Iran Protest: ಇರಾನ್ ನೆಲದಲ್ಲಿ ನಿಲ್ಲದ ಹೋರಾಟ, ಪರಿಸ್ಥಿತಿ ನಿಯಂತ್ರಿಸಲು ಹರಸಾಹಸ
ಇರಾನ್ ನೆಲದಲ್ಲಿ ಶುರುವಾಗಿರುವ ಹೋರಾಟದ ಕಿಚ್ಚು ಇನ್ನಷ್ಟು ಹೆಚ್ಚಾಗಿದ್ದು, ಇರಾನ್ ಸೇನೆ ಸಮೇತ ಸಾವಿರಾರು ಭದ್ರತಾ ಸಿಬ್ಬಂದಿ ನಿಯೋಜನೆ ಮಾಡಿದ್ದರೂ ಪರಿಸ್ಥಿತಿ ಹಿಡಿತಕ್ಕೆ ಸಿಗುತ್ತಿಲ್ಲ. ಈ ನಡುವೆ ವಿದ್ಯಾರ್ಥಿಗಳು ಪ್ರತಿಭಟನೆಗೆ ಎಂಟ್ರಿ ಕೊಟ್ಟ ನಂತರ ವಾತಾವರಣ ಇನ್ನಷ್ಟು ಕೈಮೀರಿ ಹೋಗಿದೆ. ನೋಡ ನೋಡುತ್ತಲೇ ಪ್ರತಿಭಟನಾಕಾರರ ಹಿಂಸೆಗೆ ಸರ್ಕಾರಿ ಕಟ್ಟಡಗಳು & ವಾಹನ ಸೇರಿದಂತೆ ಕೈಗೆ ಸಿಕ್ಕ ಸಿಕ್ಕ ವಸ್ತುಗಳು ನಾಶವಾಗಿ ಹೋಗುತ್ತಿವೆ. ಇದೇ ಸಮಯದಲ್ಲಿ ಇರಾನ್‌ನ ಸರ್ವೋಚ್ಚ ನಾಯಕ ಅಲಿ ಖಮೇನಿ ಇನ್ನೂ ಪತ್ತೆ ಆಗಿಲ್ಲ.
ಅಮೆರಿಕ ಸೇರಿದಂತೆ ಜಾಗತಿಕ ಮಟ್ಟದಲ್ಲಿ ಶಕ್ತಿಶಾಲಿ ದೇಶಗಳಿಂದ ನಿರ್ಬಂಧ ಹೇರಿಸಿಕೊಂಡಿರುವ ಇರಾನ್ ತನ್ನ ಆರ್ಥಿಕತೆ ಸರಿ ಮಾಡಿಕೊಳ್ಳಲು ಪರದಾಡುತ್ತಿದೆ. ಇರಾನ್ ಸ್ಥಿತಿ ನೋಡಿದರೆ ಈಗ ಅಲ್ಲಿನ ಜನರು ಜೀವನ ನಡೆಸುವುದೇ ಕಷ್ಟವಾಗಿ ಹೋಗಿದೆ. ಭಾರಿ ಪ್ರಮಾಣದಲ್ಲಿ ಏರಿಕೆಯಾದ ವಸ್ತುಗಳು ಜನರ ಕೈ ಸುಡುತ್ತಿವೆ. ಹೀಗಿದ್ದಾಗ ಇರಾನ್‌ನ ಸೆಂಟ್ರಲ್ ಬ್ಯಾಂಕ್ ಮುಖ್ಯಸ್ಥರನ್ನ ಕೂಡ ಬದಲಾವಣೆ ಮಾಡಲಾಗಿದೆ. ಇಷ್ಟಾದರೂ ಪ್ರತಿಭಟನೆಗಳು ನಿಲ್ಲುತ್ತಿಲ್ಲ.

1) ಸರ್ಕಾರಿ ಕಟ್ಟಡದ ಮೇಲೆ ದಾಳಿ
ಆರ್ಥಿಕ ಕಾರಣಕ್ಕೆ ಭುಗಿಲೆದ್ದಿರುವ ಪ್ರತಿಭಟನೆಗಳ ಅಲೆಯ ನಡುವೆ ದಕ್ಷಿಣ ನಗರವಾದ ಫಾಸಾದಲ್ಲಿ ಸರ್ಕಾರಿ ಕಟ್ಟಡದ ಮೇಲೆ ದಾಳಿ ಮಾಡಲಾಗಿದೆ. ಈ ಬಗ್ಗೆ ಇರಾನ್ ಅಧಿಕಾರಿಗಳು ಮಾಹಿತಿಯನ್ನ ನೀಡಿದ್ದು, ಸೋಷಿಯಲ್ ಮೀಡಿಯಾದಲ್ಲಿ ಈ ಸಂಬಂಧ ವಿಡಿಯೋಗಳು ವೈರಲ್ ಆಗುತ್ತಿವೆ.
2) ಇರಾನ್ ಶತ್ರುಗಳು ಫುಲ್ ಅಲರ್ಟ್
ಇಸ್ರೇಲ್ ಸೇರಿದಂತೆ ಹಲವು ದೇಶಗಳನ್ನು ಎದುರು ಹಾಕಿಕೊಂಡು ಬದುಕುತ್ತಿರುವ ಇರಾನ್ ಈಗ ತನ್ನ ನೆಲದಲ್ಲೇ ಭುಗಿಲೆದ್ದಿರುವ ಪ್ರತಿಭಟನೆ ಕಾರಣಕ್ಕೆ ಪರದಾಡುತ್ತಿದೆ. ಹೀಗಾಗಿ ಇರಾನ್ ಒಳಗೆ ಏನಾಗುತ್ತಿದೆ ಎಂಬ ಕುತೂಹಲ ಇರಾನ್ ಶತ್ರುಗಳಿಗೆ ಇದೆ. ಹೀಗಾಗಿ ಇರಾನ್‌ನ ಶತ್ರುಗಳು ಫುಲ್ ಅಲರ್ಟ್ ಆಗಿದ್ದು, ಗಡಿಯಲ್ಲಿ ಇರಾನ್ ಕಟ್ಟೆಚ್ಚರ ವಹಿಸಿದೆ.
3) ಖಮೇನಿ ಅಧಿಕಾರ ಹೋಗುತ್ತಾ?
ಇರಾನ್‌ನ ಸರ್ವೋಚ್ಚ ನಾಯಕ ಅಲಿ ಖಮೇನಿ ವಿರುದ್ಧ ಆಕ್ರೋಶ ಮೊಳಗಿರುವ ಸಮಯದಲ್ಲೇ, ಅತ್ತ ಖಮೇನಿ ಅಧಿಕಾರ ಹೋಗುತ್ತಾ? ಎಂಬ ಪ್ರಶ್ನೆ ಮೂಡಿದೆ. ಏಕೆಂದರೆ ಇರಾನ್‌ನ ಈಗಿನ ಸ್ಥಿತಿಗೆ ಖಮೇನಿ ಕಾರಣ ಎಂಬ ಆರೋಪ ಮಾಡುತ್ತಿದ್ದಾರೆ ಇರಾನ್ ಪ್ರಜೆಗಳು & ಪ್ರತಿಭಟನಾಕಾರರು. ಈ ನಡುವೆ ಖಮೇನಿ ಇರುವ ಸ್ಥಳದ ಮಾಹಿತಿಯನ್ನು ಇನ್ನೂ ಗುಟ್ಟಾಗಿ ಇಡಲಾಗಿದೆ.
4) ಪರಮಾಣು ಯೋಜನೆ ಸ್ಥಗಿತ?
ಇರಾನ್ ಆಂತರಿಕ ಬಿಕ್ಕಟ್ಟಿನ ನಡುವೆ ಪರಮಾಣು ಯೋಜನೆಗಳನ್ನು ತಾತ್ಕಾಲಿಕವಾಗಿ ನಿಲ್ಲಿಸಿದೆ ಎಂಬ ಮಾಹಿತಿ ಹರಿದಾಡುತ್ತಿದೆ. ಅದರಲ್ಲೂ ಇಸ್ರೇಲ್ ವಿರುದ್ಧ ಸೇಡಿಗೆ ಕಾಯುತ್ತಿರುವ ಇರಾನ್ ಈಗ ತನ್ನ ಪರಮಾಣು ಸ್ಥಾವರಗಳಲ್ಲಿ ಚಟುವಟಿಕೆ ತಾತ್ಕಾಲಿಕವಾಗಿ ನಿಲ್ಲಿಸಿದೆ ಎನ್ನಲಾಗಿದೆ. ಈ ನಡುವೆ ಅಮೆರಿಕ ಇರಾನ್ ಪ್ರತಿಭಟನೆ ಬಗ್ಗೆ ಇಂಚಿಂಚು ಮಾಹಿತಿ ಕಲೆಹಾಕುತ್ತಿದೆ. ಮತ್ತೊಂದು ಕಡೆ ಮಧ್ಯಪ್ರಾಚ್ಯ ಭಾಗದಲ್ಲಿ ಅಸ್ಥಿರತೆ ಭಯ ಕಾಡುತ್ತಿದ್ದು, ಇರಾನ್ ಹಿಂಸೆ ಹೆಚ್ಚಾದರೆ ಎಲ್ಲಾ ಕೈಮೀರುವುದು ಗ್ಯಾರಂಟಿ ಅಂತಿದ್ದಾರೆ ತಜ್ಞರು.












Click it and Unblock the Notifications