Narendra Modi: ಭಾರತೀಯರಿಗೆ ಬಲ ತುಂಬಿದ ಪ್ರಧಾನಿ ನರೇಂದ್ರ ಮೋದಿ ರಷ್ಯಾ ಭೇಟಿ!

ಭಾರತ ಮತ್ತೊಮ್ಮೆ ಜಾಗತಿಕವಾಗಿ ತನ್ನ ಶಕ್ತಿ ಏನು? ಅನ್ನೋದನ್ನ ಅಮೆರಿಕ ಸೇರಿ ಜಗತ್ತಿಗೆ ಮನವರಿಕೆ ಮಾಡಿದೆ. ಆಧುನಿಕ ಭಾರತ ಬಲಿಷ್ಠವಾಗಿ & ಇಡೀ ಪ್ರಪಂಚವನ್ನೇ ಕಂಟ್ರೋಲ್ ಮಾಡುವ ಮಟ್ಟಕ್ಕೆ ಬೆಳೆದು ನಿಂತಿದೆ. ಅದರಲ್ಲೂ ಭಾರತದ ಮಾತನ್ನು, ದೊಡ್ಡ ದೊಡ್ಡ ದೇಶಗಳು ಕೈಕಟ್ಟಿ ಪಾಲನೆ ಮಾಡುತ್ತವೆ. ಹೀಗಿದ್ದಾಗ ಭಾರತದ ಆತ್ಮೀಯ ಗೆಳೆಯನಾಗಿರುವ ರಷ್ಯಾ ಇದೀಗ ಭಾರತದ ಪರವಾಗಿ ನಿರ್ಧಾರ ಕೈಗೊಂಡಿದೆ. ಈ ಮೂಲಕ ಪ್ರಧಾನಿ ನರೇಂದ್ರ ಮೋದಿ ಅವರು, ತಮ್ಮ ಗೆಳೆಯ ಹಾಗೂ ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಭೇಟಿಯನ್ನ ಮಾಡಿ ಬಂದ ನಂತರ ಭಾರತೀಯರಿಗೆ ಮೊದಲ ಗೆಲುವು ಸಿಕ್ಕಂತಾಗಿದೆ!

ರಷ್ಯಾ & ಉಕ್ರೇನ್ ನಡುವೆ ಭೀಕರ ಕಾಳಗ ನಡೆಯುತ್ತಿದ್ದು, ರಷ್ಯಾ ಪರ ಹೋರಾಡುತ್ತಿರುವ ಸೈನಿಕರು ಸಾಕಷ್ಟು ದೊಡ್ಡ ಪ್ರಮಾಣದಲ್ಲಿ ಜೀವ ಬಿಟ್ಟಿದ್ದಾರೆ. ಪರಿಸ್ಥಿತಿ ದಿನದಿಂದ ದಿನಕ್ಕೆ ಕೈಮೀರಿ ಹೋಗುತ್ತಿದ್ದು, ಏನು ಮಾಡಬೇಕು? ಎಂಬುದೇ ಈಗ ರಷ್ಯಾ ಸೇನೆಗೆ ತೋಚುತ್ತಿಲ್ಲ ಎಂದು ಅಮೆರಿಕ ಆರೋಪ ಮಾಡುತ್ತಿತ್ತು. ಪರಿಸ್ಥಿತಿ ಹೀಗಿದ್ದಾಗಲೇ ರಷ್ಯಾ ಸೇನೆಗೆ ಅತ್ಯಗತ್ಯ ಇರುವ ಸೈನಿಕರ ನೇಮಕಾತಿಗೆ ಭಾರತ ಮೂಲದ ಪ್ರಜೆಗಳನ್ನ ಕೂಡ ಕರೆದುಕೊಂಡು ಹೋಗಿ, ಯುದ್ಧ ಭೂಮಿಗೆ ಬಿಡಲಾಗಿತ್ತು ಎಂಬ ಆರೋಪ ಕೇಳಿಬಂದಿತ್ತು. ಈ ಬಗ್ಗೆ ಮಾಹಿತಿ ಪಡೆದ ಪ್ರಧಾನಿ ನರೇಂದ್ರ ಮೋದಿ ಅವರು ನೇರವಾಗಿ ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಅವರ ಬಳಿ ವಾಸ್ತವ ಪರಿಸ್ಥಿತಿ ತಿಳಿಸಿದರು.

Indians Got Very Big Support From Russia In This Matter After PM Narendra Modi Russia Visit

ಪ್ರಧಾನಿ ಮೋದಿ ಮಾತಿಗೆ ಪುಟಿನ್ ಮನ್ನಣೆ

ಭಾರತೀಯರನ್ನ ಯುದ್ಧ ಭೂಮಿಗೆ ಅಂದ್ರೆ ರಷ್ಯಾ & ಉಕ್ರೇನ್ ಯುದ್ಧದಲ್ಲಿ ಅಕ್ರಮವಾಗಿ, ರಷ್ಯಾ ಸೇನೆಗೆ ಸೇರಿಸಿಕೊಂಡು ಜೀವ ಬಲಿ ಪಡೆಯುತ್ತಿರುವ ಪ್ರಕರಣಗಳ ಬಗ್ಗೆ ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಮಾಹಿತಿ ಪಡೆದರು. ಹೀಗೆ ಮಾಹಿತಿ ಪಡೆದ ವ್ಲಾದಿಮಿರ್ ಪುಟಿನ್ ಅವರು, ತಕ್ಷಣದಿಂದ ಜಾರಿಗೆ ಬರುವಂತೆ ಭಾರತ ಮೂಲದ ಪ್ರಜೆಗಳನ್ನ ರಷ್ಯಾ ಸೇನೆಗೆ ಸೇರಿಸಬೇಡಿ. ಹಾಗೇ ಉಕ್ರೇನ್ ವಿರುದ್ಧ ಯುದ್ಧ ಭೂಮಿಯಲ್ಲಿ ಪರದಾಡುತ್ತಿರುವ ಭಾರತೀಯ ಸೈನಿಕರನ್ನ ರಿಲೀಸ್ ಮಾಡಿ, ಭಾರತಕ್ಕೆ ಅವರನ್ನ ಕಳುಹಿಸಿ ಎಂದು ಆದೇಶಿಸಿದ್ದರು ಪುಟಿನ್. ಈ ಕಾರ್ಯವು ಸಾಧ್ಯವಾಗಿದ್ದು ಭಾರತದ ಪ್ರಧಾನಿ ನರೇಂದ್ರ ಮೋದಿ ಅವರಿಂದ.

45 ಭಾರತೀಯರಿಗೆ ಬಿಡುಗಡೆ ಭಾಗ್ಯ

ಪ್ರಧಾನಿ ನರೇಂದ್ರ ಮೋದಿ ಅವರ ಮಾತಿಗೆ ಮಣಿದು, ಇದೀಗ ರಷ್ಯಾದಲ್ಲಿ ಯುದ್ಧಕ್ಕಾಗಿ ತಮ್ಮ ಜೀವದ ಹಂಗು ತೊರೆದು ಹೋರಾಟ ನಡೆಸುತ್ತಿದ್ದ ಸುಮಾರು 45 ಭಾರತೀಯರ ಬಿಡುಗಡೆ ಮಾಡಲಾಗಿದೆ. ಅಲ್ಲದೆ ಇನ್ನೂ 50 ಮಂದಿಯನ್ನು ಶೀಘ್ರದಲ್ಲೇ ಬಿಡುಗಡೆ ಮಾಡಲು ಇದೀಗ ತಯಾರಿ ನಡೆದಿದೆ ಎಂಬ ಮಾಹಿತಿ ಸಿಕ್ಕಿದೆ. ಜುಲೈ ತಿಂಗಳಲ್ಲಿ ರಷ್ಯಾ ಪ್ರವಾಸ ಕೈಗೊಂಡಿದ್ದರು ಪ್ರಧಾನಿ ನರೇಂದ್ರ ಮೋದಿ ಅವರು. ಇದೇ ಸಮಯದಲ್ಲಿ ಭಾರತೀಯ ಪ್ರಜೆಗಳನ್ನ ಸೇನೆಗೆ ಸೇರಿಸಿಕೊಳ್ಳಬಾರದು, ಈಗ ಯುದ್ಧ ಭೂಮಿಯಲ್ಲಿ ನಲುಗಿರುವ ಜನರನ್ನು ತಕ್ಷಣ ರಿಲೀಸ್ ಮಾಡಬೇಕು ಎಂದು ತಿಳಿಸಿದ್ದರು. ಆ ಪ್ರಕಾರವೇ ರಷ್ಯಾ ಇದೀಗ ನಡೆದುಕೊಳ್ಳುತ್ತಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+