200 ಉಗ್ರರಿಂದ ಢಾಕಾದ ಹಿಂದೂ ದೇವಾಲಯದ ಮೇಲೆ ದಾಳಿ

ಢಾಕಾ ಮಾರ್ಚ್ 18: ಬಾಂಗ್ಲಾದೇಶದ ಢಾಕಾದಲ್ಲಿರುವ ಇಸ್ಕಾನ್ ರಾಧಾಕಾಂತ ದೇವಾಲಯವನ್ನು ಉಗ್ರಗಾಮಿಗಳು ಗುರುವಾರ ಧ್ವಂಸಗೊಳಿಸಿದ್ದಾರೆ ಎಂದು ಸುದ್ದಿ ಸಂಸ್ಥೆ ಎಎನ್‌ಐ ವರದಿ ಮಾಡಿದೆ. ಇಲ್ಲಿ ಅಲ್ಪಸಂಖ್ಯಾತ ಹಿಂದೂ ಸಮುದಾಯದ ಕಲ್ಯಾಣಕ್ಕಾಗಿ ಕಾರ್ಯನಿರ್ವಹಿಸುತ್ತಿರುವ ಬಾಂಗ್ಲಾದೇಶಿ ಹಿಂದೂಗಳ ಧ್ವನಿ ಸಂಘಟನೆಯು ದಾಳಿಯ ದೃಶ್ಯಗಳನ್ನು ಹಂಚಿಕೊಂಡಿದೆ ಮತ್ತು ಸಹಾಯಕ್ಕಾಗಿ ಮನವಿ ಮಾಡಿದೆ.

"ಇಸ್ಕಾನ್ ದೇವಾಲಯದ ಮೇಲೆ ಉಗ್ರಗಾಮಿಗಳು ಮತ್ತೆ ದಾಳಿ ಮಾಡುತ್ತಿದ್ದಾರೆ. ದೇವಾಲಯವನ್ನು ರಕ್ಷಿಸುವಲ್ಲಿ ಎಲ್ಲಾ ಹಿಂದೂಗಳು ತಮ್ಮ ಪಾತ್ರವನ್ನು ವಹಿಸಬೇಕೆಂದು ನಾವು ವಿನಂತಿಸುತ್ತಿದ್ದೇವೆ" ಎಂದು ಬಾಂಗ್ಲಾದೇಶದ ಹಿಂದೂ ಸಮೂದಾಯಗಳು ಟ್ವೀಟ್ ನಲ್ಲಿ ತಿಳಿಸಿದೆ. ಆಪಾದಿತ ಕೃತ್ಯದ ಚಿತ್ರಗಳನ್ನು ಸಹ ಹ್ಯಾಂಡಲ್ ಹಂಚಿಕೊಂಡಿದೆ. ಢಾಕಾದ ಇಸ್ಕಾನ್ ದೇವಾಲಯದ ಮೇಲೆ ಉಗ್ರಗಾಮಿ ಗುಂಪುಗಳು ದಾಳಿ ನಡೆಸುತ್ತಿದ್ದಾಗ ಪೊಲೀಸರು ಯಾವುದೇ ಕ್ರಮ ಕೈಗೊಂಡಿರಲಿಲ್ಲ ಎಂದು ಸಂಘಟನೆ ಹೇಳಿಕೊಂಡಿದೆ.

ಹಿಂದೂ ಅಮೇರಿಕನ್ ಫೌಂಡೇಶನ್ (HAF) ನ ಅಧಿಕೃತ ವೆಬ್‌ಸೈಟ್‌ನಲ್ಲಿ ಬಿಡುಗಡೆ ಮಾಡಿದ ಪ್ರಕಟಣೆಯ ಪ್ರಕಾರ, ಒಬ್ಬ ಹಾಜಿ ಶಫಿವುಲ್ಲಾ ನೇತೃತ್ವದಲ್ಲಿ 200 ದುಷ್ಕರ್ಮಿಗಳು ಮಾರ್ಚ್ 17 ರಂದು ರಾತ್ರಿ 8 ಗಂಟೆಗೆ ಢಾಕಾದ ವಾರಿ ಥಾನಾದ 22 ಲಾಲ್ಮೋಹನ್ ಸಹಾ ಸ್ಟ್ರೀಟ್‌ನಲ್ಲಿರುವ ಇಸ್ಕಾನ್ ದೇವಾಲಯದ ಮೇಲೆ ದಾಳಿ ಮಾಡಿದರು. "ಅವರು ದೇವಸ್ಥಾನ, ಮೂರ್ತಿ ಧ್ವಂಸಗೊಳಿಸುವುದು ಮಾತ್ರವಲ್ಲದೆ ಹಣ ಮತ್ತು ಇತರ ಬೆಲೆಬಾಳುವ ವಸ್ತುಗಳನ್ನೂ ಲೂಟಿ ಮಾಡಿದ್ದಾರೆ. ಈ ದಾಳಿಯ ಸಂದರ್ಭದಲ್ಲಿ ಕನಿಷ್ಠ 3 ಹಿಂದೂ ಭಕ್ತರು ಗಾಯಗೊಂಡಿದ್ದಾರೆ" ಎಂದು HAF ತನ್ನ ವೆಬ್‌ಸೈಟ್‌ನಲ್ಲಿ ಹೇಳಿಕೊಂಡಿದೆ.

"ಬಾಂಗ್ಲಾದೇಶದಲ್ಲಿ ನಡೆದ ಬಂಗಾಳಿ ಹಿಂದೂ ನರಮೇಧದ ಸಮಯದಲ್ಲಿ ಕೊಲ್ಲಲ್ಪಟ್ಟ, ಸ್ಥಳಾಂತರಗೊಂಡ ಮತ್ತು ಅತ್ಯಾಚಾರಕ್ಕೊಳಗಾದವರ 51 ನೇ ವಾರ್ಷಿಕೋತ್ಸವವನ್ನು ಪ್ರಪಂಚದಾದ್ಯಂತದ ಹಿಂದೂಗಳು ಸ್ಮರಿಸುವ ವಾರದ ಮೊದಲು, ಉಗ್ರಗಾಮಿಗಳು ಇಂದಿಗೂ ನರಮೇಧದ ಪರಿಣಾಮಗಳನ್ನು ಹೊಂದಿದೆ ಎಂದು ನಮಗೆ ನೆನಪಿಸುತ್ತಾರೆ" ಎಂದು HAF ಮಾನವ ಹಕ್ಕುಗಳ ನಿರ್ದೇಶಕ ದೀಪಾಲಿ ಕುಲಕರ್ಣಿ ಹೇಳಿದ್ದಾರೆ.

ISKCON Radhakanta Temple wreck in Dhaka, Bangladesh by 150 militants

ಬಾಂಗ್ಲಾದೇಶದಲ್ಲಿ ಹಿಂದೂ ದೇವಾಲಯಗಳ ಮೇಲೆ ದಾಳಿಯಾಗುತ್ತಿರುವುದು ಇದೇ ಮೊದಲಲ್ಲ. ಕಳೆದ ವರ್ಷ ಅಕ್ಟೋಬರ್ ನಲ್ಲಿ ಬಾಂಗ್ಲಾದೇಶದಲ್ಲಿ ದುರ್ಗಾ ಪೂಜೆ ವೇಳೆ ಹಿಂದೂ ದೇವಸ್ಥಾನದ ಮೇಲೆ ಅಪರಿಚಿತರು ದಾಳಿ ನಡೆಸಿ ಮೂವರನ್ನು ಹತ್ಯೆ ಮಾಡಲಾಗಿತ್ತು. ನವರಾತ್ರಿ ಹಿನ್ನೆಲೆಯಲ್ಲಿ ದುರ್ಗಾ ಪೂಜೆ ನಡೆಸುತ್ತಿದ್ದಾಗ ಗುಂಪೊಂದು ದೇವಸ್ಥಾನದ ಮೇಲೆ ದಾಳಿ ನಡೆಸಿತ್ತು. ಈ ಹಿನ್ನೆಲೆಯಲ್ಲಿ ಬಾಂಗ್ಲಾದೇಶದ 22 ಜಿಲ್ಲೆಗಳಲ್ಲಿ ಹೆಚ್ಚಿನ ಭದ್ರತೆ ಒದಗಿಸಲಾಗಿತ್ತು. ಈ ಘಟನೆಯಲ್ಲಿ ಸಾಕಷ್ಟು ಜನರು ಗಾಯಗೊಂಡಿದ್ದು, ಅವರನ್ನು ಆಸ್ಪತ್ರೆಗೆ ಸೇರಿಸಲಾಗಿತ್ತು.

ಈ ವೇಳೆ ಹಲವು ಭಾಗಗಳಲ್ಲಿ ಇದೇ ಮಾದರಿಯ ಪ್ರಕರಣಗಳು ವರದಿಯಾಗಿದ್ದವು. ಸುಮಾರು 22 ಜಿಲ್ಲೆಗಳ ದೇವಾಲಯಗಳ ಮೇಲೆ ಅಪರಿಚಿತರು ದಾಳಿ ನಡೆಸಿ, ದೇಗುಲಗಳನ್ನು ಧ್ವಂಸಗೊಳಿಸುತ್ತಿರುವ ಬಗ್ಗೆ ಸ್ಥಳೀಯ ಮಾಧ್ಯಮಗಳು ವರದಿ ಬಿತ್ತರಿಸಿವೆ. ಬಾಂಗ್ಲಾದೇಶದ ಸ್ಥಳೀಯ ಮಾಧ್ಯಮಗಳ ಪ್ರಕಾರ, ದುರ್ಗಾ ದೇವಿಯ ದೇವಸ್ಥಾನದಲ್ಲಿ ಹಿಂಸಾಚಾರ ನಡೆದ ಬಳಿಕ ಅಲ್ಲಿನ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತರಲು ಪೊಲೀಸರು ಹರಸಾಹಸ ಪಟ್ಟರು. ಇದೇ ವೇಳೆ ಬಾಂಗ್ಲಾದೇಶದ ಚಂದ್​ಪುರದ ಹಜಿಗಂಜ್, ಚತ್ತೋಗ್ರಾಂನ ಬಾಂಶ್​ಖಲಿ ಮತ್ತು ಕಾಕ್ಸ್​ ಬಜಾರ್​ನ ಪೆಕುವಾದಲ್ಲಿ ಕೂಡ ಹಿಂದೂ ದೇವಾಲಯಗಳಲ್ಲಿ ದಾಂಧಲೆ ಕೂಡ ನಡೆದಿವೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+