Iran: ಅಮೆರಿಕ ಜೊತೆಗೆ 2ನೇ ಸುತ್ತಿನ ಮಾತುಕತೆ ಬಗ್ಗೆ ಮಾಹಿತಿ ನೀಡಿದ ಇರಾನ್

ಪರಮಾಣು ಯುದ್ಧ ಮತ್ತೊಮ್ಮೆ ಜಗತ್ತಲ್ಲಿ ನಡೆಯಬಾರದು, ಅಕಸ್ಮಾತ್ ಆಧುನಿಕ ಕಾಲದಲ್ಲಿ ನ್ಯೂಕ್ಲಿಯರ್ ವಾರ್ ಶುರುವಾದರೆ ಇಡೀ ಪ್ರಪಂಚ ನಾಶವಾಗಿ ಹೋಗುವುದು ಗ್ಯಾರಂಟಿ ಎಂಬ ಆತಂಕ ಇದೆ. ಹೀಗಾಗಿಯೇ ನ್ಯೂಕ್ಲಿಯರ್ ಅಸ್ತ್ರಗಳನ್ನು ಇಟ್ಟುಕೊಂಡಿರುವ ದೇಶಗಳ ಜೊತೆ ಒಪ್ಪಂದ ಮಾಡಿಕೊಳ್ಳುತ್ತಾ ಜಾಗತಿಕವಾಗಿ ಪರಮಾಣು ಅಸ್ತ್ರಗಳ ಪ್ರಮಾಣವನ್ನು ತಗ್ಗಿಸಲು ಪ್ರಯತ್ನ ಸಾಗಿದೆ. ಇಂತಹ ಸಮಯದಲ್ಲೇ, ಇರಾನ್ & ಅಮೆರಿಕ ನಡುವೆ ಕೂಡ ಮಾತುಕತೆ ಶುರುವಾಗಿದೆ.

ಅಮೆರಿಕ ಜಗತ್ತಿನಲ್ಲೇ ಪರಮಾಣು ಅಸ್ತ್ರ ತಯಾರಿಸಿ, ಅದನ್ನು ಬಳಕೆ ಮಾಡಿದ ಮೊದಲನೇ ದೇಶ. ಆದರೆ ಈಗ ಅದೇ ಅಮೆರಿಕದ ಮುಂದಾಳತ್ವದಲ್ಲಿ ಪರಮಾಣು ಒಪ್ಪಂದ ನಡೆದು & ಅದನ್ನ ಜಾರಿಗೆ ತರಲಾಗುತ್ತಿದೆ. ಅದೇ ರೀತಿ ಅಮೆರಿಕದ ಪರಮ ಶತ್ರು ಇರಾನ್ ಕೂಡ ಇದೇ ಒಪ್ಪಂದಕ್ಕೆ ಗ್ರೀನ್ ಸಿಗ್ನಲ್ ನೀಡಲು ಸಜ್ಜಾಗಿದೆ. ಈಗಾಗಲೇ ಒಮಾನ್‌ನಲ್ಲಿ ಮೊದಲ ಸುತ್ತಿನ ಮಾತುಕತೆ ನಡೆಸಲಾಗಿತ್ತು. ಇದೀಗ ಅಮೆರಿಕದ ಜೊತೆಗಿನ, ನ್ಯೂಕ್ಲಿಯರ್ ಒಪ್ಪಂದದ 2ನೇ ಸುತ್ತಿನ ಸಭೆ ಬಗ್ಗೆ ಮಹತ್ವದ ಸುಳಿವು ನೀಡಿದೆ ಇರಾನ್. ಹಾಗಾದರೆ ಈಗ ಇರಾನ್ & ಅಮೆರಿಕ ನಡುವೆ 2ನೇ ಸುತ್ತಿನ ಪರಮಾಣು ಒಪ್ಪಂದ ಸಭೆ ನಡೆಯುವುದು ಎಲ್ಲಿ?

Iran Confirms Second Round of U S Nuclear Talks in Rome

ಇರಾನ್ & ಅಮೆರಿಕ ನಡುವೆ ಒಪ್ಪಂದ?

ಅಮೆರಿಕದಲ್ಲಿ ಟ್ರಂಪ್ ಅಧಿಕಾರಕ್ಕೆ ಬರುವ ಮೊದಲು ಒಂದು ಲೆಕ್ಕ... ಡೊನಾಲ್ಡ್ ಟ್ರಂಪ್ ಅಧಿಕಾರಕ್ಕೆ ಬಂದ ನಂತರ ಮತ್ತೊಂದು ಲೆಕ್ಕ... ಎನ್ನುವ ಪರಿಸ್ಥಿತಿ ನಿರ್ಮಾಣ ಆಗುತ್ತಿದೆ. ಡೊನಾಲ್ಡ್ ಟ್ರಂಪ್ ಶ್ವೇತಭವನಕ್ಕೆ ಮರಳಿದ ಬಳಿಕ ಪರಮಾಣು ಯೋಜನೆಯ ಕುರಿತು ಇರಾನ್ ಮತ್ತು ಅಮೆರಿಕ ನಡುವೆ ಮಹತ್ವದ ಮಾತುಕತೆ ಆರಂಭಿಸಿದ್ದು, ಜಾಗತಿಕವಾಗಿ ಮತ್ತೆ ಎಂದಿಗೂ ನ್ಯೂಕ್ಲಿಯರ್ ವಾರ್ ನಡೆಯದ ರೀತಿ ಕ್ರಮ ವಹಿಸಲಾಗುತ್ತಿದೆ.

ಈಗ 2ನೇ ಸುತ್ತಿನ ಸಭೆಯನ್ನ ರೋಮ್ ನಗರದಲ್ಲಿ ನಡೆಸಲು ನಿರ್ಧಾರವನ್ನು ಕೈಗೊಳ್ಳಲಾಗಿದೆ. ಅಮೆರಿಕದ ಅಧಿಕಾರಿಗಳ ಜೊತೆಯಲ್ಲಿ ಇರಾನ್ ಅಧಿಕಾರಿಗಳು ಸಭೆಯನ್ನು ನಡೆಸಿ ಮಹತ್ವದ ತೀರ್ಮಾನಕ್ಕೆ ಬರಲಿದ್ದಾರೆ. ಹೀಗಾಗಿ, ಸಭೆಗೆ ಬೇಕಾದ ಸಿದ್ಧತೆಗಳು ನಡೆಯುತ್ತಿವೆ. ಜಗತ್ತಿನಲ್ಲಿ ಕೆಲವೇ ಕೆಲವು ದೇಶಗಳು ಪರಮಾಣು ಶಕ್ತಿ ಹೊಂದಿವೆ, ಈ ಪೈಕಿ ಇರಾನ್ ಕೂಡ ಒಂದಾಗಿದ್ದು ಅಮೆರಿಕಗೆ ಟೆನ್ಷನ್ ಕೊಡುತ್ತಿದೆ. ಯಾಕಂದ್ರೆ, ಇರಾನ್ & ಅಮೆರಿಕ ಮೊದಲಿನಿಂದ ಕೂಡ ಶತ್ರುಗಳೇ ಆಗಿವೆ. ಇದೀಗ ಸಭೆ ನಡೆದ ನಂತರ ಒಪ್ಪಂದಕ್ಕೆ ಬರುವ ಸಾಧ್ಯತೆ ಇದೆ.

ಒಟ್ನಲ್ಲಿ ಇರಾನ್ & ಅಮೆರಿಕ ಬದಲಾವಣೆ ದಾರಿಗೆ ಹೆಜ್ಜೆ ಇಡುವ ಸಾಧ್ಯತೆ ಕಾಣಿಸುತ್ತಿದ್ದು, ಎರಡೂ ದೇಶಗಳು ಹೊಸ ಆಯ್ಕೆ ಮೂಲಕ ಕನಸು ಕಾಣುತ್ತಿವೆ. ಅದರಲ್ಲೂ ನ್ಯೂಕ್ಲಿಯರ್ ವಾರ್ ನಡೆಯದಂತೆ ಕ್ರಮ ಕೈಗೊಳ್ಳುತ್ತಿದ್ದು, ಮುಂದಿನ ದಿನಗಳಲ್ಲಿ ಮಧ್ಯಪ್ರಾಚ್ಯ ಶಾಂತ ವಾತಾವರಣದಲ್ಲಿ ಬದುಕು ನಡೆಸುತ್ತಾ? ಅನ್ನೋದನ್ನ ಕಾದು ನೋಡಬೇಕಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+