ಭಾರತ ವಿರೋಧಿ ಮಾಲ್ಡೀವ್ಸ್ ಮಕಾಡೆ, ಹೆಂಗಾಗಿದೆ ನೋಡಿ ಪರಿಸ್ಥಿತಿ!

ಭಾರತವನ್ನು ಎದುರು ಹಾಕಿಕೊಳ್ಳುವ ಯಾರೇ ಆದರೂ ಪರದಾಡುವುದು ಪಕ್ಕಾ ಅನ್ನೋ ಮಾತು ಈಗ ಮತ್ತೆ ಪ್ರೂವ್ ಆಗಿದೆ. ಅದರಲ್ಲೂ ಭಾರತದ ವಿರೋಧ ಕಟ್ಟಿಕೊಂಡ ದ್ವೀಪ ರಾಷ್ಟ್ರ ಮಾಲ್ಡೀವ್ಸ್ ಇನ್ನೇನು ಆರ್ಥಿಕವಾಗಿ ಬೀದಿಗೆ ಬರೋದು ಬಾಕಿ ಉಳಿದಿದೆ. ಪ್ರವಾಸ ನಂಬಿ ಬದುಕುತ್ತಿರುವ ದ್ವೀಪ ರಾಷ್ಟ್ರಕ್ಕೆ ಈಗ ಭಾರತೀಯರೇ ಭರ್ಜರಿ ಶಾಕ್ ಕೊಟ್ಟಿದ್ದಾರೆ.

ಹೌದು, ಮಾಲ್ಡೀವ್ಸ್ ಭಾರತದ ವಿರೋಧ ಕಟ್ಟಿಕೊಂಡು ಸಮಸ್ಯೆ ಎದುರಿಸುತ್ತಿದೆ. ಇಷ್ಟಾದರೂ ದ್ವೀಪ ರಾಷ್ಟ್ರಕ್ಕೆ ಬುದ್ಧಿ ಬಂದಂತೆ ಕಾಣುತ್ತಿಲ್ಲ. ಅದರಲ್ಲೂ ಭಾರತದಿಂದ ಸಾಕಷ್ಟು ಸಹಾಯ ಪಡೆದು ಬದುಕಿದ್ದರೂ, ಚೀನಾ ಪರ ನಿಲ್ಲುತ್ತಿದೆ ಮಾಲ್ಡೀವ್ಸ್ ಎನ್ನುವ ಆರೋಪ ಕೇಳಿಬರುತ್ತಿದೆ. ಅದರಲ್ಲೂ ಮಾಲ್ಡೀವ್ಸ್ ನಡೆಗೆ ಭಾರತ ಕೂಡ ತಕ್ಕ ತಿರುಗೇಟು ನೀಡಿದೆ. ಹೀಗೆ ಎರಡೂ ದೇಶದ ನಡುವೆ ಸಂಬಂಧ ಕೂಡ ಹಾಳಾಗುತ್ತಿದೆ. ಹೀಗಿದ್ದಾಗಲೇ ಭಾರತೀಯರು ಕೂಡ ಭರ್ಜರಿಯಾಗಿ ಶಾಕ್ ಕೊಟ್ಟು, ಮಾಲ್ಡೀವ್ಸ್ ಬುಡವನ್ನೇ ಅಲ್ಲಾಡಿಸುತ್ತಿದ್ದಾರೆ. ಅದು ಹೇಗೆ ಗೊತ್ತೆ? ಬನ್ನಿ ತಿಳಿಯೋಣ.

Indian Tourist Count Is Reducing In Maldives Since Last 1 Month

ಬೀದಿಗೆ ಬೀಳುತ್ತಾ ಮಾಲ್ಡೀವ್ಸ್ ಆರ್ಥಿಕತೆ?

ಮೊದಲೇ ಹೇಳಿದಂತೆ ಮಾಲ್ಡೀವ್ಸ್ ದೇಶ ಪ್ರವಾಸೋದ್ಯಮ ನಂಬಿ ಬದುಕುತ್ತಿದೆ. ಹೀಗಿದ್ದಾಗ ಬಹುತೇಕ ಭಾರತೀಯರೇ ಮಾಲ್ಡೀವ್ಸ್ ಪ್ರವಾಸಕ್ಕೆ ಹೋಗಿ ಅಲ್ಲಿನ ಆರ್ಥಿಕ ಸ್ಥಿತಿಗೆ ಸಹಾಯ ಮಾಡುತ್ತಿದ್ದರು. ಆದರೆ ಯಾವಾಗ ಈ ಮಾಲ್ಡೀವ್ಸ್ ಜಗಳಕ್ಕೆ ಬಂತೋ, ಆಗ ಭಾರತೀಯರು ಕೂಡ ತಿರುಗಿಬಿದ್ದು ಮಾಲ್ಡೀವ್ಸ್‌ಗೆ ಬುದ್ಧಿ ಕಲಿಸುತ್ತಿದ್ದಾರೆ. ಇದರ ಪರಿಣಾಮವಾಗಿ ಇದೀಗ, ಮಾಲ್ಡೀವ್ಸ್ ಪ್ರವಾಸೋದ್ಯಮ ಕುಸಿತ ಕಾಣುತ್ತಿದೆಯಂತೆ! ಆ ಬಗ್ಗೆ ಹೊರಬಿದ್ದಿರುವ ಅಂಕಿ & ಅಂಶಗಳು ಇಲ್ಲಿವೆ ಮುಂದೆ ಓದಿ.

ಕಿರಿಕ್ ಮಾಡಿದ್ದ ಮಾಲ್ಡೀವ್ಸ್ ಅಧ್ಯಕ್ಷ

ಮಾಲ್ದೀವ್ಸ್‌ & ಭಾರತದ ನಡುವೆ ರಾಜತಾಂತ್ರಿಕ ಬಿಕ್ಕಟ್ಟು ಆರಂಭವಾದ ಬಳಿಕ ದ್ವೀಪರಾಷ್ಟ್ರಕ್ಕೆ ಭೇಟಿ ನೀಡುವ ಭಾರತದ ಪ್ರವಾಸಿಗರ ಸಂಖ್ಯೆ ಕುಸಿಯುತ್ತ ಸಾಗಿದೆ. ಮಾಲ್ದೀವ್ಸ್‌ಗೆ ಹೋಗುತ್ತಿದ್ದ ವಿದೇಶಿಯರ ಪೈಕಿ ಭಾರತದ ಪ್ರವಾಸಿಗರು ಮೊದಲ ಸ್ಥಾನದಲ್ಲಿ ಇದ್ದರು. ಹೀಗಿದ್ದಾಗ ಭಾರತದ ಜೊತೆಗೆ ಮಾಲ್ಡೀವ್ಸ್ ಕಿರಿಕ್ ಶುರುವಾಗಿತ್ತು. ಹೀಗಾಗಿ ಕಳೆದ 1 ತಿಂಗಳ ಅವಧಿಯಲ್ಲಿ ಭಾರಿ ಕುಸಿತ ಕಂಡಿದೆ ಭಾರತೀಯ ಪ್ರವಾಸಿಗರ ಸಂಖ್ಯೆ. ಮೊದಲ ಸ್ಥಾನದಿಂದ ಈಗ 5ನೇ ಸ್ಥಾನಕ್ಕೆ ಭಾರತ ಮೂಲದ ಪ್ರವಾಸಿಗರ ಸಂಖ್ಯೆ ಕುಸಿತ ಕಂಡಿದೆಯಂತೆ. ಈ ಮೂಲಕ ಭಾರತದ ಜೊತೆಗೆ ಕಿರಿಕ್ ಮಾಡಿದ್ದ ಮಾಲ್ಡೀವ್ಸ್ ಹೊಸ ಅಧ್ಯಕ್ಷನಿಗೆ ಶಾಕ್ ಸಿಕ್ಕಿದೆ.

ಭಾರತೀಯರು ಕೊಟ್ಟಿದ್ದಾರೆ ಭರ್ಜರಿ ಶಾಕ್!

ಅಷ್ಟಕ್ಕೂ 2024ರ ಜನವರಿ 1ರಿಂದ 28ರವರೆಗೂ ಒಟ್ಟಾರೆ 1.74 ಲಕ್ಷ ಪ್ರವಾಸಿಗರು ಮಾಲ್ದೀವ್ಸ್‌ಗೆ ಪ್ರವಾಸಕ್ಕೆ ಅಂತಾ ಬಂದಿದ್ದಾರೆ. ಈ ಪೈಕಿ ಭಾರತೀಯರ ಸಂಖ್ಯೆ 13,989 ಎನ್ನಲಾಗಿದೆ. ಈ ಮೂಲಕ ಮಾಲ್ಡೀವ್ಸ್‌ಗೆ ದೊಡ್ಡ ಆಘಾತ ಎದುರಾಗಿದೆ. ಇನ್ನು ಮಾಲ್ದೀವ್ಸ್‌ಗೆ ಭೇಟಿ ನೀಡಿದ ಪ್ರವಾಸಿಗರಲ್ಲಿ ರಷ್ಯಾ ಮೂಲದ ಪ್ರಜೆಗಳು 18,561ದ ಮೂಲಕ ಮೊದಲ ಸ್ಥಾನದಲ್ಲಿದ್ದಾರೆ. ಇಟಲಿ ಮೂಲದವರು 18,111, ಚೀನಾ ಮೂಲದವರು 16,529 & ಬ್ರಿಟನ್‌ ಮೂಲದ ಒಟ್ಟು 14,588 ಪ್ರವಾಸಿಗರು ಮಾಲ್ಡೀವ್ಸ್ ಪ್ರವಾಸಕ್ಕೆ ತೆರಳಿದ್ದಾರೆ ಎನ್ನಲಾಗಿದೆ.

Indian Tourist Count Is Reducing In Maldives Since Last 1 Month

ಕಳೆದ ವರ್ಷ ಎಷ್ಟಿತ್ತು ಸಂಖ್ಯೆ?

2023ರಲ್ಲಿ 17 ಲಕ್ಷಕ್ಕೂ ಹೆಚ್ಚು ಪ್ರವಾಸಿಗರು ಮಾಲ್ಡೀವ್ಸ್ ಪ್ರವಾಸ ಮಾಡಿದ್ದರಂತೆ. ಈ ಪೈಕಿ, ಭಾರತ ಮೂದಲ ಸುಮಾರು 2,09,198 ಪ್ರವಾಸಿಗರು ಮಾಲ್ಡೀವ್ಸ್ ದೇಶಕ್ಕೆ ಭೇಟಿ ನೀಡಿದ್ದರು. ಇನ್ನು ರಷ್ಯಾ ಮೂಲದ 2,09,146 & ಚೀನಾದಿಂದಲೇ 1,87,118 ಪ್ರವಾಸಿಗರು ತೆರಳಿದ್ದರಂತೆ. ಆದರೆ ಈ ಬಾರಿ ಸರಿಯಾದ ಪೆಟ್ಟು ಬೀಳುವುದು ಗ್ಯಾರಂಟಿ ಎನ್ನಲಾಗಿದೆ. ಇನ್ನು 2021 & 2022ರಲ್ಲಿ ಭಾರತದ 2.11 ಲಕ್ಷ ಹಾಗೂ 2.40 ಲಕ್ಷ ಪ್ರವಾಸಿಗರು ಮಾಲ್ಡೀವ್ಸ್ ಪ್ರವಾಸಕ್ಕಾಗಿ, ಭೇಟಿ ನೀಡಿದ್ದರು ಎನ್ನಲಾಗಿದೆ.

ಒಟ್ನಲ್ಲಿ ಮಾಲ್ಡೀವ್ಸ್‌ಗೆ ಈಗ ದೊಡ್ಡ ಸಂಕಷ್ಟ ಎದುರಾಗಿದ್ದು, ಆರ್ಥಿಕವಾಗಿ ಗಂಡಾಂತರ ಸೃಷ್ಟಿಯಾಗಿದೆ. ಆದ್ರೆ ಇಷ್ಟೆಲ್ಲಾ ನಡೆಯುತ್ತಿದ್ದರೂ ಮಾಲ್ಡೀವ್ಸ್ ಸರ್ಕಾರ ಮಾತ್ರ ಸುಮ್ಮನೆ ಕೂತಿದೆ. ಹೀಗಾಗಿ ಪರಿಸ್ಥಿತಿ ಕೈಮೀರಿ ಹೋಗುತ್ತಿದ್ದು, ಕೂಡಲೇ ಮಾಲ್ಡೀವ್ಸ್ ಇತ್ತ ಗಮನ ಹರಿಸಿ ಭಾರತದ ಎದುರು ಕ್ಷಮೆಯನ್ನು ಕೇಳಲಿ ಎಂಬ ಒತ್ತಾಯವು ಸ್ವತಃ ಮಾಲ್ಡೀವ್ಸ್‌ನಲ್ಲಿ ಈಗ ಕೇಳಿಬರುತ್ತಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+