ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನೂತನ ಆವಿಷ್ಕಾರ: ಕೊವಿಡ್ 19 ರೋಗವನ್ನು ತಡೆಯಲು ಅಯೋಡಿನ್ ದ್ರಾವಣ

|
Google Oneindia Kannada News

ಮುಂಬೈಮ ಸೆಪ್ಟೆಂಬರ್ 22: ಅಯೋಡಿನ್ ದ್ರಾವಣದಿಂದಲೂ ಕೊರೊನಾ ಸೋಕನ್ನು ದೂರವಿಡಬಹುದು ಎಂದು ಸಂಶೋಧಕರು ಮಾಹಿತಿ ನೀಡಿದ್ದಾರೆ. ಅಯೋಡಿನ್ ದ್ರಾವಣವು ಕೊರೊನಾ ವೈರಸ್​ ಹರಡುವಿಕೆಯನ್ನು ತಡೆಯುತ್ತದೆ ಎಂದು ಕನೆಕ್ಟಿಕಟ್ ಸ್ಕೂಲ್ ಆಫ್ ಮೆಡಿಸಿನ್ ವಿಶ್ವವಿದ್ಯಾಲಯದ ಸಂಶೋಧಕರ ಅಧ್ಯಯನದಿಂದ ತಿಳಿದುಬಂದಿದೆ.

ಮನೆಯಲ್ಲಿ ಒಬ್ಬರಿಗೆ ಸೋಂಕು ಬಂದರೆ ಇಡೀ ಮನೆಯವರಿಗೂ ಅದು ಹರಡುತ್ತಿದೆ. ಇದನ್ನು ತಡೆಯಲು ಉಪ್ಪಿನ ದ್ರಾವಣ ಬಹುಮುಖ್ಯ ಪಾತ್ರ ವಹಿಸುತ್ತದೆ ಎಂದು ಸಂಶೋಧಕರು ಹೇಳಿದ್ದಾರೆ.

ಕೊವಿಡ್ 19 ಹಾಗೂ ಸಾಮಾನ್ಯ ಜ್ವರದ ನಡುವೆ ವ್ಯತ್ಯಾಸವಿದೆಯೇ?ವೈದ್ಯರು ಏನಂತಾರೆ?ಕೊವಿಡ್ 19 ಹಾಗೂ ಸಾಮಾನ್ಯ ಜ್ವರದ ನಡುವೆ ವ್ಯತ್ಯಾಸವಿದೆಯೇ?ವೈದ್ಯರು ಏನಂತಾರೆ?

ಕೊರೊನಾ ಸೋಂಕು ತಗುಲಿದ ವ್ಯಕ್ತಿಯಿಂದ ಬಹು ಬೇಗನೆ ಇದು ಇತರರಿಗೂ ಹರಡುತ್ತಿರುವ ಹಿನ್ನೆಲೆಯಲ್ಲಿ ಸೋಂಕಿನ ಪ್ರಮಾಣ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ವೈದ್ಯಕೀಯ ವೃತ್ತಿಪರರು ಈ ದ್ರಾವಣವನ್ನು ಸೋಂಕಿತರಿಗೆ ಬಳಸುವಂತೆ ಹೇಳಬೇಕು. ಆನಂತರವಷ್ಟೇ ಅವರ ದಾಖಲಾತಿ ಮಾಡಿಕೊಳ್ಳಬೇಕು.

ಈ ರೀತಿಯಾದರೆ ಕರೊನಾ ಸೋಂಕು ಬೇರೆಯವರಿಗೆ ಹರಡುವುದರಿಂದ ತಪ್ಪಿಸಬಹುದು. ಹೀಗಾದಲ್ಲಿ ವೈರಸ್​ನ ಹರಡುವಿಕೆಯ ಪ್ರಮಾಣದಲ್ಲಿ ಇಳಿತವಾಗಲಿದೆ ಎಂದಿದ್ದಾರೆ ಸಂಶೋಧಕರು. ವೈದ್ಯರ ಮೇಲ್ವಿಚಾರಣೆಯಲ್ಲಿ ಮಾತ್ರ ಈ ಪ್ರಕ್ರಿಯೆ ಅನುಸರಿಸಬೇಕು ಎಂದಿದ್ದಾರೆ. ಕೊನೆಯದಾಗಿ ಎಚ್ಚರಿಕೆ ನೀಡಿರುವ ಸಂಶೋಧಕರು, ಇದನ್ನು ಮನೆಯಲ್ಲಿ ಪ್ರಯತ್ನಿಸಬೇಡಿ ಎಂದು ಹೇಳಿದ್ದಾರೆ.

ಅಯೋಡಿನ್ ದ್ರಾವಣದ ಗುಣಗಳು

ಅಯೋಡಿನ್ ದ್ರಾವಣದ ಗುಣಗಳು

ಅಚ್ಚರಿ ಎಂದರೆ ಅತ್ಯಂತ ಕಡಿಮೆ ಸಾಂದ್ರತೆ ಎಂದುಕೊಂಡಿರುವ ಅಂದರೆ ಶೇ.0.5 ರಷ್ಟು ಸಾಂದ್ರತೆಯ ದ್ರಾವಣದ ಮೂಲಕವೂ ವೈರಸ್​ ಅನ್ನು ಸಂಪೂರ್ಣವಾಗಿ ನಿಷ್ಕ್ರಿಯಗೊಳಿಸಬಹುದು ಎಂದು ಸಂಶೋಧಕರು ಕಂಡುಕೊಂಡಿದ್ದಾರೆ. ಈ ಬಗ್ಗೆ ಜಮಾ ಒಟೋಲರಿಂಗೋಲಜಿ-ಹೆಡ್ ಮತ್ತು ನೆಕ್ ಸರ್ಜರಿಯಲ್ಲಿ ಲೇಖನ ಪ್ರಕಟವಾಗಿದ್ದು, ಅಯೋಡಿನ್ ದ್ರಾವಣದ ಗುಣಗಳ ಬಗ್ಗೆ ಅದರಲ್ಲಿ ವಿವರಣೆ ನೀಡಲಾಗಿದೆ.ಸಂಶೋಧಕರು ಮೂರು ವಿಭಿನ್ನ ಸಾಂದ್ರತೆಯ ದ್ರಾವಣಗಳನ್ನು ಬಳಸಿ ಪ್ರಯೋಗ ಮಾಡಿದ್ದಾರೆ. ಅವರು ಶೇ. 0.5, ಶೇ. 1.25 ಶೆ. 2.5 ರಷ್ಟು ಸಾಂದ್ರತೆಯ ದ್ರಾವಣಗಳನ್ನು ಬಳಸಿ ಪ್ರತ್ಯೇಕ ಪ್ರಯೋಗ ನಡೆಸಿದ್ದಾರೆ.

ಸಂಶೋಧಕರ ಅಚ್ಚರಿ

ಸಂಶೋಧಕರ ಅಚ್ಚರಿ

ಈ ಸಂಶೋಧನೆ ಕುರಿತು ಸಂಶೋಧಕರು ಆಶ್ಚರ್ಯ ವ್ಯಕ್ತಪಡಿಸಿದ್ದಾರೆ.ಈ ಕುರಿತು ಖುದ್ದಾಗಿ ಸಂಶೋಧಕರೇ ಅಚ್ಚರಿಪಟ್ಟುಕೊಂಡಿದ್ದಾರೆ. ಅಯೋಡಿನ್ ದ್ರಾವಣವೇ ಎಲ್ಲಕ್ಕಿಂತ ಬೆಸ್ಟ್​ ಎಂದು ಸಂಶೋಧಕರು ಹೇಳಿದ್ದಾರೆ. 15 ಸೆಕೆಂಡ್​ಗಳಿಗಿಂತಲೂ ಅತ್ಯಂತ ಕಡಿಮೆ ಅವಧಿಯಲ್ಲಿ ಈ ದ್ರಾವಣವು ವೈರಸ್​ ಅನ್ನು ಕೊಂದಿದೆ. ಇದು ಎಷ್ಟು ಪರಿಣಾಮಕಾರಿಯೆಂದರೆ, ಇದೇ ಪರೀಕ್ಷೆಯನ್ನು ನಾವು ಎಥೆನಾಲ್ ಆಲ್ಕೋಹಾಲ್​ ಬಳಸಿಯೂ ಮಾಡಿದ್ದೆವು. ಆದರೆ ಇದರಲ್ಲಿ ಅಷ್ಟೊಂದು ಫಲಿತಾಂಶ ಕಂಡುಬಂದಿಲ್ಲ.

ಸಾರ್ಸ್ ರೋಗಕ್ಕೂ ರಾಮಬಾಣ

ಸಾರ್ಸ್ ರೋಗಕ್ಕೂ ರಾಮಬಾಣ

ಇದು ಕೊರೊನಾ ಮಾತ್ರವಲ್ಲದೇ ಅಯೋಡಿನ್ ದ್ರಾವಣವು SARS ಮತ್ತು MERS ಸೇರಿದಂತೆ ಇತರ ರೀತಿಯ ಸೋಂಕುಗಳ ವಿರುದ್ಧವೂ ಪರಿಹಾರವಾಗಿದೆ ಎಂದು ತಾವು ಕಂಡುಕೊಂಡಿರುವುದಾಗಿ ಹೇಳಿದ್ದಾರೆ.

Recommended Video

Congress ನಾ ಮಹತ್ವದ ಹುದ್ದೆ ಈ ನಾಯಕರ ಪಾಲು!!! | Oneindia Kannada
ಬಳಕೆ ಬಗ್ಗೆ ಸಂಶೋಧಕರು ಏನು ಹೇಳುತ್ತಾರೆ?

ಬಳಕೆ ಬಗ್ಗೆ ಸಂಶೋಧಕರು ಏನು ಹೇಳುತ್ತಾರೆ?

ಅಯೋಡಿನ್ ದ್ರಾವಣವನ್ನು ಮೂಗಿನ ಮೂಲಕ ಸೋಂಕಿತರಿಗೆ ನೀಡಬಹುದಾಗಿದೆ. ಇಂಟ್ರಾನಾಸಲ್​ ಪ್ರಕ್ರಿಯೆಗೆ ಸೋಂಕಿತರನ್ನು ಒಳಪಡಿಸುವ ಮುನ್ನ ಅವರಿಗೆ ಅಯೋಡಿನ್ ದ್ರಾವಣ ನೀಡುವುದು ಅತ್ಯುತ್ತಮ ವಿಧಾನವಾಗಿದೆ. ಹೀಗೆ ಮಾಡಿದರೆ ನೀರಿನ ಹನಿಗಳು ಸೀನಿದಾಗ, ಕೆಮ್ಮಿದಾಗ ಬರುವ ಹನಿಗಳು ಮತ್ತು ಏರೋನಾಸ್​ಗಳ ಮೂಲಕ ವೈರಸ್​ ಹರಡುವ ಅಪಾಯದ ಮಟ್ಟವನ್ನು ಕಡಿಮೆ ಮಾಡಲಿದೆ.

English summary
A recent study carried out by the researchers from the University of Connecticut School of Medicine suggested that iodine solution may help in preventing the spread of novel coronavirus, as per the study published in JAMA Otolaryngology-Head and Neck Surgery.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X