ಜರ್ಮನಿಯಲ್ಲಿ ಮತ್ತೆ ಕೊರೊನಾ ಸೋಂಕು ಹೆಚ್ಚಳ: ನ್ಯೂಯಾರ್ಕ್‌ನಲ್ಲಿ ಕಡಿಮೆ

ನ್ಯೂಯಾರ್ಕ್, ಜೂನ್ 9: ಜರ್ಮನಿಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಳವಾಗಿದ್ದು ನ್ಯೂಯಾರ್ಕ್‌ನಲ್ಲಿ ಕೊಂಚ ಕಡಿಮೆಯಾಗಿದೆ.

Recommended Video

      ವಿಶ್ವ ಸಂಸ್ಥೆಯಿಂದ ಮತ್ತೋಂದು ಎಚ್ಚರಿಕೆ | WHO About Corona Again!!

      ವಿಶ್ವದಾದ್ಯಂತ ಇಂದಿಗೆ ಒಟ್ಟು 7,119,736 ಮಂದಿ ಕೊರೊನಾ ಸೋಂಕಿತರಿದ್ದಾರೆ. 406,542 ಮಂದಿ ಸಾವನ್ನಪ್ಪಿದ್ದಾರೆ. ಜರ್ಮನಿಯಲ್ಲಿ ದಿನನಿತ್ಯ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿದೆ. ಜಾನ್ ಹಾಪ್‌ಕಿನ್ಸ್ ವಿಶ್ವ ವಿದ್ಯಾಲಯ ಮಾಹಿತಿ ಪ್ರಕಾರ 186,109 ಮಂದಿ ಕೊರೊನಾ ಸೋಂಕಿತರಿದ್ದಾರೆ.

      ಕೊರೊನಾ ಸೋಂಕು 1.05 ರಿಂದ ಒಂದೇ ದಿನಕ್ಕೆ 1.11ಕ್ಕೆ ಏರಿಕೆಯಾಗಿದೆ. ಹಂಗರಿ ತನ್ನ ಗಡಿ ಪ್ರದೇಶವನ್ನು ಸಂಪೂರ್ಣವಾಗಿ ಲಾಕ್‌ಡೌನ್‌ನಿಂದ ಮುಕ್ತವಾಗಿಸಿದೆ. ಇಂಡೋನೇಷ್ಯಾವು ವಿಮಾನ ಸಂಚಾರಕ್ಕೆ ಅನುಮತಿ ನೀಡಲು ನಿರ್ಧರಿಸಿದೆ. ಹಾಗೆಯೇ ದೇಶದ ಆರ್ಥಿಕತೆಯನ್ನು ಪುನರಾರಂಭಿಸಲಿದೆ.

      Infections On The Rise In Germany New York Reports Lowest Infection

      ಇನ್ನು ಥೈಲೆಂಡ್‌ನಲ್ಲಿ ಸತತ 15 ದಿನಗಳಿಂದ ಯಾವುದೇ ಕೊರೊನಾ ವೈರಸ್‌ ಪ್ರಕರಣಗಳು ಪತ್ತೆಯಾಗಿಲ್ಲ. ಕ್ವಾರಂಟೈನ್‌ನಲ್ಲಿರುವ ಇಬ್ಬರಿಗೆ ಕೊರೊನಾ ಸೋಂಕು ಇರುವುದು ದೃಢಪಟ್ಟಿದೆ. ಆದರೂ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳಲಾಗುತ್ತಿದೆ.

      ಜಗತ್ತಿನಲ್ಲಿ ಅತಿ ಹೆಚ್ಚು ಕೊರೊನಾ ವೈರಸ್ ಕೇಸ್ ಹೊಂದಿರುವ ಅಮೆರಿಕದಲ್ಲಿ 2,026,493 ಜನರಿಗೆ ಸೋಂಕು ತಗುಲಿದೆ. ಇದುವರೆಗೂ 113,055 ಜನರು ಮೃತಪಟ್ಟಿದ್ದಾರೆ. ಅಮೆರಿಕ ಬಿಟ್ಟರೆ ಬ್ರೆಜಿಲ್, ರಷ್ಯಾ ಹಾಗೂ ಭಾರತದಲ್ಲಿ ಪ್ರಸ್ತುತ ಕೊರೊನಾ ವೈರಸ್ ಅಟ್ಟಹಾಸ ಮಾಡುತ್ತಿದೆ.

      ಆದರೆ, ಗಂಭೀರ ಪ್ರಕರಣಗಳ ವಿಚಾರದಲ್ಲಿ ಅಮೆರಿಕ ನಂತರದ ಸ್ಥಾನದಲ್ಲಿ ಭಾರತವಿದೆ ಎನ್ನುವುದು ಆಘಾತಕಾರಿ ಸಂಗತಿ. ಯುಎಸ್‌ನಲ್ಲಿ 1,139,958 ಕೇಸ್‌ಗಳು ಸಕ್ತಿಯವಾಗಿದೆ. ಅದರಲ್ಲಿ 16,907 ಜನರ ಆರೋಗ್ಯ ಸ್ಥಿತಿ ಗಂಭೀರವಾಗಿದೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+