'ಕಸದಲ್ಲೂ ರಸ' ತೆಗೆಯುವುದಂದ್ರೆ ಇದೇ ನೋಡಿ.. ಕೊಳಚೆ ನೀರಿನಿಂದ ಜಗತ್ತೇ ಮೆಚ್ಚುವ ಸಾಧನೆ ಮಾಡಿದ ಶಾಲಾ ವಿದ್ಯಾರ್ಥಿ
Achievement Story: ಕಸದಲ್ಲೂ ರಸ ತೆಗೆಯುತ್ತಾರೆ ಎನ್ನುವ ಪದವನ್ನು ಕೇಳಿಯೇ ಇರುತ್ತೇವೆ. ಇದೀಗ ಇದಕ್ಕೆ ತಕ್ಕಂತೆ ಶಾಲಾ ವಿದ್ಯಾರ್ಥಿಯೊಬ್ಬ ಕೊಳಚೆ ನೀರಿನಿಂದ ಅತ್ಯದ್ಭುತ ಗಿಮಿಕ್ ಮಾಡಿ ಇಡೀ ವಿಶ್ವದ ಗಮನ ಸೆಳೆದಿರುವ ಘಟನೆ ನಡೆದಿದೆ. ಈ ಕುರಿತ ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ಗಮನಿಸಿ.
ಸಾಮಾನ್ಯವಾಗಿ ಕೊಳಕು ನೀರನ್ನು ಶುದ್ಧೀಕರಿಸಬೇಕಾದ ಅಥವಾ ಬಿಸಾಡಬೇಕಾದ ತ್ಯಾಜ್ಯವೆಂದು ಪರಿಗಣಿಸಲಾಗುತ್ತದೆ. ಆದರೆ ಅದೇ ಕಲುಷಿತ ನೀರನ್ನು ಬಳಸಿಕೊಂಡು ವಿದ್ಯುತ್ ಉತ್ಪಾದಿಸುವ ಅತ್ಯಂತ ವಿಶಿಷ್ಟ ವಿಜ್ಞಾನ ಯೋಜನೆಯನ್ನು ರೂಪಿಸುವ ಮೂಲಕ ಶಾಲೆಯ ವಿದ್ಯಾರ್ಥಿ ಪ್ರಖರ್ ಪುರೋಹಿತ್ ಗಮನ ಸೆಳೆದಿದ್ದಾರೆ. ಇವರ ಈ ಅತ್ಯದ್ಭುತ ಸಾಧನೆಗೆ ಮೆಚ್ಚುಗೆಗಳ ಸುರಿಮಳೆಯೇ ಹರಿದುಬರುತ್ತಿದೆ.

ಮೆಚ್ಚುಗೆಗಳ ಸುರಿಮಳೆ
ಕಲುಷಿತ ನೀರು ಎಂದ ತಕ್ಷಣವೇ ದುರ್ವಾಸನೆ, ರೋಗರುಜಿನಗಳು ಹಾಗೂ ಪರಿಸರ ಮಾಲಿನ್ಯವೇ ನಮಗೆ ನೆನಪಾಗುತ್ತವೆ. ಆದರೆ ಅದೇ ಕೊಳಚೆ ನೀರನ್ನು ಬೇರೆ ದೃಷ್ಟಿಕೋನದಿಂದ ನೋಡಿರುವ ನಾರ್ತ್ ಕ್ಯಾರೊಲಿನಾದ ಶಾಲಾ ವಿದ್ಯಾರ್ಥಿ ಪ್ರಖರ್ ಪುರೋಹಿತ್, ಅದರಿಂದಲೇ ವಿದ್ಯುತ್ ಉತ್ಪಾದಿಸುವ ಅತ್ಯಂತ ವಿಶಿಷ್ಟ ಪ್ರಯೋಗ ಮಾಡಿ ಭಾರಿ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
ಪ್ರತಿಷ್ಠಿತ '3M ಯಂಗ್ ಸೈಂಟಿಸ್ಟ್ ಚಾಲೆಂಜ್' ಗೌರವ
ಪ್ರಖರ್ ಅವರ Tiny Batteries from Dirty Water ಎಂಬ ಪರಿಕಲ್ಪನೆಯೂ ಪ್ರತಿಷ್ಠಿತ 2026ರ '3M ಯಂಗ್ ಸೈಂಟಿಸ್ಟ್ ಚಾಲೆಂಜ್' ಸ್ಪರ್ಧೆಯಲ್ಲಿ ನಾರ್ತ್ ಕ್ಯಾರೊಲಿನಾ ಸ್ಟೇಟ್ ಮೆರಿಟ್ ವಿನ್ನರ್ ಗೌರವಕ್ಕೆ ಭಾಜನವಾಗಿದೆ. ಪ್ರಪಂಚದಾದ್ಯಂತ ವಿದ್ಯಾರ್ಥಿಗಳಲ್ಲಿ ಅಡಗಿರುವ ವೈಜ್ಞಾನಿಕ ಆಲೋಚನೆಗಳನ್ನು ಹೊರತರುವ ಮತ್ತು ದೈನಂದಿನ ನಿಜವಾದ ಸಮಸ್ಯೆಗಳಿಗೆ ಸೂಕ್ತ ವೈಜ್ಞಾನಿಕ ಪರಿಹಾರ ಕಂಡುಕೊಳ್ಳಲು ಪ್ರೇರೇಪಿಸುವ ನಿಟ್ಟಿನಲ್ಲಿ ಈ ಸ್ಪರ್ಧೆ ಅತ್ಯಂತ ಸಹಕಾರೊಯಾಗಿದೆ.
ಜಗತ್ತಿನ ಮುಂದೆ ಹೊಸ ಆಲೋಚನೆ ಮುಂದಿಟ್ಟ ವಿದ್ಯಾರ್ಥಿ
ಜಲಮಾಲಿನ್ಯ ನಿವಾರಣೆ ಹಾಗೂ ವಿದ್ಯುತ್ ಉತ್ಪಾದನೆಯನ್ನು ಎರಡು ವಿಭಿನ್ನ ರೀತಿಯಲ್ಲಿ ನೋಡಲಾಗುತ್ತದೆ. ಆದರೆ ಪ್ರಖರ್, ಈ ಎರಡೂ ವಿಷಯಗಳನ್ನು ಸಂಯೋಜಿಸಿ, ಕಲುಷಿತ ನೀರನ್ನು ವಿದ್ಯುತ್ ಉತ್ಪಾದಕ ಮೂಲವಾಗಿ ಬಳಸಬಹುದೇ ಎಂಬ ಹೊಸ ಆಲೋಚನೆಯನ್ನು ಜಗತ್ತಿನ ಮುಂದೆ ಇಟ್ಟಿದ್ದಾರೆ. ಇಂದಿನ ದಿನಗಳಲ್ಲಿ ಧರಿಸಬಹುದಾದ ಸಣ್ಣ ಮಟ್ಟದ ವಿದ್ಯುನ್ಮಾನ ಸಾಧನಗಳಿಗೆ ಅತ್ಯಂತ ಚಿಕ್ಕ ಬ್ಯಾಟರಿಗಳ ಅಗತ್ಯವಿದ್ದು, ಕಲುಷಿತ ನೀರು ಅಂತಹ ಸಣ್ಣ ಸಾಧನಗಳಿಗೆ ಇಂಧನವಾಗಿ ಕೆಲಸ ಮಾಡಬಲ್ಲದೇ ಎಂಬುದನ್ನು ಅವರು ಪರೀಕ್ಷಿಸಿದ್ದಾರೆ.
ಕಸದಲ್ಲಿ ರಸ ತೆಗೆಯುವ ಪರಿಕಲ್ಪನೆ
ಯಂಗ್ ಸೈಂಟಿಸ್ಟ್ ಲ್ಯಾಬ್ ಸಂಸ್ಥೆಯು ಈ ಬ್ಯಾಟರಿಯ ಸಂಪೂರ್ಣ ವಿನ್ಯಾಸ, ತಾಂತ್ರಿಕ ವಿವರ ಅಥವಾ ಪ್ರಕ್ರಿಯೆಯನ್ನು ಅಧಿಕೃತವಾಗಿ ಬಹಿರಂಗಪಡಿಸಿಲ್ಲ. ಆದರೂ ತ್ಯಾಜ್ಯವೆಂದು ಎಸೆದುಬಿಡುವ ವಸ್ತುವಿನಲ್ಲೂ ಒಂದು ಒಳ್ಳೆಯ ಅಂಶವನ್ನು ಹುಡುಕಿದ ಅವರ ಈ ಆಲೋಚನೆ ಜಾಗತಿಕ ಮಟ್ಟದಲ್ಲಿ ಗಮನ ಸೆಳೆದಿದೆ. ಬೃಹತ್ ಪ್ರಯೋಗಾಲಯಗಳು ಅಥವಾ ದುಬಾರಿ ಉಪಕರಣಗಳಷ್ಟೇ ಹೊಸ ಸಂಶೋಧನೆಗೆ ಮೂಲವಲ್ಲ. ನಮಗಿರುವ ದೈನಂದಿನ ಸಮಸ್ಯೆಗಳನ್ನು ಸೃಜನಶೀಲವಾಗಿ ನೋಡುವುದರಿಂದಲೂ ಸಂಶೋಧನೆ ಹುಟ್ಟುತ್ತದೆ ಎಂಬುದಕ್ಕೆ ಪ್ರಖರ್ ಪುರೋಹಿತ್ ಅವರ ಈ ಅಪರೂಪದ ಸಾಧನೆಯೇ ಉತ್ತಮ ಉದಾಹರಣೆಯಾಗಿದೆ ಎನ್ನಬಹುದು.
ಒಟ್ಟಿನಲ್ಲಿ ಹೇಳುವುದಾದರೆ, ಛಲ ಒಂದಿದ್ದರೆ ಏನು ಬೇಕಾದರೆ ಸಾಧನೆ ಮಾಡಬಹುದು ಎನ್ನುವುದಕ್ಕೆ ಈ ಪುಟ್ಟ ಬಾಲಕನ ಸಾಧನೆ ಪ್ರಮುಖ ಕಾರಣವಾಗಿದೆ. ಇದೀಗ ಈ ವಿದ್ಯಾರ್ಥಿಗೆ ಮೆಚ್ಚುಗೆಗಳ ಸುರಿಮಳೆಯೇ ಹರಿದುಬರುತ್ತಿದೆ. ಮತ್ತೊಂದೆಡೆ, ಸಾಧನೆಗೆ ವಯಸ್ಸಿನ ಮಿತಿ ಇಲ್ಲ ಎನ್ನುವುದನ್ನು ಕೂಡ ಸಾಬೀತು ಮಾಡಿದ್ದಾರೆ ಈ ವಿದ್ಯಾರ್ಥಿ. ಅಲ್ಲದೆ ಯುವ ಪೀಳಿಗೆಗೆ ಮಾದರಿಯಾಗಿದ್ದಾರೆ ಎಂದು ಹೇಳಬಹುದು.


Click it and Unblock the Notifications
