Get Updates
Get notified of breaking news, exclusive insights, and must-see stories!

Iran: ಶತ್ರು ರಾಷ್ಟ್ರಗಳ ದಾಳಿಗಿಂತಲೂ ಇರಾನ್‌ಗೆ ಕಾಡುತ್ತಿದೆ ಭೀಕರ ಜಲಕ್ಷಾಮ: ಆರು ವರ್ಷಗಳ ಬರಗಾಲಕ್ಕೆ ತತ್ತರಿಸಿದ ಜನ

ಪ್ರಸ್ತುತ ಜಾಗತಿಕ ರಾಜಕೀಯ ವಿದ್ಯಮಾನಗಳಲ್ಲಿ ಇರಾನ್ ಮೇಲೆ ಅಮೆರಿಕ ಅಥವಾ ಇಸ್ರೇಲ್ ನಡೆಸಬಹುದಾದ ದಾಳಿಗಳ ಬಗ್ಗೆ ದೊಡ್ಡ ಮಟ್ಟದ ಚರ್ಚೆಗಳು ನಡೆಯುತ್ತಿವೆ. ಆದರೆ, ವಾಸ್ತವದಲ್ಲಿ ಇರಾನ್ ದೇಶಕ್ಕೆ ಬಾಹ್ಯ ಶತ್ರುಗಳ ಕ್ಷಿಪಣಿಗಳಿಗಿಂತಲೂ ತನ್ನೊಳಗೇ ಸದ್ದಿಲ್ಲದೆ ಆವರಿಸುತ್ತಿರುವ 'ಜಲಕ್ಷಾಮ' ಅತಿ ದೊಡ್ಡ ಭೀತಿಯಾಗಿ ಪರಿಣಮಿಸಿದೆ. ಸತತ ಆರು ವರ್ಷಗಳಿಂದ ಮಳೆಯಿಲ್ಲದೆ ತತ್ತರಿಸುತ್ತಿರುವ ಈ ದೇಶ, ಇತಿಹಾಸದಲ್ಲೇ ಕಾಣದಂತಹ ಭೀಕರ ಬರಗಾಲಕ್ಕೆ ಸಾಕ್ಷಿಯಾಗಿದೆ.

ದೇಶದ ಬಹುತೇಕ ಭಾಗಗಳಲ್ಲಿ ಅಂತರ್ಜಲ ಮಟ್ಟವು ಅಪಾಯಕಾರಿ ಮಟ್ಟಕ್ಕೆ ಕುಸಿದಿದ್ದು, ರಾಜಧಾನಿ ಟೆಹ್ರಾನ್ ಸೇರಿದಂತೆ ಪ್ರಮುಖ ನಗರಗಳು 'ವಾಟರ್ ಡೆಡ್ ಸ್ಟೋರೇಜ್' ಹಂತಕ್ಕೆ ತಲುಪಿವೆ. ಕೇವಲ ಹವಾಮಾನ ವೈಪರೀತ್ಯ ಮಾತ್ರವಲ್ಲದೆ, ದಶಕಗಳಿಂದ ಅನುಸರಿಸಿಕೊಂಡು ಬಂದ ಅವೈಜ್ಞಾನಿಕ ಕೃಷಿ ಪದ್ಧತಿ ಮತ್ತು ಮಿತಿಮೀರಿದ ಅಣೆಕಟ್ಟುಗಳ ನಿರ್ಮಾಣದಿಂದಾಗಿ ನೈಸರ್ಗಿಕ ಜಲಮೂಲಗಳು ಸಂಪೂರ್ಣವಾಗಿ ಬತ್ತಿ ಹೋಗಿವೆ. ಒಮ್ಮೆ ಸಮೃದ್ಧವಾಗಿದ್ದ ಸರೋವರಗಳು ಇಂದು ಮರುಭೂಮಿಯಂತಾಗಿದ್ದು, ಇಡೀ ದೇಶವು 'ಜಲ ದಿವಾಳಿತನ'ದ ಅಂಚಿನಲ್ಲಿದೆ.

Iran

ಗುಳೆ ಹೊರಟ ಜನ

ನೀರಿನ ಈ ತೀವ್ರ ಕೊರತೆಯು ಕೇವಲ ದಾಹಕ್ಕೆ ಸೀಮಿತವಾಗಿಲ್ಲ. ಇದು ಇರಾನ್‌ನಲ್ಲಿ ಆಂತರಿಕ ಅಸ್ಥಿರತೆಗೂ ಕಾರಣವಾಗುತ್ತಿದೆ. ಹಳ್ಳಿಗಳಲ್ಲಿ ಕೃಷಿ ನಾಶವಾಗಿ ಜನ ಗುಳೆ ಹೋಗುತ್ತಿದ್ದರೆ, ನಗರಗಳಲ್ಲಿ ಭೂಮಿಯ ಅಡಿಯ ನೀರು ಖಾಲಿಯಾಗಿ ನೆಲ ಕುಸಿಯುವ ಆತಂಕ ಎದುರಾಗಿದೆ. ತಜ್ಞರ ಪ್ರಕಾರ, ಇರಾನ್ ಸರ್ಕಾರವು ಶಸ್ತ್ರಾಸ್ತ್ರಗಳ ಮೇಲೆ ನೀಡುತ್ತಿರುವ ಆದ್ಯತೆಯನ್ನು ಪರಿಸರ ಮತ್ತು ನೀರಿನ ನಿರ್ವಹಣೆಯತ್ತ ತಕ್ಷಣ ಹರಿಸದಿದ್ದರೆ, ಮುಂದಿನ ದಶಕಗಳಲ್ಲಿ ಇರಾನ್‌ನ ಅರ್ಧದಷ್ಟು ಭೂಭಾಗವು ವಾಸಿಸಲು ಯೋಗ್ಯವಲ್ಲದ ಪ್ರದೇಶವಾಗಿ ಬದಲಾಗುವ ಅಪಾಯವಿದೆ ಎನ್ನಲಾಗಿದೆ.

ಇರಾನ್ ಈಗ ಸತತ ಆರನೇ ವರ್ಷದ ಬರಗಾಲವನ್ನು ಎದುರಿಸುತ್ತಿದ್ದು, 2024-25ನೇ ಸಾಲಿನ ಜಲ ವರ್ಷವು ಇತಿಹಾಸದಲ್ಲೇ ಅತ್ಯಂತ ಒಣ ಹವೆಯ ವರ್ಷವಾಗಿ ದಾಖಲಾಗಿದೆ. ಈ ಅವಧಿಯಲ್ಲಿ ವಾಡಿಕೆಗಿಂತ ಶೇ. 45ರಷ್ಟು ಕಡಿಮೆ ಮಳೆಯಾಗಿದ್ದು, ದೇಶವು ಸಂಪೂರ್ಣವಾಗಿ ಬರಗಾಲದ ಹಂತಕ್ಕೆ ತಲುಪಿದೆ ಎಂದು ತಜ್ಞರು ಎಚ್ಚರಿಸಿದ್ದಾರೆ. ದೇಶದ ಪ್ರಮುಖ ಜಲಾಶಯಗಳಲ್ಲಿ ನೀರಿನ ಮಟ್ಟವು ಐತಿಹಾಸಿಕವಾಗಿ ಕುಸಿದಿದ್ದು, ಅನೇಕ ಅಣೆಕಟ್ಟುಗಳು ಸಂಪೂರ್ಣವಾಗಿ ಬತ್ತಿ ಹೋಗುವ ಸ್ಥಿತಿಯಲ್ಲಿವೆ.

ನೀರು ಸರಬರಾಜು ವ್ಯತ್ಯಯ

ರಾಜಧಾನಿ ಟೆಹ್ರಾನ್ ಸೇರಿದಂತೆ ಪ್ರಮುಖ ನಗರಗಳಿಗೆ ನೀರು ಪೂರೈಸುವ ಅಣೆಕಟ್ಟುಗಳಲ್ಲಿ ಕೇವಲ ಶೇ.10ರಿಂದ 12ರಷ್ಟು ಮಾತ್ರ ನೀರು ಬಾಕಿ ಉಳಿದಿದೆ. ಈ ಪರಿಸ್ಥಿತಿಯು ನಾಗರಿಕರಿಗೆ ಕುಡಿಯುವ ನೀರು ಮತ್ತು ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟುಮಾಡುತ್ತಿದ್ದು, ನೀರಿನ ಸರಬರಾಜು ಸಂಪೂರ್ಣ ನಿಂತುಹೋಗುವ ದಿನ ಬಹಳ ಹತ್ತಿರದಲ್ಲಿದೆ ಎನ್ನುವ ಆತಂಕ ಮೂಡಿಸಿದೆ.

ದಶಕಗಳ ಕಾಲದ ನೀರಿನ ತಪ್ಪು ನಿರ್ವಹಣೆ ಮತ್ತು ಅತಿಯಾದ ಅಂತರ್ಜಲ ಬಳಕೆಯಿಂದಾಗಿ ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸಿದೆ. ಕೃಷಿ ಕ್ಷೇತ್ರವು ದೇಶದ ಶೇ. 90ರಷ್ಟು ನೀರನ್ನು ಬಳಸುತ್ತಿದ್ದು, ಅವೈಜ್ಞಾನಿಕ ನೀರಾವರಿ ಪದ್ಧತಿಯಿಂದಾಗಿ ಅಂತರ್ಜಲ ಬರಿದಾಗುತ್ತಿದೆ. ಇದರ ಪರಿಣಾಮವಾಗಿ ಟೆಹ್ರಾನ್ ಸುತ್ತಮುತ್ತಲಿನ ಭೂಮಿ ಪ್ರತಿವರ್ಷ ಹಲವು ಇಂಚುಗಳಷ್ಟು ಕುಸಿಯುತ್ತಿದ್ದು, ಕಟ್ಟಡಗಳು ಮತ್ತು ಮೂಲಸೌಕರ್ಯಗಳಿಗೆ ಧಕ್ಕೆ ತರುತ್ತಿದೆ.

ಇರಾನ್ ಮೇಲೆ ಅಣ್ವಸ್ತ್ರ ಪ್ರಯೋಗಕ್ಕೆ ಅಮೆರಿಕ ಸಿದ್ಧತೆ: ಜಗತ್ತಿನಲ್ಲೆಡೆ ಆತಂಕ
ಇರಾನ್ ಮೇಲೆ ಅಣ್ವಸ್ತ್ರ ಪ್ರಯೋಗಕ್ಕೆ ಅಮೆರಿಕ ಸಿದ್ಧತೆ: ಜಗತ್ತಿನಲ್ಲೆಡೆ ಆತಂಕ

ಈ ಜಲಕ್ಷಾಮವು ಕೇವಲ ಪರಿಸರದ ಸಮಸ್ಯೆಯಾಗಿ ಉಳಿಯದೆ ಸಾಮಾಜಿಕ ಮತ್ತು ರಾಜಕೀಯ ಬಿಕ್ಕಟ್ಟಿಗೂ ಕಾರಣವಾಗುತ್ತಿದೆ. ಹಳ್ಳಿಗಳಲ್ಲಿ ನೀರಿಲ್ಲದೆ ಕೃಷಿ ಚಟುವಟಿಕೆಗಳು ಸ್ಥಗಿತಗೊಂಡಿರುವುದರಿಂದ ಸುಮಾರು 30,000ಕ್ಕೂ ಹೆಚ್ಚು ಗ್ರಾಮಗಳು ಈಗಾಗಲೇ ನಿರ್ಜನವಾಗಿವೆ. ಲಕ್ಷಾಂತರ ಜನರು ಹಳ್ಳಿಗಳನ್ನು ಬಿಟ್ಟು ನಗರಗಳತ್ತ ವಲಸೆ ಬರುತ್ತಿರುವುದು ನಗರಗಳ ಮೇಲಿನ ಒತ್ತಡವನ್ನು ಹೆಚ್ಚಿಸಿದೆ. ಇರಾನ್ ಸರ್ಕಾರವು ಶಸ್ತ್ರಾಸ್ತ್ರ ಮತ್ತು ಯುದ್ಧದ ಸನ್ನದ್ಧತೆಯ ಮೇಲೆ ನೀಡುತ್ತಿರುವ ಗಮನವನ್ನು ನೀರಿನ ಸಂರಕ್ಷಣೆಯತ್ತ ನೀಡದಿದ್ದರೆ, ದೇಶವು ಚೇತರಿಸಿಕೊಳ್ಳಲಾಗದಂತಹ ಆರ್ಥಿಕ ಮತ್ತು ಸಾಮಾಜಿಕ ಕುಸಿತವನ್ನು ಅನುಭವಿಸಬೇಕಾಗುತ್ತದೆ ಎಂದು ಭೂವಿಜ್ಞಾನಿಗಳು ಕೂಡ ಎಚ್ಚರಿಸಿದ್ದಾರೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+