ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೆಹುಲ್ ಚೋಕ್ಸಿ ವಿರುದ್ಧ ರೆಡ್ ಕಾರ್ನರ್ ನೋಟಿಸ್ ಹೊರಡಿಸಿದ ಇಂಟರ್ ಪೋಲ್

|
Google Oneindia Kannada News

ನವದೆಹಲಿ, ಡಿಸೆಂಬರ್ 13: ದೇಶಭ್ರಷ್ಟ ಆರ್ಥಿಕ ಅಪರಾಧಿ, ಪಂಜಾಬ್ ನ್ಯಾಷನಲ್ ಬ್ಯಾಂಕ್ ವಂಚನೆ ಪ್ರಕರಣದ ಆರೋಪಿ ಮೆಹುಲ್ ಚೋಕ್ಸಿ ವಿರುದ್ಧ ಇಂಟರ್ ಪೋಲ್ ರೆಡ್ ಕಾರ್ನರ್ ನೋಟಿಸ್ ಜಾರಿಗೊಳಿಸಿದೆ.

13 ಸಾವಿರ ಕೋಟಿ ಪಿಎನ್ ಬಿ ಹಗರಣದ ರುವಾರಿಯನ್ನು ವಶಕ್ಕೆ ಪಡೆದುಕೊಳ್ಳುವಂತೆ ಮತ್ತು ಆತನ ಚಲನವಲನಗಳ ಮೇಲೆ ನಿಯಂತ್ರಣ ಇರಿಸುವಂತೆ ಆಂಟಿಗುವಾ ಮತ್ತು ಬರ್ಬುಡಾ ಸರ್ಕಾರಕ್ಕೆ ಈಗಾಗಲೇ ಭಾರತ ಮನವಿ ಮಾಡಿದೆ.

ತನಿಖಾ ಸಂಸ್ಥೆಗಳಾದ ಜಾರಿ ನಿರ್ದೇಶನಾಲಯ(ಇಡಿ) ಹಾಗೂ ಸಿಬಿಐ ತಂಡಗಳು, ಚೋಕ್ಸಿ ವಿರುದ್ಧ ದೋಷರೋಪಣ ಪಟ್ಟಿ ಸಲ್ಲಿಸಲಾಗಿದೆ.

Interpol Red Notice issued against PNB fraud case accused Mehul Choksi

ಭಾರತದಿಂದ ಪರಾರಿಯಾಗಿರುವ ಚೋಕ್ಸಿ ಸದ್ಯ ವೆಸ್ಟ್ ಇಂಡೀಸ್ ನ ಆಂಟಿಗುವಾ ಹಾಗು ಬಾರ್ಬಡೋಸ್ ನಲ್ಲಿ ನೆಲೆಸಿರುವ ಮಾಹಿತಿಯಿದೆ. ಸಿಬಿಐ ಕೋರಿಕೆ ಮೇರೆಗೆ ಇಂಟರ್ ಪೋಲ್ ರೆಡ್ ಕಾರ್ನರ್ ನೋಟಿಸ್ ಜಾರಿ ಮಾಡಿದೆ.

ಜನವರಿ 15ರಂದು ಆಂಟಿಗುವಾದ ಪ್ರಜೆಯಾಗಿ ಪೌರತ್ವ ಪಡೆದುಕೊಂಡಿರುವ ಚೋಕ್ಸಿ ಅವರನ್ನು ವಿಚಾರಣೆಗಾಗಿ ಕರೆ ತರಲು ಭಾರತದ ತನಿಖಾ ಸಂಸ್ಥೆಗಳು ನಿರಂತರವಾಗಿ ಪ್ರಯತ್ನಿಸುತ್ತಿವೆ. ಕಳೆದ ಜುಲೈ ತಿಂಗಳಿನಲ್ಲಿ ಪಿಎನ್ ಬಿ ಪ್ರಕರಣದ ಮತ್ತೊಬ್ಬ ಪ್ರಮುಖ ಆರೋಪಿ ನೀರವ್ ಮೋದಿ ಅವರಿಗೂ ರೆಡ್ ಕಾರ್ನರ್ ನೋಟಿಸ್ ಜಾರಿಗೊಳಿಸಲಾಗಿದೆ.

English summary
Interpol issued a red corner notice against fugitive offender Mehul Choksi, wanted in the 13,000-crore bank fraud case, on Thursday. The Interpol arrest warrant came on a CBI request.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X