ಒಂದೇ ಏಟು, ಬೆಚ್ಚಿಬಿದ್ದ ಪಾಕಿಸ್ತಾನ ಮಾಡಿದ್ದೇನು ಗೊತ್ತೆ?

ಪಾಕಿಸ್ತಾನ ಅದೆಷ್ಟು ಪುಕ್ಕಲು ದೇಶ ಅನ್ನೋದು ಮತ್ತೆ ಮತ್ತೆ ಪ್ರೂವ್ ಆಗುತ್ತಿದೆ. ಸುಮ್ಮನೆ ಭಾರತದ ವಿರುದ್ಧ ಕಾಲು ಕೆರೆದುಕೊಂಡು ಜಗಳ ತೆಗೆಯುವ ಪಾಕಿಸ್ತಾನ, ಇದೀಗ ಇರಾನ್ ಕೊಟ್ಟ ಒಂದೇ ಒಂದು ಏಟಿಗೆ ನಲುಗಿ ಹೋಗಿದೆ. ಈ ಕಾರಣಕ್ಕೆ ಸಂಧಾನ ಮಾಡಿಕೊಂಡು ಸೈಲೆಂಟ್ ಆಗಿ ಮೂಲೆ ಸೇರಲು ಸಜ್ಜಾಗಿದೆ ಪುಕ್ಕಲು ಪಾಕಿಸ್ತಾನ!

ಹೌದು ಉಗ್ರರನ್ನು ಗುರಿಯಾಗಿರಿಸಿ ಇರಾನ್ ಮೊದಲು ಪಾಕಿಸ್ತಾನದ ನೆಲದ ಮೇಲೆ ಅಟ್ಯಾಕ್ ಮಾಡಿತ್ತು. ಇದರಿಂದ ಮಾನ ಮರ್ಯಾದಿ ಕಳೆದುಕೊಂಡ ರೀತಿ ಪರದಾಡಿದ ಪಾಕಿಸ್ತಾನವು ದಿಢೀರ್ ಇರಾನ್ ನೆಲದ ಮೇಲೆ ದಾಳಿ ಮಾಡಿತ್ತು. ಹೀಗೆ ಎರಡು ದೇಶಗಳು ನಡೆಸಿದ ಪರಸ್ಪರ ವಾಯು ದಾಳಿಯಿಂದ ಪರಿಸ್ಥಿತಿ ಕೈಮೀರಿ ಹೋಗಿದೆ. ಅಲ್ಲದೆ ಇನ್ನೇನು ಯುದ್ಧ ನಡೆಯುತ್ತೆ, ಇರಾನ್ & ಪಾಕಿಸ್ತಾನ ನಡುವೆ ಪರಿಸ್ಥಿತಿ ಕೈಮೀರಿ ಹೋಗುತ್ತಿದೆ ಎನ್ನುವಾಗ ಈ ಮಹತ್ವದ ಬೆಳವಣಿಗೆ ನಡೆದಿದೆ.

Iran And Pakistan Agreed To Stop The Attacking On Each Other

ಜಗಳ ಬಿಟ್ಟು ಸಂಧಾನ ಯಾಕೆ?

ಅಷ್ಟಕ್ಕೂ ಈಗ ಕೆಲ ದಿನಗಳಿಂದ, ಎರಡೂ ದೇಶಗಳ ನಡುವೆ ನಡೆದಿರುವ ಕಿರಿಕ್ ಮರೆತು ಮತ್ತೆ ಒಂದಾಗಲು ಪಾಕಿಸ್ತಾನ & ಇರಾನ್ ಒಪ್ಪಿಗೆ ಸೂಚಿಸಿವೆ ಎನ್ನಲಾಗಿದೆ. ಈ ಮೂಲಕ ಇದೀಗ ಪಾಕ್ ಮತ್ತು ಇರಾನ್ ನಡುವೆ ನಿರ್ಮಾಣವಾಗಿರುವ ಬಿಕ್ಕಟ್ಟಿನ ಸ್ಥಿತಿಯನ್ನು ಸೂಕ್ತ ದಾರಿಗೆ ತರಲು ಪಾಕಿಸ್ತಾನ & ಇರಾನ್‌ ಒಪ್ಪಿಗೆ ಸೂಚಿಸಿವೆ ಅಂತಾ ಈಗ ಪಾಕಿಸ್ತಾನ‌ ವಿದೇಶಾಂಗ ಸಚಿವಾಲಯ ಮಾಹಿತಿ ನೀಡಿದೆ. ಹಾಗೇ ಈ ಕುರಿತು ಎರಡೂ ದೇಶಗಳ ನಡುವೆ ಫೋನ್‌ನ ಮೂಲಕ ಮಾತುಕತೆ ನಡೆದಿದೆ ಎನ್ನಲಾಗಿದೆ.

ಉಗ್ರರ ವಿರುದ್ಧ ಹೋರಾಡುತ್ತಂತೆ ಪಾಕಿಸ್ತಾನ!

ಯೆಸ್, ಪಾಕಿಸ್ತಾನ ಅದೆಷ್ಟು ನಾಟಕ ಆಡುತ್ತೆ ಅನ್ನೋದು ಭಾರತಕ್ಕೆ ಗೊತ್ತು. ಯಾಕಂದ್ರೆ ಈ ದೇಶ ಉಗ್ರರನ್ನು ಸಾಕಿ ಬೆಳೆಸುವುದು ಅಲ್ಲದೆ, ಅದೇ ಉಗ್ರರನ್ನು ಹೊಡೆದು ಉರುಳಿಸಿ ಪರಿಸ್ಥಿತಿ ಸರಿ ಮಾಡುತ್ತೇವೆ ಅಂತಿದೆ. ಈಗ ಕೂಡ ಇರಾನ್ ಜೊತೆ, ಪಾಕಿಸ್ತಾನ ಅದೇ ರೀತಿ ನಾಟಕ ಶುರು ಮಾಡಿದೆ. ಭಯೋತ್ಪಾದನೆ ನಿಗ್ರಹ, ಪರಸ್ಪರ ಸಹಕಾರ ಸೇರಿದಂತೆ ಸಮನ್ವಯ ಬಲಪಡಿಸುವುದಕ್ಕೆ ಪಾಕಿಸ್ತಾನ ಈಗ ಇರಾನ್ ಜೊತೆ ಮಾತುಕತೆ ನಡೆಸಿದೆಯಂತೆ.

Iran And Pakistan Agreed To Stop The Attacking On Each Other

ಅಂದಹಾಗೆ ಕಿರಿಕ್ ಶುರುವಾಗಿದ್ದು ಎಲ್ಲಿಂದ ಅಂದರೆ, ಪಾಕಿಸ್ತಾನದ ಜೈಶ್ ಅಲ್ ಅದ್ಲ್‌ ಉಗ್ರ ಸಂಘಟನೆ ನೆಲೆಗಳನ್ನು ಗುರಿಯಾಗಿಸಿ ಇರಾನ್‌ ಕ್ಷಿಪಣಿ ದಾಳಿ ನಡೆಸಿದೆ ಎನ್ನಲಾಗಿತ್ತು. ಹೀಗೆ, ಇರಾನ್ ದಾಳಿ ನಡೆಸಿದ ಬೆನ್ನಲ್ಲೇ ಇರಾನ್‌ನಲ್ಲಿದ್ದ ರಾಯಭಾರಿ ವಾಪಸ್‌ ಕರೆಸಿಕೊಂಡ ಪಾಕ್‌ ಅದೇ ರೀತಿ ಇರಾನ್‌ನ ರಾಯಭಾರಿಯನ್ನೇ ವಜಾ ಮಾಡಿ ಮನೆಗೆ ಕಳಿಸಿತ್ತು. ಆ ನಂತರ ಈ ಎರಡೂ ದೇಶಗಳ ನಡುವೆ ಪರಿಸ್ಥಿತಿ ಕೈಮೀರಿ ಹೋಗಿತ್ತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+