Russia & Ukraine: ರಷ್ಯಾ ಕೈಯಲ್ಲಿ ಅಸ್ತ್ರಗಳು ಖಾಲಿ? ಸೈನಿಕರು ಇಲ್ಲದೆ ಪುಟಿನ್ ಪಡೆ ಒದ್ದಾಟ?

ರಷ್ಯಾ & ಉಕ್ರೇನ್ ಯುದ್ಧ ಇನ್ನೇನು ಮುಗಿದು ಹೋಗಲಿದೆ ಅಂತಾ ಇಡೀ ಜಗತ್ತು ಕಾಯುತ್ತಾ ಕುಳಿತಿದೆ. ಆದರೆ ಯುದ್ಧಕ್ಕೆ ಬ್ರೇಕ್ ಹಾಕಲು ಎರಡೂ ಕಡೆ ಒಮ್ಮತದ ನಿರ್ಧಾರ ಸಿಗುತ್ತಿಲ್ಲ. ಹೀಗೆ ಶುರುವಾಗಿರುವ ತಿಕ್ಕಾಟ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ. ಈಗಾಗಲೇ ಉಕ್ರೇನ್ ದೇಶದ ಭಾಗಶಃ ಪ್ರದೇಶಗಳನ್ನು ರಷ್ಯಾ ತನ್ನ ವಶಕ್ಕೆ ಪಡೆದಿದೆ. ಇಷ್ಟಾದರೂ, ಉಕ್ರೇನ್ & ರಷ್ಯಾ ನಡುವೆ ಯುದ್ಧ ನಿಲ್ಲಿಸುವ ಮಾತುಕತೆ ನಡೆದಿಲ್ಲ. ಇದೇ ಸಮದಯಲ್ಲಿ ಮತ್ತೊಂದು ಸ್ಫೋಟಕ ಸಂಗತಿ ಬಯಲಾಗಿದೆ.

ರಷ್ಯಾ ಮಿಲಿಟರಿಯ ದಾಳಿಗೆ ಉಕ್ರೇನ್ ಸೇನೆ ಪುಡಿ ಪುಡಿ ಆಗಿ ಹೋಗುತ್ತಿದೆ, ಉಕ್ರೇನ್ ಸೇನೆ ಓಡಿ ಹೋಗುತ್ತಿದೆ. ಈಗಾಗಲೇ ಉಕ್ರೇನ್‌ನ ಹಲವು ಪ್ರಮುಖ ಪ್ರದೇಶಗಳ ಮೇಲೆಯೇ ಹಿಡಿತ ಸಾಧಿಸಿದೆ ರಷ್ಯಾ. ಇಂತಿಪ್ಪ ರಷ್ಯಾ ಮಿಲಿಟರಿಯ ವಿಚಾರದಲ್ಲಿ ಸಾಕಷ್ಟು ಬಲಶಾಲಿ ಆಗಿದ್ದು, ಯಾವುದೇ ಅಡೆತಡೆ ಬಂದು ಎದುರಾದರೂ ಎದುರಿಸಿ ನಿಲ್ಲುವ ತಾಕತ್ ಹೊಂದಿದೆ. ಆದ್ರೆ ಈ ವಿಚಾರದಲ್ಲಿ ಉಕ್ರೇನ್‌ನ ಸೇನೆ ಡಮ್ಮಿ ಎನ್ನಲಾಗಿತ್ತು. ಆದರೆ ರಷ್ಯಾ ಪರಿಸ್ಥಿತಿ ಕೂಡ ಈಗ ಇದೇ ರೀತಿ ಆಗಿದೆ ಎಂಬ ಸುದ್ದಿ ಹಬ್ಬಿದೆ!

Is Russia Depleting Its Weapons and Manpower in the Ukraine Conflict

ರಷ್ಯಾ ಕೈಯಲ್ಲಿ ಅಸ್ತ್ರಗಳು ಖಾಲಿ?

ಉಕ್ರೇನ್ ಸುಮ್ಮನೆ ಎಗರಾಡುತ್ತಿದೆ, ರಷ್ಯಾ ವಿರುದ್ಧ ಗೆಲ್ಲಲು ಆಗಲ್ಲ ಅಂತಾ ಗೊತ್ತಿದ್ದರೂ ಬರೀ ಕಿರಿಕ್ ಮುಂದುವರಿಸಿದೆ ಅಂತಾ ಆರೋಪ ಮಾಡಲಾಗುತ್ತಿದೆ. ಹೀಗಿದ್ದಾಗ ರಷ್ಯಾ ಕೂಡ ತನ್ನ ಬಳಿ ಇರುವ ಎಲ್ಲಾ ರೀತಿಯ ಅಸ್ತ್ರಗಳನ್ನು ಉಕ್ರೇನ್ ವಿರುದ್ಧ ಪ್ರಯೋಗ ಮಾಡಿದೆ. ಇದೇ ಸಮಯದಲ್ಲಿ ರಷ್ಯಾ ಬಳಿ ಶಸ್ತ್ರಾಸ್ತ್ರಗಳು ಖಾಲಿ ಆಗಿವೆಯಾ? ಎಂಬ ಅನುಮಾನ ಮೂಡಿದೆ.

ಯಾಕಂದ್ರೆ ಮೊದಲೇ ಸೈನಿಕರ ಕೊರತೆಯಿಂದ ನರಳುತ್ತಿದ್ದ ರಷ್ಯಾ ಬಳಿ ಇದೀಗ ಗನ್ ಮತ್ತು ಬುಲೆಟ್ ಸೇರಿ ಕ್ಷಿಪಣಿಗಳಿಗೂ ಭಾರಿ ದೊಡ್ಡ ಸಮಸ್ಯೆ ಎದುರಾಗಿದೆ. ಈ ಬಗ್ಗೆ ಅಂತಾರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ. ಅಲ್ಲದೆ ರಷ್ಯಾ ಮುಂದಿನ ಕೆಲವೇ ದಿನಗಳಲ್ಲಿ ತನ್ನ ಬಳಿ ಇರುವ ಅಸ್ತ್ರಗಳನ್ನು ಖಾಲಿ ಮಾಡಿಕೊಳ್ಳಲಿದೆ ಎಂದು ಕೂಡ ವರದಿಯಲ್ಲಿ ಹೇಳಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+