ಬಗ್ದಾದಿ ಸಾವು ಖಚಿತ ಪಡಿಸಿದ ಐಎಸ್, ಹೊಸ ಖಲೀಫ ಘೋಷಣೆ

ಇಸ್ಲಾಮಿಕ್ ಸ್ಟೇಟ್ ಉಗ್ರ ಸಂಘಟನೆಯು ಅಬು ಬಕರ್ ಅಲ್- ಬಗ್ದಾದಿ ಸಾವನ್ನಪ್ಪಿರುವುದನ್ನು ಖಚಿತ ಪಡಿಸಿದೆ. ಮತ್ತು ಅಬು ಇಬ್ರಾಹಿಂ ಅಲ್ ಹಶೀಮಿ ಅಲ್ ಖುರೇಷಿಯನ್ನು ಹೊಸ ಖಲೀಫ ಎಂದು ಘೋಷಣೆ ಮಾಡಿದೆ. ಐಎಸ್ ಐಎಸ್ ನ ಸಾಮಾಜಿಕ ಮಾಧ್ಯಮ ಖಾತೆಯ ಮೂಲಕ ಈ ಬಗ್ಗೆ ಪ್ರಕಟಣೆಯನ್ನು ವಕ್ತಾರ ಅಬು ಹಮ್ಜಾ ಅಲ್ ಖುರೇಷಿ ಆಡಿಯೋ ಹೇಳಿಕೆಯಲ್ಲಿ ಪ್ರಕಟಿಸಿದ್ದಾನೆ.

ಈ ಹೇಳಿಕೆಯಲ್ಲಿ ಅಮೆರಿಕಕ್ಕೆ ಬೆದರಿಕೆ ಹಾಕಲಾಗಿದೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ರನ್ನು ಮುದಿ ವ್ಯಕ್ತಿ ಎಂದು ಜರಿಯಲಾಗಿದೆ. ಬಗ್ದಾದಿ ನಾಯಕತ್ವದಲ್ಲಿ ನಡೆದ ದಾಳಿಗಿಂತ ಭೀಕರವಾದದ್ದನ್ನು ನಡೆಸುವುದಾಗಿ ಕೂಡ ಬೆದರಿಕೆ ಒಡ್ಡಲಾಗಿದೆ. ಇನ್ನು ಬಗ್ದಾದಿ ಹತ್ಯೆ ಮೂಲಕ ಇಸ್ಲಾಮಿಕ್ ಸ್ಟೇಟ್ ಮುಖ್ಯಸ್ಥನನ್ನು ನಾಶ ಮಾಡಿರಬಹುದು, ಆದರೆ ಪೂರ್ತಿ ಗುಂಪನ್ನಲ್ಲ ಎನ್ನಲಾಗಿದೆ.

Abu Ibrahim al Hashimi al Qurashi

ಈಚೆಗೆ ಸಿರಿಯಾದಲ್ಲಿ ಅಮೆರಿಕ ಸೇನಾ ಪಡೆ ನಡೆಸಿದ ದಾಳಿ ವೇಳೆ ಇಸ್ಲಾಮಿಕ್ ಸ್ಟೇಟ್ ನಾಯಕ ಅಬು ಬಕರ್ ಅಲ್- ಬಗ್ದಾದಿ ತನ್ನನ್ನು ತಾನು ಸ್ಫೋಟಿಸಿಕೊಂಡು ಸಾವನ್ನಪ್ಪಿದ್ದ. ಆತನ ಜತೆಗಿದ್ದ ಮೂವರು ಮಕ್ಕಳು ಸಹ ಮೃತಪಟ್ಟಿದ್ದರು. ಡಿಎನ್ ಎ ಪರೀಕ್ಷೆ ಮೂಲಕ ಮೃತ ವ್ಯಕ್ತಿ ಬಗ್ದಾದಿಯೇ ಎಂಬುದನ್ನು ಅಮೆರಿಕ ತಿಳಿದುಕೊಂಡಿತ್ತು. ಇದೀಗ ಐಎಸ್ ನಿಂದಲೇ ಅಧಿಕೃತವಾಗಿ ಖಾತ್ರಿಯಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+