಗಿದೆ. ಈ ವಿಚಾರ ಪ್ರಸ್ತಾಪ ಮಾಡುತ್ತಾ, ಪಾಕಿಸ್ತಾನದ ಜನರ ಕಣ್ಣಿಗೆ ಮಣ್ಣೆರಚುವ ಪ್ರಯತ್ನ ಸಾಗಿದೆ ಎನ್ನುವ ಆರೋಪಗಳ ನಡುವೆಯೇ ಮತ್ತೊಮ್ಮೆ ಇದೇ ರೀತಿ ನಡೆದುಕೊಂಡಿದೆ ಪಾಕಿಸ್ತಾನ. ಪಾಕಿಸ್ತಾನ ಪ್ರಧಾನಿ ಶೆಹಬಾಜ್‌ ಷರೀಫ್‌, ಸಂಪೂರ್ಣ ಕಾಶ್ಮೀರ ಪಾಕಿಸ್ತಾನದ ಭಾಗವಾಗುವುದು ನಿಶ್ಚಿತ ಎಂದು ಹೇಳುವ ವೇಳೆ ಅಲ್ಲೇ ಇದ್ದ ಪಾಕಿಸ್ತಾನ ಆಕ್ರಮಿತ ಕಾಶ್ಮೀರದ ಅಸೆಂಬ್ಲಿ ಸದಸ್ಯರು ಚಪ್ಪಾಳೆ ತಟ್ಟಿರುವುದು ಕೂಡ ಭಾರಿ ಚರ್ಚೆಗೆ ಕಾರಣವಾಗಿದೆ.

ಪಾಕ್ ಮೂಲೆ ಮೂಲೆಯಲ್ಲೂ ಹಿಂಸಾಚಾರ

ಕಾಶ್ಮೀರ ವಿಚಾರ ಪ್ರಸ್ತಾಪ ಮಾಡುವ ಪಾಕಿಸ್ತಾನಕ್ಕೆ ತನ್ನ ದೇಶವನ್ನು ನೆಮ್ಮದಿಯಾಗಿ ಇಟ್ಟುಕೊಳ್ಳುವ ಯೋಗ್ಯತೆ ಇಲ್ಲ. ಪಾಕಿಸ್ತಾನ ಸರ್ಕಾರ ತಮ್ಮ ಪ್ರದೇಶದ ಬಗ್ಗೆ ತಾತ್ಸಾರ ಮಾಡುತ್ತಿದೆ, ಅಭಿವೃದ್ಧಿ ಕೂಡ ಆಗುತ್ತಿಲ್ಲ ಎಂಬ ಆರೋಪ ಮಾಡುತ್ತಿದ್ದಾರೆ ಬಲೂಚಿಸ್ತಾನ ಜನ. ತಮ್ಮ ಮೇಲೆ ಬೇಕು ಅಂತಲೇ ಪಾಕ್ ಸರ್ಕಾರ ಶೋಷಣೆ ಮಾಡುತ್ತಿದೆ ಎಂಬ ಆರೋಪ ಕೂಡ ಇದೆ. ಹೀಗಿದ್ದಾಗಲೇ ದಿಢೀರ್ ಬಲೂಚಿಸ್ತಾನ ಬಂಡುಕೋರರು ಪಾಕ್ ಸೇನೆ ವಿರುದ್ಧ & ಸರ್ಕಾರ ವಿರುದ್ಧ ದೊಡ್ಡ ಪ್ರಮಾಣದಲ್ಲಿ ತಿಕ್ಕಾಟಕ್ಕೆ ಇಳಿದ್ದರು ಕೂಡ. ಹೀಗಾಗಿ ಕಳೆದ ಕೆಲವು ದಿನಗಳಿಂದ ಬಲೂಚಿಸ್ತಾನ ಭಾಗದಲ್ಲಿ ರಕ್ತದ ಕೋಡಿ ಹರಿದಿದೆ. ಈ ನಡುವೆ ಇಸ್ಲಾಮಾಬಾದ್ ನಗರದಲ್ಲಿ ಕೂಡ ಉಗ್ರರಿಂದ ಬಾಂಬ್ ದಾಳಿ ನಡೆದು ಹತ್ತಾರು ಜನ ಪ್ರಾಣ ಬಿಟ್ಟಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+