ಅಮೆರಿಕಾ-ಇರಾನ್ ನಡುವೆ ಉರಿಯುವ ಬೆಂಕಿಗೆ ಕಮಾಂಡರ್ ತುಪ್ಪ?
ತೆಹ್ರಾನ್, ಜನವರಿ.09: ಅಮೆರಿಕಾ ಇರಾನ್ ನಡುವೆ ಯುದ್ಧದ ಕಾರ್ಮೋಡ ದಿನೇ ದಿನೆ ಹೆಚ್ಚಾಗುತ್ತಲೇ ಇದೆ. ಇದರ ಮಧ್ಯೆ ಇರಾನ್ ಕಮಾಂಡರ್ ನೀಡಿರುವ ಒಂದೇ ಒಂದು ಹೇಳಿಕೆ ಉರಿಯುವ ಬೆಂಕಿಗೆ ತುಪ್ಪ ಸುರಿಯುವ ಕೆಲಸ ಮಾಡಿದೆ.
ವಿಶ್ವದ ದೊಡ್ಡಣ್ಣ ಅಮೆರಿಕಾಗೆ ಇರಾನ್ ಮತ್ತೊಮ್ಮೆ ಸೆಡ್ಡು ಹೊಡೆಯುವ ದುಸ್ಸಾಹಸಕ್ಕೆ ಕೈ ಹಾಕಿದೆ. ಬುಧವಾರ ಇರಾಕ್ ನಲ್ಲಿರುವ ಅಮೆರಿಕಾದ ವಾಯುನೆಲೆ ಮೇಲೆ ದಾಳಿ ನಡೆಸಿದ್ದು ಹಳೆಯ ವಿಚಾರ. ಅದಕ್ಕೆ ಅಮೆರಿಕಾ ಪ್ರತಿದಾಳಿ ನಡೆಸಿದ್ದರೆ ಕಥೆ ಬೇರೆಯೇ ಆಗುತ್ತಿತ್ತು ಎನ್ನುವ ಧಾಟಿಯಲ್ಲಿ ಇರಾನ್ ನ ಜನರಲ್ ಕಮಾಂಡರ್ ಹಜಿಜದೆಹಾ ಮಾತನಾಡಿದ್ದಾರೆ.
ಜನವರಿ.08ರಂದು ಇರಾನ್ ನಡೆಸಿದ ದಾಳಿಯು ಕೇವಲ ಪ್ರತೀಕಾರದ ಸಂಕೇತವಾಗಿತ್ತಷ್ಟೇ. ಆ ದಾಳಿ ಮೂಲಕ ಅಮೆರಿಕದ ಸೈನಿಕರನ್ನು ಹತ್ಯೆಗಯ್ಯುವ ಉದ್ದೇಶವನ್ನು ಹೊಂದಿರಲಿಲ್ಲ. ಒಂದು ವೇಳೆ ಅಮೆರಿಕಾ ಪ್ರತಿದಾಳಿ ನಡೆಸಿದ್ದರೆ, ಇರಾನ್ ಕೂಡಾ ಎಲ್ಲದಕ್ಕೂ ಸಿದ್ಧವಾಗಿತ್ತು ಎಂದು ಹೇಳಿಕೆ ನೀಡಿರುವುದಾಗಿ ಪಾರ್ಸ್ ನ್ಯೂಸ್ ಏಜೆನ್ಸಿ ವರದಿ ಮಾಡಿದೆ.

"ಎಲ್ಲದಕ್ಕೂ ಇರಾನ್ ಸೇನಾ ಪಡೆಯು ಸಿದ್ಧವಾಗಿತ್ತು"
ಅಮೆರಿಕಾ ವಾಯುನೆಲೆಗಳ ಮೇಲೆ ದಾಳಿ ನಡೆಸುತ್ತಿದ್ದಂತೆ ಪರಿಸ್ಥಿತಿ ವಿಕೋಪಕ್ಕೆ ಹೋಗುವ ಸಾಧ್ಯತೆಗಳಿದ್ದವು. ಪರಸ್ಪರ ಮೂರರಿಂದ ಆರು ದಿನಗಳ ಕಾಲ ಎರಡು ರಾಷ್ಟ್ರಗಳ ನಡುವೆ ಪರಸ್ಪರ ದಾಳಿ ನಡೆಯುವ ನಿರೀಕ್ಷೆಯನ್ನು ಇಟ್ಟುಕೊಳ್ಳಲಾಗಿತ್ತು. ಅದಕ್ಕಾಗಿ ಇರಾನ್ ಕೂಡಾ ಎಲ್ಲ ಸಿದ್ಧತೆಗಳನ್ನು ಮಾಡಿಟ್ಟುಕೊಂಡಿತ್ತು ಎಂದು ಹಜಿಜದೆಹಾ ಹೇಳಿಕೆ ನೀಡಿದ್ದಾರೆ ಎಂದು ವರದಿ ಆಗಿದೆ.

"ಯುದ್ಧ ಪರಿಸ್ಥಿತಿ ನಿಭಾಯಿಸಲು ಸಾವಿರಾರು ಕ್ಷಿಪಣಿಗಳು ಸಿದ್ಧ"
ಒಂದು ವೇಳೆ ಅಮೆರಿಕಾ ಪ್ರತೀಕಾರವಾಗಿ ಇರಾನ್ ಮೇಲೆ ದಾಳಿ ನಡೆಸಿದ್ದರೆ, ನಾವು ಎಲ್ಲದಕ್ಕೂ ಅಣಿಯಾಗಿದ್ದವೆ. ತುರ್ತು ಸಂದರ್ಭದಲ್ಲಿ ಬಳಕೆ ಮಾಡುವುದಕ್ಕಾಗಿ ಸಾವಿರಾರು ಕ್ಷಿಪಣಿಗಳನ್ನು ಸಿದ್ಧಪಡಿಸಿ ಇಟ್ಟುಕೊಂಡಿದ್ದೆವು. ಅಮೆರಿಕಾ ವಿರುದ್ಧ ಪ್ರತಿದಾಳಿ ನಡೆಸಲು ಇರಾನ್ ಕೂಡಾ ಸಮರ್ಥವಾಗಿದೆ ಎಂದು ಹಜಿಜದೆಹಾ ಹೇಳಿರುವುದಾಗಿ ವರದಿಯಲ್ಲಿ ಉಲ್ಲೇಖಿಸಲಾಗಿದೆ.
Image Source: Plannet Labs /middlebury Institute

"ಪ್ರತಿಕಾರದ ವಿಚಾರಕ್ಕೆ ಬಂದೆರೆ ಪರಿಸ್ಥಿತಿ ಬೇರೆ ಆಗುತ್ತಿತ್ತು"
ಇದಿಷ್ಟೇ ಅಲ್ಲ, ಇರಾನ್ ನ ಸರ್ವೋಚ್ಛ ನಾಯಕ ಅಲಿ ಖಮೇನಿಯಾ ಕೂಡಾ ಅಮೆರಿಕಾ ವಿರುದ್ಧ ಹರಿಹಾಯ್ದಿದ್ದಾರೆ. ಖಾಸಿಂ ಸೋಲೆಮಾನಿ ಹತ್ಯೆಗೈದ ಅಮೆರಿಕಾದ ಮುಖದ ಮೇಲೆ ಹೊಡೆಯುವ ಉದ್ದೇಶದಿಂದ ಇರಾನ್ ದಾಳಿ ನಡೆಸಿದೆ ಅಷ್ಟೇ. ಪ್ರತೀಕಾರ ತೀರಿಸಿಕೊಳ್ಳಬೇಕು ಎಂಬ ಉದ್ದೇಶವನ್ನು ಹೊಂದಿದ್ದರೆ ಕಥೆ ಬೇರೆಯೇ ಆಗುತ್ತಿತ್ತು ಎಂದು ಖಮೇನಿಯಾ ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದಾರೆ ಎಂದು ವರದಿಯಾಗಿದೆ.

ಇರಾನ್ ಗೆ ಎಚ್ಚರಿಕೆ ಸಂದೇಶ ರವಾನಿಸಿದ್ದ ಅಮೆರಿಕಾ ಅಧ್ಯಕ್ಷ
ಇರಾನ್ ದಾಳಿ ಬೆನ್ನಲ್ಲೇ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಪರೋಕ್ಷವಾಗಿ ಎಚ್ಚರಿಕೆ ಸಂದೇಶ ರವಾನಿಸಿದ್ದರು. ತಾವು ಅಧ್ಯಕ್ಷರಾಗಿರುವ ತನಕ ಇರಾನ್ ಗೆ ಅಣ್ವಸ್ತ್ರ ಹೊಂದಲು ಬಿಡುವುದಿಲ್ಲ ಎಂದು ಖಡಕ್ ಆಗಿ ಹೇಳಿದ್ದರು. ಅಷ್ಟೇ ಅಲ್ಲದೇ, ಅಮೆರಿಕದ ಸೇನಾಪಡೆಯು ಮೊದಲಿಗಿಂತಲೂ ಈಗ ಬಲಿಷ್ಠವಾಗಿದೆ. ದಾಳಿಗೆ ಮುಂದಾಗುವ ಎದುರಾಳಿಯನ್ನು ಎದುರಿಸುವ ಪರಿ ನಮಗೆ ತಿಳಿದಿದೆ. ಇರಾನ್ ವಿರುದ್ಧ ಹೋರಾಟಕ್ಕೆ ಇದು ಸಕಾಲ ಎನ್ನುವ ಮೂಲಕ ಪರೋಕ್ಷವಾಗಿ ಎಚ್ಚರಿಕೆ ಸಂದೇಶವನ್ನು ಟ್ರಂಪ್ ರವಾನಿಸಿದರು.
-
ಎಲ್ಪಿಜಿ ನಂತರ ಅಡುಗೆ ಎಣ್ಣೆ ವಿಚಾರದಲ್ಲೂ ಶುರುವಾಯ್ತು ದೊಡ್ಡ ಟೆನ್ಷನ್... Cooking Oil -
ಕಚ್ಚಾತೈಲ ಬೆಲೆ 12,000 ರೂಪಾಯಿ ದಾಟುವ ಸಾಧ್ಯತೆ, ಶುರುವಾಯ್ತು ಹೊಸ ಆತಂಕ | Operation Roaring Lion -
ಇರಾನ್ ಸಂಘರ್ಷ: ಭಾರತದ ಪ್ರಯತ್ನಕ್ಕೆ ಫಲ, ಕೊಲ್ಲಿ ಮಾರ್ಗವಾಗಿ ಭಾರತಕ್ಕೆ ಬಂದ ಮೊದಲ ತೈಲ ಟ್ಯಾಂಕರ್ -
ಇರಾನ್ ನೂತನ ಸರ್ವಾಧಿಕಾರಿ ಬಗ್ಗೆ ಅಮೆರಿಕ ಅಧ್ಯಕ್ಷ ಟ್ರಂಪ್ ಮಹತ್ವದ ಹೇಳಿಕೆ | Donald Trump -
ಖಮೇನಿ ಪುತ್ರ ಮತ್ತು ಇರಾನ್ ದೇಶದ ನೂತನ ಸರ್ವಾಧಿಕಾರಿಗಾಗಿ ಇಸ್ರೇಲ್ ತೀವ್ರ ಶೋಧ | Operation Roaring Lion -
ಅರಬ್ ದೇಶಗಳ ಬ್ಯಾಕಿಂಗ್ ಸೇವೆ ಮೇಲೆ ಇರಾನ್ ಸೇನೆ ದಾಳಿ ಸಾಧ್ಯತೆ ಹಿನ್ನೆಲೆ ಕಟ್ಟೆಚ್ಚರ | Operation Roaring Lion -
ಬೆಂಗಳೂರಿನ ಪ್ರಮುಖ ವಿದ್ಯುತ್ ಸ್ಥಾವರ ಬಂದ್; ರಾಜ್ಯದಲ್ಲಿ ವಿದ್ಯುತ್ ಕಡಿತದ ಭೀತಿ! -
ಮಧ್ಯಪ್ರಾಚ್ಯದಲ್ಲಿ ಮತ್ತಷ್ಟು ಭುಗಿಲೆದ್ದ ಯುದ್ಧದ ಕಿಚ್ಚು: ಸೇಡು ತೀರಿಸಿಕೊಳ್ಳುವ ಪ್ರತಿಜ್ಞೆ ಮಾಡಿದ ಮೊಜ್ತಬಾ ಖಮೇನಿ! -
Gold: ಲಕ್ಕುಂಡಿಯಲ್ಲಿ ಸಿಕ್ಕ ಬಂಗಾರದ ನಿಧಿ ಮೌಲ್ಯ 8 ಕೋಟಿ ರೂ.; ನಿಧಿ ಕೊಟ್ಟ ಕುಟುಂಬದಿಂದ ಹೊಸ ಡಿಮ್ಯಾಂಡ್, ಉತ್ಖನನ ಅಂತ್ಯ -
Karnataka Weather Mar 12: ಬಿಸಿಲು ಹೆಚ್ಚಳದ ನಡುವೆ ಮಾರ್ಚ್ 15ರಿಂದ ಕರ್ನಾಟಕದಲ್ಲಿ ಮಳೆ, ಹೇಗಿದೆ ಇಂದಿನ ವೆದರ್ -
Gold Rate March 12: ಚಿನ್ನದ ಬೆಲೆ 10,900 ರೂ., ಬೆಳ್ಳಿ ಬೆಲೆ 10,000 ರೂ. ಭರ್ಜರಿ ಇಳಿಕೆ, ಬಂಗಾರ ಪ್ರಿಯರು ಫಿದಾ -
ನಮ್ಮದು ಲವ್ ಜಿಹಾದ್ ಅಲ್ಲ, ಮತಾಂತರವೂ ಇಲ್ಲ, ಹಿಂದೂ ಸಂಪ್ರದಾಯದಂತೆ ವಿವಾಹ: ಮೊನಾಲಿಸಾ-ಫರ್ಹಾನ್ ಖಾನ್ ಸ್ಪಷ್ಟನೆ











Click it and Unblock the Notifications